ಗರ್ಭಧಾರಣೆ ಬಗ್ಗೆ ಇರುವ ಕೆಲವು ವಿಚಿತ್ರ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ

Health Tips : ಗರ್ಭಧಾರಣೆ(Pregnancy) ಎನ್ನುವುದು ಮಹಿಳೆಯ ಜೀವನದ ಅತೀ ಸಂತಸದ ಕ್ಷಣವಾಗಿರುವುದು. ಗರ್ಭಧಾರಣೆ ತಿಳಿಯಲು(Know More About Pregnancy) ಹಿಂದಿನ ಕಾಲದಿಂದಲೂ ಹಲವಾರು ವಿಧಾನಗಳನ್ನು ಅಳವಡಿಸಿಕೊಂಡು ಬರಲಾಗುತ್ತಾ ಇದೆ. ಆದರೆ ಗರ್ಭಧಾರಣೆ ಬಗ್ಗೆ ತಿಳಿಯದೆ ಇರುವಂತಹ ಹಲವಾರು ವಿಚಾರಗಳಿವೆ.

ಇಲ್ಲಿರುವಂತಹ ಕೆಲವೊಂದು ವಿಚಿತ್ರ ವಿಚಾರಗಳು ನೀವು ಗರ್ಭಧಾರಣೆಯನ್ನು ನೋಡುವಂತಹ ದೃಷ್ಟಿಕೋನವನ್ನೇ ಬದಲಾಯಿಸಲಿದೆ. ಇದು ಕೇವಲ ಮನುಷ್ಯರ ಗರ್ಭಧಾರಣೆ(Know More About Pregnancy) ಮಾತ್ರವಲ್ಲ, ಪ್ರಾಣಿಗಳ ಗರ್ಭಧಾರಣೆಗೂ ಸಂಬಂಧಿಸಿದೆ.


ಹೆಣ್ಣು ಕಾಂಗರೂಗಳು ಯಾವಾಗಲೂ ಗರ್ಭಿಣಿಯಾಗಿರುವುದು : ಹೆಣ್ಣು ಕಾಂಗರೂಗಳು ಯಾವಾಗಳು ಗರ್ಭಿಣಿಯಾಗಿ ಇರುವುದು ಎಂದು ನಿಮಗೆ ತಿಳಿದಿದೆಯಾ? ಬರಗಾಲ ಅಥವಾ ಕ್ಷಾಮದ ಸಂದರ್ಭದಲ್ಲಿ ಮಾತ್ರ ಹೆಣ್ಣು ಕಾಂಗರೂಗಳು ತಮ್ಮ ಗರ್ಭಧಾರಣೆ ತಡೆಯುತ್ತದೆ.

https://youtu.be/UJ3flOQeLBE ಸಮಾಜಮುಖಿ ಕೆಲಸದಲ್ಲಿ ಖುಷಿ ಕಾಣುತ್ತಿರುವ ಸರ್ವಕನಸು ತಂಡ!


ಕಪ್ಪೆ ದೇಹಕ್ಕೆ ಮೂತ್ರ ಸೇರಿಸಿ ಗರ್ಭಧಾರಣೆ ಪರೀಕ್ಷೆ : 1960ರ ದಶಕದಲ್ಲಿ ಈ ಅಚ್ಚರಿಯ ಕ್ರಮವನ್ನು ಜನರು ಪಾಲಿಸಿಕೊಂಡು ಹೋಗುತ್ತಲಿದ್ದರು. ಇದರ ಮೂಲಕವಾಗಿ ಗರ್ಭಿಣಿ ಹೌದೇ ಅಥವಾ ಅಲ್ಲವಾ ಎನ್ನುವುದನ್ನು ತಿಳಿಯುತ್ತಲಿದ್ದರು.

ಮಹಿಳೆಯ ಮೂತ್ರವನ್ನು ಆಫ್ರಿಕಾದ ಹೆಣ್ಣು ಕಪ್ಪೆಗೆ ಇಂಜೆಕ್ಷನ್ ಮೂಲಕ ನೀಡಲಾಗುತ್ತಿತ್ತು. ಮುಂದಿನ ಕೆಲವು ಗಂಟೆಗಳಲ್ಲಿ ಕಪ್ಪೆಯು ಅಂಡೋತ್ಪತ್ತಿ ಮಾಡುತ್ತದೆಯಾ ಅಥವಾ ಇಲ್ಲವಾ ಎನ್ನುವುದರ ಮೇಲೆ ಇದನ್ನು ನಿರ್ಧರಿಸಲಾಗುತ್ತಿತ್ತು.


ತಾಯಿಯ ಚೇತರಿಕೆಗೆ ಭ್ರೂಣವು ನೆರವಾಗುವುದು : ವಿಜ್ಞಾಣಿಗಳು(Scientists) ಹೇಳುವ ಪ್ರಕಾರ ಮಹಿಳೆಯ ಯಾವುದೇ ಅಂಗಾಂಶಗಳು ,

ಅಥವಾ ಕೋಶಕ್ಕೆ ಗರ್ಭಧಾರಣೆ ವೇಳೆ ಹಾನಿಯಾದರೆ ಆಗ ಭ್ರೂಣವು ಇದನ್ನು ಸರಿಪಡಿಸಲು ಕಾಂಡಕೋಶಗಳನ್ನು ಕಳುಹಿಸಿಕೊಡುವುದು.

ಇದನ್ನೂ ಓದಿ : https://vijayatimes.com/review-of-appu-gandadagudi/


ಮೆದುಳು ಸತ್ತು ಹೋಗಿದ್ದರೂ ಜನ್ಮ ನೀಡಿದ ಮಹಿಳೆ : 1991ರಲ್ಲಿ ಗ್ಯಾಬಿ ಸೈಗಲ್ ಎಂಬ ಮಹಿಳೆಯು ಗರ್ಭಿಣಿ ಆಗಿದ್ದ ವೇಳೆ ಮೆದುಳು ಸತ್ತುಹೋಗಿತ್ತು.

ಮೂರು ತಿಂಗಳ ಕಾಲ ಮಹಿಳೆಯನ್ನು ಕೃತಕವಾಗಿ ಜೀವಂತವಾಗಿರಿಸಲಾಗಿತ್ತು. ಇದರ ಬಳಿಕ ಆ ಮಹಿಳೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದರು.


ಸೊಳ್ಳೆಗಳು ಹೆಚ್ಚಾಗಿ ಗರ್ಭ ಧರಿಸಿರುವ ವೇಳೆ ರಕ್ತ ಹೀರುವುದು : ವಿಜ್ಞಾನಿಗಳು ಪತ್ತೆ ಹಚ್ಚಿರುವಂತಹ ವಿಚಾರವೆಂದರೆ ಸೊಳ್ಳೆಗಳು ಸಾಮಾನ್ಯವಾಗಿ ಗರ್ಭ ಧರಿಸಿರುವ ವೇಳೆ ಹೆಚ್ಚು ರಕ್ತ ಹೀರುತ್ತವೆ.

ಇದನ್ನೂ ಓದಿ : https://vijayatimes.com/how-to-control-excess-sweat/


ಗರ್ಭಿಣಿ ಎಂದು ನಿರಾಕರಿಸುವುದು ದೊಡ್ಡ ಚಿಂತೆ : ಅಧ್ಯಯನಗಳು ಹೇಳುವ ಪ್ರಕಾರ ಗರ್ಭ ಧರಿಸಿದ್ದೇನೆ ಎಂದು ನಿರಾಕರಿಸುವುದು ನಿಜವಾದ ಸಮಸ್ಯೆಯಂತೆ. ಯಾಕೆಂದರೆ 2500ರಲ್ಲಿ ಒಬ್ಬ ಮಹಿಳೆ ತಾನು ಗರ್ಭಿಣಿ ಎನ್ನುವುದನ್ನು ನಿರಾಕರಿಸುತ್ತಾರಂತೆ.

Exit mobile version