ಮೇ 6ರಂದು ಕ್ಯಾಪಿಟಲ್ಸ್ Vs RCB ಪಂದ್ಯ: ಸವಾಲಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಕೇದರ್ ಜಾಧವ್

IPL 2023 : ಐಪಿಎಲ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಭವಿಷ್ಯವು ಅನಿಶ್ಚಿತವಾಗಿದೆ. RCR ತಂಡವು ಈಗಾಗಲೇ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಐದು (KedarJadhav entry for RCB) ಗೆಲುವುಗಳು ಮತ್ತು ನಾಲ್ಕು ಸೋಲಿನ ದಾಖಲೆಯೊಂದಿಗೆ 10 ಅಂಕಗಳನ್ನು ಗಳಿಸಿದ್ದಾರೆ, ಇದರಿಂದಾಗಿ ಅವರು ಋಣಾತ್ಮಕ ರನ್ ರೇಟ್ -0.030 ಹೊಂದಿದ್ದಾರೆ.

ಪರಿಣಾಮವಾಗಿ, ಅವರ ಮುಂಬರುವ ಪಂದ್ಯಗಳು ತಂಡಕ್ಕೆ ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿವೆ.

ಮೇ 6 ರಂದು RCB ಯ ದೆಹಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಮುಂಬರುವ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ (Arun Jaitley Stadium) ನಡೆಯಲಿದೆ.

ವರದಿಯ ಪ್ರಕಾರ, ಕೇದಾರ್ ಜಾಧವ್ (Kedar Jadhav) ಈ ಪಂದ್ಯದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಇದಕ್ಕೂ ಮೊದಲು, ಬೆಂಗಳೂರು ಮ್ಯಾನೇಜೆಂಟ್ ಐಪಿಎಲ್ 2023 ರ ಮರಾಠಿ ಕಾಮೆಂಟರಿ ಪ್ಯಾನೆಲ್‌ನಲ್ಲಿ (KedarJadhav entry for RCB) ಕಾಣಿಸಿಕೊಳ್ಳುತ್ತಿದ್ದ

ಕೇದಾರ್ ಜಾಧವ್ ಅವರನ್ನು ಆರ್‌ಸಿಬಿ ಆಟಗಾರ ಡೇವಿಡ್ ವಿಲೀ (David Willey) ಅವರ ಬದಲಿಗೆ ಆಯ್ಕೆ ಮಾಡಿದೆ.

ಗಾಯಗೊಂಡಿರುವ ಕಾರಣ ಡೇವಿಡ್ ವಿಲೀ ಐಪಿಎಲ್‌ನಿಂದ ಹೊರಗುಳಿದಿದ್ದರು.

ಇದನ್ನೂ ಓದಿ : https://vijayatimes.com/somanna-vs-puttarangashetty/


38ರ ಹರೆಯದ ಕೇದಾರ್ ಜಾಧವ್ ಇದೀಗ ಆರ್ ಸಿಬಿ ಕ್ಯಾಂಪ್ ಸೇರಿಕೊಂಡು ಅಭ್ಯಾಸ ಆರಂಭಿಸಿದ್ದಾರೆ. ಮೈದಾನದಲ್ಲಿ ಸಿಕ್ಸ್ ಬಾರಿಸುವ ಮೂಲಕ ತಾನು ಫಿಟ್ ಮತ್ತು ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದೇನೆ ಎಂದು ತೋರಿಸಿದ್ದಾರೆ.

ನಾನು ವಿಶ್ರಾಂತಿ ಪಡೆಯಲು ಬಯಸಿದ್ದೆ,ಆದರೆ, ನಂತರ ನಾನು ನನ್ನ ಫ್ಯಾಷನ್ ಕಳೆದುಕೊಳ್ಳುತ್ತಿದ್ದೇನೆ ಎಂದು ಮನವರಿಕೆಯಾಯಿತು.

ಈಗ ನಾನು ಕ್ರಿಕೆಟ್‌ಗೆ ಮರಳಿದ್ದೇನೆ”ಎಂದು RCB ತನ್ನ ಟ್ವಿಟರ್ (RCB) ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಕೇದಾರ್ ಜಾಧವ್ ಹೇಳಿದ್ದಾರೆ.

ನಾನು ಪ್ರಥಮ ದರ್ಜೆ ಕ್ರಿಕೆಟ್ ಕೂಡ ಆಡಿದ್ದೇನೆ ನಾನು ಅಲ್ಲಿ ಚೆನ್ನಾಗಿಆಟ ಆಡಿದ್ದೇನೆ. ನಂತರ ಕ್ರಿಕೆಟ್‌ಗೆ ಮರಳಿದೆ. ನನಗೆ ಕ್ರಿಕೆಟ್ ಆಡಲು ಹೆಚ್ಚು ಇಷ್ಟ ಇದೆ.

“ನನಗೆ ಹೆಚ್ಚಿನ ಅಂಕಗಳು ಪಡೆಯಬೇಕೆಂಬ ಹಸಿವಾಗಿದೆ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ ಎಂದು ಜಾಧವ್ ಹೇಳಿದರು.

ಸದ್ಯ rcb ತಂಡದಲ್ಲಿ ಫಾಪ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ (Virat Kohli) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಬಿಟ್ಟರೆ ಇತರೆ ಯಾವ ಬ್ಯಾಟರ್ ಕೂಡ ಹೆಚ್ಚೇನು ಅಬ್ಬರಿಸುತ್ತಿಲ್ಲ.

ಕೇದರ್ ಜಾಧವ್ ಆರ್‌ಸಿಬಿ ತಂಡದಲ್ಲಿ ಮಧ್ಯಮ ಕ್ರಮಾಂಕದ ಬಲ ತುಂಬಲಿದ್ದಾರೆ. ಹೀಗಾಗಿ ಜಾಧವ್ 4 ಅಥವಾ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳು ಜಾಸ್ತಿ ಇದೆ.

Exit mobile version