ಸೋರುತ್ತಿದೆ 5,000 ಕೋಟಿ ರೂಪಾಯಿ ವೆಚ್ಚದ, ಪ್ರಧಾನಿ ಉದ್ಧಾಟಿಸಿದ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 !

Bengaluru : ಉರಿ ಬಿಸಿಲಿನ ಮಧ್ಯೆ ಸುರಿದ ಮಳೆ ಬೆಂಗಳೂರು ಮಂದಿಗೆ ಖುಷಿ ಕೊಟ್ಟಿದೆ. ಆದ್ರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದು ಬ್ಯಾಡ್‌ ನ್ಯೂಸ್ ಆಗಿದೆ. ಯಾಕಂದ್ರೆ ಮೇ 2 ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport Bengaluru) ಹೊಸ ಟರ್ಮಿನಲ್‌ 2ನ ಮೇಲ್ಛಾವಣಿಯಲ್ಲಿ ಸೋರಿಕೆ ಪ್ರಾರಂಭವಾಗಿದೆ.


2 ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಟರ್ಮಿನಲ್-2 ಉದ್ಘಾಟನೆ ಮಾಡಿದ್ದರು. ಕೇವಲ 30 ನಿಮಿಷಗಳ ಕಾಲ ಸುರಿದ ಮಳೆಗೆ ಟರ್ಮಿನಲ್‌-2 ರಲ್ಲಿ ನೀರು ತುಂಬಿಕೊಂಡಿದೆ. ಈ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ಮೇಲ್ಛಾವಣಿ ಸೋರುತ್ತಿದ್ದು ಸಿಬ್ಬಂದಿ ಮತ್ತು ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ.

ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಮಳೆ ನೀರನ್ನು ಸ್ವಚ್ಛಗೊಳಿಸುವ ವಿಡಿಯೋ ಹರಿದಾಡುತ್ತಿದೆ.
ಕೇವಲ ಅರ್ಧ ಗಂಟೆ ಮಳೆಗೆ ಟರ್ಮಿನಲ್‌ 2ರಲ್ಲಿ ಸೋರಿಕೆ ಉಂಟಾಗಿ ವಿಮಾನ ನಿಲ್ದಾಣದ ನೈರ್ಮಲ್ಯ ಸಿಬ್ಬಂದಿಗಳು ಮತ್ತು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದರು .

ಇದನ್ನೂ ಓದಿ : https://vijayatimes.com/karnataka-state-education-department/

2022ರ ನವೆಂಬರ್ 11ರಂದು ಈ ಟರ್ಮಿನಲ್ ಅನಾವರಣಗೊಂಡಿತ್ತು ನಂತರ 2023 ಜನವರಿ 15 ರಂದು ವಿಮಾನ ಹಾರಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆದ್ರೆ ಆರಂಭದಿಂದಲೂ ಟರ್ಮಿನಲ್‌ 2 ರಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂಬ ಕೂಗು ಕೇಳಿ ಬರುತ್ತಿತ್ತು. ಆಗ ಅಧಿಕಾರಿಗಳು ಅದನ್ನು ಒಪ್ಪಿಕೊಳ್ಳದೆ ಅಹಂಕಾರದ ಮಾತುಗಳನ್ನಾಡಿದರು.

ಆದ್ರೆ ಈಗ ಕಳಪೆ ಕಾಮಗಾರಿಯ ಬಣ್ಣ ಬಯಲಾಗಿದೆ. ಈಗ ಅಧಿಕಾರಿಗಳು ಮೂಲಸೌಕರ್ಯಗಳ ಸಮಸ್ಯೆಯನ್ನು ಒಪ್ಪಿಕೊಂಡು ಅದನ್ನು ಸರಿಪಡಿಸುವ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಹೇಳಿರುವ ಪ್ರಕಾರ ಹೊಸ ಟರ್ಮಿನಲ್‌ನ ಕರ್ಬ್‌ಸೈಡ್‌ನಲ್ಲಿ ನೀರು ಸೋರಿಕೆಯಾಗಿದೆ.

ಇದನ್ನೂ ಓದಿ : https://vijayatimes.com/the-kerala-story-2/

ವಿಮಾನ ನಿಲ್ದಾಣದ (Airport) ಸುತ್ತಮುತ್ತಲಿನ ಪ್ರದೇಶಗಳಲ್ಲಿ 25 ಮಿಮೀ ಮಳೆಯನ್ನು ಹವಾಮಾನ ವರದಿಗಳು ದಾಖಲಿಸಿವೆ ಆದರೆ ರಾತ್ರಿ 7 ರಿಂದ 10 ರವರೆಗೆ ಕನಿಷ್ಠ 9.8 ಮಿಮೀ ಮಳೆಯನ್ನು ವಿಮಾನ ನಿಲ್ದಾಣವು ದಾಖಲಿಸಿದೆ. 5000 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಟರ್ಮಿನಲ್‌-2 ಸೋರಿಕೆ ವಿಷುವಲ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್‌ (Viral) ಆಗಿದ್ದು, ಬಾರೀ ಟೀಕೆಗೆ ಒಳಗಾಗಿದೆ.

ಇದು 40% ಕಮಿಷನ್‌ ಕೆಲಸದ ಕರಾಮತ್ತಾ? ಅನ್ನೋ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಏನೇ ಆಗಲಿ, ಅಷ್ಟು ಬೃಹತ್ ಮೊತ್ತದಲ್ಲಿ ಕಾಮಗಾರಿ ನಡೆಸಿದರೂ ಕೇವಲ ಒಂದು ಮಳೆಗೆ ಸೋರಿಕೆಯಾಗುತ್ತಿರುವುದು ವಿಪರ್ಯಾಸವೇ ಆಗಿದೆ

Exit mobile version