ಹೆಣ್ಣಾಗಿ ಹುಟ್ಬಾರ್ದು ಈ ಗ್ರಾಮದಲ್ಲಿ ; ಕೊಪ್ಪಳ ಜಿಲ್ಲೆಯಲ್ಲಿದೆ ಹೆಣ್ಣಿಗೆ ಶಾಪವಾಗಿದ್ದ ಊರು, ಆ ಊರು ಯಾವುದು ?

devadasi

ಈ ಊರಲ್ಲಿ ಹೆಣ್ಣಾಗಿ(Girl) ಹುಟ್ಟೋದು ಒಂದು ಶಾಪವಾಗಿದೆ. ಹೌದು, ಹೆಣ್ತನ ಇಲ್ಲಿನ ಮಕ್ಕಳಿಗೆ(Kids) ಸಿಕ್ಕ ಕಠಿಣಶಿಕ್ಷೆ. ಕರಾಳ ಬದುಕಿಗೆ ರಹದಾರಿ. ಇಲ್ಲಿ ಹೆಣ್ಣಾಗಿ ಹುಟ್ಟಿದ ಮಗುವಿಗೆ ಜೀವನದೂದ್ದಕ್ಕೂ ನೆಮ್ಮದಿಯ ಬದುಕಿಲ್ಲ. ಈ ಕಂಗಳಿಗೆ ಕನಸು ಕಾಣೋ ಹಕ್ಕುಗಳಿಲ್ಲ. ಸ್ವತಂತ್ರ ಬಾಳಿನ ಅಧಿಕಾರವಂತು ಇಲ್ಲವೇ ಇಲ್ಲ ಬಿಡಿ. ಇಲ್ಲಿನ ತಾಯಿ ತನ್ನ ಗರ್ಭದಲ್ಲಿ ಹೆಣ್ಣು ಹುಟ್ಟಬಾರದೂ ಎಂದೇ ದೇವರಲ್ಲಿ ಬೇಡುತ್ತಿದ್ಲು. ತನಗಾದ ನೋವು, ತನಗಾದ ಸಂಕಷ್ಟ, ತನಗಾದ ಅನ್ಯಾಯ ತನ್ನ ಮಗಳಿಗೆ ಆಗೋದು ಬೇಡ ಅಂತಲೇ ಪ್ರಾರ್ಥಿಸುತ್ತಿದ್ಲು. ಅಂಥ ಭಯದ ಭೀತಿ ಯಾಕೆ ಕಾಡುತ್ತಿತ್ತು ಗೊತ್ತಾ?

ಜನ್ಮತಾಳಿದ ಹೆಣ್ಣು ಮಗು ಇಲ್ಲಿ ದೇವದಾಸಿಯಾಗಬೇಕು! ಹೌದು, ಕೊಪ್ಪಳ(Koppala) ಜಿಲ್ಲೆಯ(District) ಹಿರೇ ಸಿಂಧೋಗಿ(Heere Sindhogi) ಅನ್ನೋ ಊರಲ್ಲಿ ಹುಟ್ಟಿದ ಪ್ರತಿ ಹೆಣ್ಣು ಮಗುವನ್ನು ದೇವರಿಗೆ ಅರ್ಪಿಸಲಾಗುತ್ತಿತ್ತು. ಪ್ರತಿ ಹೆಣ್ಣು ಮಗುವನ್ನು ದೇವದಾಸಿಯಾಗಿ ಪರಿವರ್ತಿಸಲಾಗುತ್ತಿತ್ತು. ಮುತ್ತು ಕಟ್ಟಿ ಆಕೆಯನ್ನು ದೇವರ ಸೇವೆಗೆ ಮೀಸಲಿಡಲಾಗುತ್ತಿತ್ತು. ಒಮ್ಮೆ ದೇವದಾಸಿಯಾದ್ರೆ ಆಕೆಯನ್ನು ಯಾರೂ ಮದುವೆಯಾಗುವಂತಿರಲ್ಲಿಲ್ಲ.
ಈ ಬಗ್ಗೆ ಮಾತನಾಡಿರುವ ದೇವದಾಸಿ ಮಹಿಳೆ, ಹಿರೇ ಸಿಂಧೋಗಿಯ ಈ ಗ್ರಾಮದ ಪ್ರತಿ ದಲಿತ ಮಹಿಳೆಯನ್ನು ದೇವದಾಸಿಯನ್ನಾಗಿ ಮಾಡಲಾಗುತ್ತಿತ್ತು.

ಆಕೆ ಒಪ್ಪಲಿ ಬಿಡಲಿ, ಆಕೆಯನ್ನು ದೇವರಿಗೆ ಒಪ್ಪಿಸಲಾಗುತ್ತಿತ್ತು. ಆ ಮೂಲಕ ಪರೋಕ್ಷ ಆಕೆಯನ್ನು ವೇಶ್ಯಾವಾಟಿಕೆ ವೃತ್ತಿಗೆ ತಳ್ಳಲಾಗುತ್ತಿತ್ತು. ಬಡತನ, ಅನಕ್ಷರತೆಯಿಂದ ನರಳುತ್ತಿದ್ದ ದಲಿತ ಮಹಿಳೆಯರೇ ಈ ಅನಿಷ್ಟ ಪದ್ಧತಿಗೆ ತುತ್ತಾಗುತ್ತಿದ್ರು. ಈ ದೇವದಾಸಿ ಮಹಿಳೆಯರು ಜೀವನದಲ್ಲಿ ಪಡಬಾರದ ಕಷ್ಟ ಅನುಭವಿಸಿದ್ರು. ಅನುಭವಿಸಬಾರದ ಅವಮಾನ ಉಂಡ್ರು. ಈಗಲೂ ಆ ನೋವನ್ನು ಅನುಭವಿಸುತ್ತಲೇ ಇದ್ದಾರೆ.

1982 ರಲ್ಲಿ ರಾಜ್ಯದಲ್ಲಿ ಕರ್ನಾಟಕ ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಜಾರಿಯಾಯ್ತು. ಆದ್ರೆ, ಆ ಬಳಿಕ ಸಂಪೂರ್ಣ ಅಲ್ಲದಿದ್ರೂ ಇದಕ್ಕೆ ಹಂತ ಹಂತವಾಗಿ ದೇವದಾಸಿ ಪದ್ಧತಿಗೆ ಕಡಿವಾಣ ಬೀಳುತ್ತಲಿದೆ. ಈಗ ದೇವದಾಸಿ ಮಹಿಳೆಯರೇ ತಮ್ಮ ಮಕ್ಕಳಿಗೆ ಮದುವೆ ಮಾಡಿಸುತ್ತಿದ್ದಾರೆ. ತಮ್ಮನ್ನಾವರಿಸಿದ ಮೌಢ್ಯದಿಂದ ಹೊರಬಂದು ಬದಲಾಗುತ್ತಿದ್ದಾರೆ. ದುರಂತ ಅಂದ್ರೆ ಬದಲಾವಣೆಯ ಗಾಳಿಯ ಮಧ್ಯೆ ದೇವದಾಸಿ ಪದ್ಧತಿ ಹೊಸ ರೂಪದಲ್ಲಿ ಇಂದು ಚಾಲ್ತಿಯಲ್ಲಿದೆ. ಇದು ನೋವು ಕೊಡುವ ಸಂಗತಿ ಅಂತ ಹೇಳ್ತಿದ್ದಾರೆ ಸಾಮಾಜಿಕ ಹೋರಾಟಗಾರ ಆನಂದ್‌ ಅವರು.

ಈ ಕುರಿತು ಮಾತನಾಡಿದ ಸಾಮಾಜಿಕ ಹೋರಾಟಗಾರ ಆನಂದ್‌,
ಅಲ್ಲದೆ ದೇವದಾಸಿ ಮಹಿಳೆಯರ ಪುನರ್ವಸತಿಗೆ ಹಾಗೂ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಆದ್ರೆ ಸಮಾಜ ಮತ್ತು ಸರ್ಕಾರಿ ವ್ಯವಸ್ಥೆಗಳು ಮಾತ್ರ ಅವರನ್ನು ಇಂದಿಗೂ ಕೀಳಾಗಿ ಕಾಣುತ್ತಿದೆ. ಶಾಲೆ, ಉದ್ಯೋಗ ಮುಂತಾದ ಕಡೆ ಸೇರುವಾಗ ತಂದೆಯ ಹೆಸರು ಕಾಲಂ ತುಂಬಿಸಲು ಹೇಳಿ ಮತ್ತೆ ಮತ್ತೆ ಅವರನ್ನು ಅವಮಾನಿಸುತ್ತಿದೆ. ಇನ್ನು ದೇವದಾಸಿ ಮಹಿಳೆಯರನ್ನು ಮದುವೆಯಾದ್ರೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತೆ. ಆದ್ರೆ ಅಲ್ಲೂ ದಲ್ಲಾಳಿಗಳ ಕಾಟ ತಪ್ಪಿಲ್ಲ. ಕಮಿಷನ್ ದಂಧೆಯಿಂದ ಅಲ್ಲೂ ಈ ಅಸಹಾಯಕ ಮಹಿಳೆಯರಿಗೆ ಅನ್ಯಾಯ ಆಗ್ತಿದೆ.

ದೇವದಾಸಿ ಮಹಿಳೆಯರಿಗೆ ತಲುಪಬೇಕಾದ ಸೌಲಭ್ಯಗಳು ತಳಮಟ್ಟದವರೆಗೆ ತಲುಪುತ್ತಲೇ ಇಲ್ಲ. ಇದು ನಮ್ಮ ವ್ಯವಸ್ಥೆಯ ದುರಂತ. ಇನ್ನು ದೇವದಾಸಿ ಮಹಿಳೆಯರಿಗೆ ಜಮೀನು ಕೊಡುವ ಯೋಜನೆಯಂತೂ ಹಗರಣಗಳ ಕೂಪ ಆಗಿದೆ. ದುರಂತ ಅಂದ್ರೆ ಇವರಿಗೆ ಬರಬೇಕಾದ ಮಾಶಾಸನವೂ ಇನ್ನೂ ಬಂದಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ದೇವದಾಸಿ ಮಹಿಳೆಯರು ಧರಣಿ ಬೇರೆ ಮಾಡಿದ್ರು.

ಕಾನೂನು ಇದೆ, ಸರ್ಕಾರದ ಕಲ್ಯಾಣ ಯೋಜನೆಗಳಿವೆ, ಸಾವಿರಾರು ಕೋಟಿ ಅನುದಾನ ವ್ಯಯವಾಗುತ್ತಿದೆ! ಆದ್ರೆ ದೇವದಾಸಿಯರ ಬದುಕು ಇನ್ನೂ ಹಸನಾಗುತ್ತಿಲ್ಲ ಯಾಕೆ? ಇನ್ನೂ ಈ ಪದ್ಧತಿ ಜಾರಿಯಲ್ಲಿದ್ರೂ ಕಠಿಣವಾಗಿ ಕಡಿವಾಣ ಬೀಳುತ್ತಿಲ್ಲ ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸ್ಪಷ್ಟವಾಗಿ ಸಿಗಬೇಕಾಗಿದೆ……..

Exit mobile version