ಬಿಜೆಪಿ ಸರಕಾರದ ವಿರುದ್ಧ ಇರುವ 40 ಪರ್ಸೆಂಟ್​ ಆರೋಪದ ಬಗ್ಗೆ ತನಿಖೆ ನಡೆಸಿ: ಕಾಂಗ್ರೆಸ್​ಗೆ ಕುಮಾರಸ್ವಾಮಿ ಸವಾಲು

Ramanagar: ಬಿಜೆಪಿ(BJP) ಸರಕಾರದ ವಿರುದ್ಧ 40% ಆರೋಪ ಮಾಡಿದ ಬಗ್ಗೆ ಕಾಂಗ್ರೆಸ್ (Kumaraswamy challenge to Congress) ನಾಯಕರು ಸಾಬೀತು ಮಾಡಿದ್ದಾರಾ?

ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆಯೇ? ಈಗ ನನಗೆ ಪುಕ್ಕಟೆ ಸಲಹೆ ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ (JDS) ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ

(HD Kumaraswamy) ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೇಸ್ ಸರ್ಕಾರದ ವಿರುದ್ಧ ಮಾಡಿದ 45 ಪರ್ಸೆಂಟ್ ಆರೋಪ ಸಂಬಂಧ ಆರೋಪವನ್ನು ಲೋಕಾಯುಕ್ತಕ್ಕೆ ವರದಿ ಮಾಡಲಿ ಎಂದು ಈ ಹಿಂದೆ ನಿಖಿಲ್ ಕುಮಾರಸ್ವಾಮಿಗೆ (Nikhil kumaraswamy)

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shiva Kumar) ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಿಜೆಪಿ ಸರ್ಕಾರದ ಮೇಲೆ ನೀವು ಮಾಡಿದ 40 ಪರ್ಸೆಂಟ್ ಆರೋಪವನ್ನು

ತನಿಖೆ ಮಾಡುವಂತೆ ಸವಾಲು (Kumaraswamy challenge to Congress) ಹಾಕಿದರು.

ಇದನ್ನು ಓದಿ: ಪತಿ ತನ್ನ ಹೆಂಡತಿಯ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸಿದರೆ ಅದು ಎಂದಿಗೂ ಬೇನಾಮಿ ಅಲ್ಲ ಎಂದ ಕೋರ್ಟ್!

ರಾಮನಗರ (Ramanagara) ಜಿಲ್ಲೆ ಚನ್ನಪಟ್ಟಣದಲ್ಲಿ (Channapattana) ಮಾತನಾಡಿದ ಅವರು, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಶೇ.40ರಷ್ಟು ವಿಚಾರವನ್ನು ತನಿಖೆ ನಡೆಸಿ,

ಸತ್ಯಾಸತ್ಯತೆಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಆರೋಪಿಯ ಸಾಕ್ಷ್ಯವನ್ನು ಪ್ರಶ್ನಿಸಿದ ಅವರು, ಗುತ್ತಿಗೆದಾರರ ಸಂಘದವರು ದೂರು ದಾಖಲಿಸಿದ್ದಾರೆಯೇ

ಅಥವಾ ಸಾಕ್ಷ್ಯ ನೀಡಿದ್ದಾರೆಯೇ ಎಂದು ವಿಚಾರಿಸಿದರು. ಅಲ್ಲದೆ, ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಅಡ್ಡಿಪಡಿಸಿದವರು ಯಾರು ಎಂದು ಪ್ರಶ್ನಿಸಿದರು.

ಬಿಬಿಎಂಪಿಯ 675 ಕೋಟಿ ರೂ.ಗಳ ಎಲ್​ಒಸಿ ಬಿಡುಗಡೆ ಮಾಡಿಲ್ಲ ಯಾಕೆ?

ಮೇ 8 ರಂದು ಮಹಾನಗರ ಪಾಲಿಕೆಗೆ 675 ಕೋಟಿ ಎಲ್‌ಒಸಿ (LOC) ಹಣವನ್ನು ಏಕೆ ಬಿಡುಗಡೆ ಮಾಡಿಲ್ಲ,ಹಣವನ್ನು ಏಕೆ ತಡೆಹಿಡಿಯಲಾಗಿದೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಅವರನ್ನು ಒತ್ತಾಯಿಸಿದರು.

ಶಕ್ತಿ ಯೋಜನೆ ಜಾರಿಯಿಂದ ಕೆಎಸ್​ಆರ್​ಟಿಸಿಗೆ ನಷ್ಟ :

ಕುಮಾರಸ್ವಾಮಿ ಅವರು ಶಕ್ತಿ ಯೋಜನೆ ಜಾರಿಯಿಂದ ಕೆಎಸ್‌ಆರ್‌ಟಿಸಿ(KSRTC) ನಷ್ಟದ ವಿಚಾರವನ್ನು ಪ್ರಸ್ತಾಪಿಸಿದರು. ಸಂಭಾವ್ಯ ಆರ್ಥಿಕ ಹೊರೆಯ ಬಗ್ಗೆ ತಿಳಿದಿದ್ದರೂ,

ಅವರು ಈ ಯೋಜನೆಯನ್ನು ಪ್ರಾರಂಭಿಸಿದರು. ಯಾವುದೇ ಷರತ್ತುಗಳಿಲ್ಲದೆ ಚುನಾವಣೆಗೂ ಮುನ್ನ ಭರವಸೆ ನೀಡಲಾಗುತ್ತಿದ್ದು, ಕಾಂಗ್ರೆಸ್​ನವರ ಶಕ್ತಿ ಯೋಜನೆ (Shakti Scheme0 ಬಗ್ಗೆ ನಾನು ಟೀಕೆ ಮಾಡುವುದಿಲ್ಲ.

ಆದರೆ, ಈಗ ಅಧಿಕಾರ ಹಿಡಿದ ಬಳಿಕ ಷರತ್ತುಗಳನ್ನು ವಿಧಿಸಲಾಗುತ್ತಿದೆ. ಆದರೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನೆಗಳಿಗೆ ನಿಮಗಳನ್ನು ಹಾಕುತ್ತಿದ್ದಾರೆ.

ಅಂದು ಜನರಿಗೆ ಯಾವ ಭರವಸೆ ನೀಡಿದ್ದರೋ ಅದನ್ನೇ ಜಾರಿ ಮಾಡುವಂತೆ ಒತ್ತಾಯಿಸುತ್ತೇನೆ ಎಂದರು.

ಸಚಿವ ಮಹದೇವಪ್ಪ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು :

ಡಾ.ಹೆಚ್​.ಸಿ.ಮಹದೇವಪ್ಪ(Dr H C Mahadevappa) ಈ ಹಿಂದೆ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರು ಮನುವಾದಿಗಳು ಎಂಬ ಹೇಳಿಕೆ ನೀಡಿದ್ದರು ಅವರ ಹೇಳಿಕೆಗೆ ತಿರುಗೇಟು ನೀಡಿದ

ಕುಮಾರಸ್ವಾಮಿ,ಮನುವಾದ ಪದವನ್ನು ಇನ್ನೂ ಎಷ್ಟು ವರ್ಷ ಬಳಕೆ‌ ಮಾಡುತ್ತೀರಿ?ಈಗ ನೀವು ಅಧಿಕಾರದಲ್ಲಿ ಇದ್ದೀರಲ್ಲಾ ಈಗ ಸರಿ‌ ಮಾಡಿ ಎಂದು ಟಾಂಗ್​ ಕೊಟ್ಟರು.

ಈ ಮೊದಲು ನೀವು ಅಧಿಕಾರದಲ್ಲಿದ್ದಾಗ ಯಾಕೆ ಮನುವಾದ ಸರಿಪಡಿಸಲಿಲ್ಲ. ನೀವು ಅಧಿಕಾರದಲ್ಲಿದ್ದಾಗ ಹಾಗಾದರೆ ಏನು ಸರಿ ಮಾಡಿದ್ದೀರಿ?

ಮನುವಾದ ಎಂಬ ಪದ ನಿಮ್ಮ ರಾಜಕೀಯಕ್ಕೆ ಶಕ್ತಿ ತುಂಬಲು ಬೇಕಿದೆ ಎಂದು ಹೇಳಿದರು.

ಬಿಜೆಪಿಯವರ ಹೇಳಿಕೆ ಬಾಲಿಶವಾದುದು: ಕುಮಾರಸ್ವಾಮಿ

ಗ್ಯಾರಂಟಿ ಪದವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು, ಯೋಜನೆಗೆ ಹಣಕಾಸು ಒದಗಿಸಲು ಅಸಾಧ್ಯವಾಗಿದೆ ಎಂದು ಹೇಳುವುದಲ್ಲ ಸರ್ಕಾರವು ಮನಸ್ಸು ಮಾಡಿದರೆ ಯೋಜನೆಗೆ ಹಣಕಾಸು ಹೊಂದಿಸುವುದು ಕಷ್ಟವಾಗಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನು ಓದಿ: 101 ಮಿಲಿಯನ್ ಜನರಿಗೆ ಡಯಾಬಿಟಿಸ್ ; ಮಧುಮೇಹಿಗಳ ತವರೂರಾಗುತ್ತಿದೆ ಭಾರತ !

ನಾನೂ ಕೂಡ ಸ್ವಲ್ಪ ದಿನ ಸರ್ಕಾರ ನಡೆಸಿದ್ದೇನೆ, ನನಗೂ ಕೂಡ ಅನುಭವವಿದೆ.ಸರ್ಕಾರದಲ್ಲಿ ಯಾವುದೇ ಯೋಜನೆ ತಂದರೂ ಕೂಡ ಹಣ ಒದಗಿಸಲು ಸಾಧ್ಯವಿದೆ.

ಸರಿಯಾದ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಂಡರೆ ಹಣ ಹೊಂದಿಸಬಹುದು ಎಂದರು.

ರಶ್ಮಿತಾ ಅನೀಶ್

Exit mobile version