ಒಕ್ಕಲಿಗರು ಹೀನ ಸಂಸ್ಕೃತಿಯುಳ್ಳವರು : ಪ್ರೊ. ಕೆ.ಎಸ್.ಭಗವಾನ್ ರಿಂದ ಒಕ್ಕಲಿಗರ ಅವಹೇಳನ

Mysore: ಒಕ್ಕಲಿಗ ಸಮುದಾಯದವರು ಹೀನ ಸಂಸ್ಕೃತಿಯುಳ್ಳವರು ಅಥವಾ ಸಂಸ್ಕೃತಿಹೀನರು (KS Bhagawan Viral Statement) ಎಂದು ಮೈಸೂರಿನ ಪ್ರಗತಿಪರ ಚಿಂತಕ ಪ್ರೊ.

ಕೆ.ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಪ್ರೊ. ಕೆ.ಎಸ್. ಭಗವಾನ್ ಇದೀಗ ಒಕ್ಕಲಿಗ (Vokkaligas) ಸಮುದಾಯದ ಕುರಿತು

ನೀಡಿರುವ ಈ ಅವಹೇಳನಕಾರಿ ಹೇಳಿಕೆಗೆ (KS Bhagawan Viral Statement) ಎಲ್ಲೆಡೆಯಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಮೈಸೂರಿನ ಪುರಭವನದಲ್ಲಿ ಅಕ್ಟೋಬರ್ 13ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೆ.ಎಸ್.ಭಗವಾನ್ ಅವರು, ಒಕ್ಕಲಿಗರು ಸಂಸ್ಕೃತಿ ಹೀನರು ಅಥವಾ ಅವರು ಹೀನ

ಸಂಸ್ಕೃತಿಯುಳ್ಳವರು. ಇದನ್ನು ನಾನು ಹೇಳಿಲ್ಲ, ಮಹಾನ್ ಕವಿ ಹಾಗೂ ಲೇಖಕ ಕುವೆಂಪು (Kuvempu) ಅವರೇ ಹೇಳಿದ್ದಾರೆ. ಕುವೆಂಪು ಅವರು ಹೇಳಿರುವುದನ್ನು ನಾನು ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ

ಅಷ್ಟೇ ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೆ.ಎಸ್.ಭಗವಾನ್ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಜನಾಕ್ರೋಶವನ್ನು

ಒಗ್ಗೂಡಿಸುವಂಥದ್ದಾಗಿದೆ. ಹೀಗಾಗಿ ಮೈಸೂರಿನಲ್ಲಿರುವ ಕೆ.ಎಸ್.ಭಗವಾನ್ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆಯನ್ನು (Police Control) ನೀಡಲಾಗಿದೆ. ಒಕ್ಕಲಿಗ ಸಮುದಾಯ ಕುರಿತು

ಕೆ.ಎಸ್.ಭಗವಾನ್ ನೀಡಿರುವ ಅವಹೇಳನಕಾರಿ ಹೇಳಿಕೆಗೆ ಇಡೀ ಒಕ್ಕಲಿಗ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬೇರೆ ಸಮುದಾಯಗಳನ್ನು ಅವಹೇಳನ ಮಾಡುವ ಅಂತ ನೀಚ

ಮನಸ್ಥಿತಿಯ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಪ್ರಭು ಶ್ರೀರಾಮನ ಕುರಿತು ಅವಹೇಳನ :


ಮಂಡ್ಯ (Mandya) ಜಿಲ್ಲೆಯ ಕೆ.ಆರ್. ಪೇಟೆ (K R Pete) ತಾಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತಮಾಡಿದ್ದ ಕೆ.ಎಸ್.ಭಗವಾನ್, ದೇವರೆಂದು ಪೂಜಿಸುವ ಶ್ರೀರಾಮನು ಮದ್ಯ ಸೇವಿಸುತ್ತಿದ್ದ,

ಯೋಚನಾ ಶಕ್ತಿಯಿಲ್ಲದ ಆತ ಸ್ವಂತ ಹೆಂಡಿತಿಯನ್ನೇ ಕಾಡಿಗೆ ಕಳುಹಿಸಿದ್ದ ಎಂದು ಅವಹೇಳನ ಮಾಡಿದ್ದನು. ಈ ಹೇಳಿಕೆಯ ವಿರುದ್ದ ಹಿಂದೂಪರ ಸಂಘಟನೆಗಳು, ಪೊಲೀಸ್ ಠಾಣೆಯಲ್ಲಿ ದೂರು

ದಾಖಲಿಸಿ, ಭಗವಾನ್ ನನ್ನು ಬಂಧಿಸುವಂತೆ ಆಗ್ರಹಿಸಿದ್ದವು.

ಆಗ, ಚುನಾವಣೆಗೆ (Election) ಇನ್ನು ಕೆಲವೇ ತಿಂಗಳುಗಳು ಬಾಕಿ ಇದ್ದಿದ್ದರಿಂದಾಗಿ ಭಗವಾನ್ ಅವರು ಬೇಕೆಂತಲೇ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂಥ ವಿವಾದಾತ್ಮಕ (Controversial Statement)

ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಹೇಳಿದ್ದರು.

ಇದನ್ನು ಓದಿ: ಮೈಸೂರು ದಸರಾ ಆರಂಭಕ್ಕೂ ಮುನ್ನ ಸಂಭವಿಸಿದ ಅವಘಡ: ಕುಸಿದು ಬಿತ್ತು ದಸರಾ ದೀಪಾಲಂಕಾರ ಕಂಬ

Exit mobile version