Karnataka: ನೀವೀಗ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಬಹುದು. ನಿಮಗೆ ಅದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ ಎನ್ನುವುದು ರಾಜ್ಯದ ಜನತೆಗೆ(Kateel rant against Siddu) ಈಗಾಗಲೇ ಅರ್ಥವಾಗಿದೆ.
ಆದರೆ ಒಂದು ಮಾತು. ನನ್ನ ವಿರುದ್ಧದ ಕೋಪವನ್ನು ನಮ್ಮ ಪರಶು ರಾಮಸೃಷ್ಟಿ ಕರಾವಳಿಯ(Karavali) ಮೇಲಾಗಲೀ, ನಮ್ಮ ಯಕ್ಷಗಾನದ(Yakshagana) ಮೇಲಾಗಲೀ ತೋರಿಸಿ
ನಿಮ್ಮದು ಉತ್ತರ ಕುಮಾರನ ಪೌರುಷ ಎಂದು ಮತ್ತೆ ನಿರೂಪಿಸದಿರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ದ ರಾಜ್ಯ ಬಿಜೆಪಿ ರಾಜ್ಯಾದ್ಯಕ್ಷ ನಳಿನ್‌ಕುಮಾರ್ ಕಟೀಲ್(Nalin Kumar Kateel)ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಅವರು, ಅಂದಹಾಗೆ ನಿಮ್ಮ ಪಕ್ಷದ ಅಧ್ಯಕ್ಷರೇ ನಿಮ್ಮ ರಾಜಕೀಯದ ನಿವೃತ್ತ ಜೀವನಕ್ಕೆ ಅಣಿಮಾಡಿ ಕೊಡುತ್ತಿದ್ದಾರಂತೆ? ಕೋಲಾರದಲ್ಲಿ(Kolar) ನಿಮ್ಮಿಂದ ಸೋತ ನಾಯಕರೇ ನಿಮ್ಮ ವಿರುದ್ಧ ಕತ್ತಿ ಮಸೆದಿಟ್ಟಿದ್ದಾರೆ ಎಂಬ ಸುದ್ದಿ.
ಮಾಡಿದ ಪಾಪಗಳು ಕಡೆಯಲ್ಲಿ ಕಾಡುತ್ತವೆಯಲ್ಲವೇ ಸಿದ್ದರಾಮಯ್ಯನವರೇ? ತಮ್ಮ ರಾಜಕೀಯ ನಿವೃತ್ತ ಜೀವನಕ್ಕೆ ಶುಭ ಹಾರೈಕೆಗಳು.
ಏನೇ ಮಾಡಿದರೂ ಜಯಿಸಿಕೊಳ್ಳುತ್ತೇನೆ ಎಂಬ ಹುಂಬತನ ಬಿಟ್ಟುಬಿಡಿ ಸಿದ್ದರಾಮಯ್ಯನವರೇ. ನಾವು ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ(Kateel rant against Siddu) ಲೋಕಾಯುಕ್ತವನ್ನು ಮರುಸ್ಥಾಪಿಸಿದ್ದೇವೆ.
ಅದರ ಮೂಲಕವೇ ಕಾಂಗ್ರೆಸ್ ನಡೆಸಿದ ಎಲ್ಲ ಭ್ರಷ್ಟಾಚಾರದ ಕೆಲಸಕ್ಕೂ ಕೊನೆಯ ಮೊಳೆ ಹೊಡೆದು ರಾಜ್ಯದ ಜನರಿಗೆ ಸ್ವಚ್ಛ ಆಡಳಿತ ನೀಡಲಿದ್ದೇವೆ ಎಂದಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ, ಅನ್ನ ಭಾಗ್ಯ ಹಗರಣ, ವಕ್ಫ್ ಮಂಡಳಿ ಆಸ್ತಿ ಅವ್ಯವಹಾರ, ಅರ್ಕಾವತಿ ಭೂ ಹಗರಣ, ಬಿಬಿಎಂಪಿ(BBMP) ಅವ್ಯವಹಾರ, ತಮ್ಮ ಪುತ್ರನ ಸಂಸ್ಥೆಗೆ ಸರ್ಕಾರಿ ಕೆಲಸದ ಗುತ್ತಿಗೆ ನೀಡಿದ್ದು,
ಮೈಸೂರಿನ ಮರಳು ದಂಧೆ, ಇಂದಿರಾ ಕ್ಯಾಂಟೀನ್ ಹಗರಣ, ಕಡೆಗೆ ನಗರವನ್ನು ಸ್ವಚಾವಾಗಿಡಲು ಶ್ರಮಿಸುವ ಪೌರ ಕಾರ್ಮಿಕರ ಹೆಸರಲ್ಲೂ ನಕಲಿ ವೇತನ ಪಾವತಿ ನಿಮ್ಮ ಸಾಧನೆಯಲ್ಲವೇ?
ಅಭಿವೃದ್ಧಿ ವಿಷಯದಲ್ಲಿ ಮತ ಕೇಳಲು ಮುಖವಿಲ್ಲದ ಕಾಂಗ್ರೆಸ್ ಬಿಜೆಪಿಯ ಮೇಲೆ ದಿನಕ್ಕೊಂದು ರೀತಿಯ ಸುಳ್ಳು ಆರೋಪ ಮಾಡುತ್ತಿದೆ.

ಕಾಂಗ್ರೆಸ್(Congress) ಸರ್ಕಾರದಲ್ಲಿನ ಶಾಸಕರು ಮತ್ತು ಸಚಿವರ ಸ್ವಂತ ‘ಅಭಿವೃದ್ಧಿ’ ನೋಡಿಯೇ ಜನರು ನಿಮ್ಮನ್ನು ಮನೆಗೆ ಕಳುಹಿಸಿದ್ದಲ್ಲವೇ ಸಿದ್ದರಾಮಯ್ಯನವರೇ?
ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಲೇ ಇರುವ ಬಿಜೆಪಿಯ ಕೆಲಸಗಳಿಂದ ಹೆದರಿ,
ಚುನಾವಣೆ ಹತ್ತಿರ ಬಂದಂತೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಕಾಂಗ್ರೆಸ್. ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಅವತಾರ್ 2 ನಿಂದ ಮತ್ತೊಂದು ಭರ್ಜರಿ ದಾಖಲೆ : 2 ಮಿಲಿಯನ್ ಗಳಿಕೆಯನ್ನು ಮೀರಿತು ಚಿತ್ರ
ಮತ್ತೊಂದು ಟ್ವೀಟ್‌ನಲ್ಲಿ, ತಮ್ಮ ವಿರುದ್ಧದ ತನಿಖೆಗೆ ಭಯಪಟ್ಟು ರಾತ್ರೋರಾತ್ರಿ ದೇಶದ ಶಕ್ತಿಶಾಲಿ ತನಿಖಾ ಸಂಸ್ಥೆಯೆನಿಸಿದ್ದ ಲೋಕಾಯುಕ್ತಕ್ಕೆ ಬೀಗ ಜಡಿದು,
ಎಸಿಬಿ(ACB) ಎನ್ನುವ ಹಲ್ಲಿಲ್ಲದ ಸಂಸ್ಥೆ ಸ್ಥಾಪಿಸಿ ತಮ್ಮ ಮಾತು ಕೇಳುವ ಅಧಿಕಾರಿಗಳ ತಂದು ಕೂರಿಸಿದ್ದು ರಾಜ್ಯದ ಜನ ಮರೆತಿಲ್ಲ ಸಿದ್ದರಾಮಣ್ಣ!
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಲೋಕಕ್ಕೆ ತಿಳಿಯುವುದಿಲ್ಲವೇ? ಹಗರಣಗಳ ಸರಮಾಲೆಯನ್ನೇ ತೊಟ್ಟಿರುವ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯ ಹಗರಣಗಳನ್ನು ಮುಚ್ಚಿಹಾಕಲು ಪ್ರಯತ್ನ ಪಟ್ಟು, ಕಡೆಗೆ ತನಿಖಾ ಸಂಸ್ಥೆ ಲೋಕಾಯುಕ್ತವನ್ನೇ ಮುಚ್ಚಿಹಾಕಿದ್ದರು.
ಆದರೆ ಸಿದ್ದಣ್ಣ, ಮತ್ತೆ ಲೋಕಾಯುಕ್ತ ಮರುಸ್ಥಾಪನೆಯಾಗುತ್ತೆ, ಹಗರಣಗಳ ಮಾಲೆ ನೇಣು ಕುಣಿಕೆಯಾಗುತ್ತೆ ಎಂದೆಣಿಸಿರಲಿಲ್ಲ ಅನ್ಸುತ್ತೆ.
ಮಾನ್ಯ ಸಿದ್ದರಾಮಯ್ಯ ಅವರಿಗೆ ಗ್ರಹಗತಿಗಳೇ ಸರಿಯಿಲ್ಲ. ಅವರು ಅಧಿಕಾರದಲ್ಲಿದ್ದಾಗ ತಮ್ಮ ಸುತ್ತಲಿನ ಗ್ರಹಗಳೊಂದಿಗೆ ನಡೆಸಿದ ಹಗರಣದ ಪಾಪಗಳು ಈಗ ಅವರ ಸುತ್ತಲೇ ಸುತ್ತುತ್ತಿವೆ.
ಭ್ರಷ್ಟಾಚಾರದದ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುವ ಸಿದ್ದರಾಮಯ್ಯನವರು ಈಗ ಅವರೇ ನಡೆಸಿದ ಭ್ರಷ್ಟಾಚಾರದ ಬಗ್ಗೆ ಮಾತ್ರ ಬಾಯಿ ಮೇಲೆ ಬೆರಳಿಟ್ಟು ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.