ಶಿಕ್ಷಕರೇ ಇಲ್ಲ : ಕಲ್ಯಾಣ ಕರ್ನಾಟಕದಲ್ಲಿ 19 ಸಾವಿರ ಶಿಕ್ಷಕರ ಕೊರತೆ ಇದ್ದು, ಮಕ್ಕಳಿಗೆ ಶಿಕ್ಷಣ ಸಿಗ್ತಿಲ್ಲ

Kalaburagi: ರಾಜ್ಯದಲ್ಲಿ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಕಲ್ಯಾಣ ಕರ್ನಾಟಕ (lack of teachers) ಭಾಗದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಹುದ್ದೆ ಭಾರಿ

ಪ್ರಮಾಣದಲ್ಲಿ ಖಾಲಿ ಇರುವುದರಿಂದ ಶಿಕ್ಷಣ ಅಭಿವೃದ್ಧಿಗೆ ಬಲವಾದ ಹೊಡೆತ ಬಿದ್ದಿದೆ. ಎಲ್ಲಾ ರೀತಿಯ ಅಭಿವೃದ್ಧಿಯಲ್ಲೂ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಶಿಕ್ಷಣದ ವಿಚಾರದಲ್ಲೂ

ಅನ್ಯಾಯವಾಗುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ 19 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸರಕಾರಿ ಶಾಲೆಗಳಲ್ಲಿ ಹಲವು

ವರ್ಷಗಳಿಂದ ಶಿಕ್ಷಕರಿಲ್ಲದೆ ಮಕ್ಕಳ (lack of teachers) ವಿದ್ಯಾಭ್ಯಾಸವೂ ಕುಂಠಿತಗೊಂಡಿದೆ.

ಈ ಭಾಗದ 7 ಜಿಲ್ಲೆಗಳಲ್ಲಿಒಟ್ಟು 19 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದು, ಇದರಲ್ಲಿ 15,698 ಸಾವಿರ ಪ್ರಾಥಮಿಕ ಮತ್ತು 3,309 ಪ್ರೌಢ ಶಾಲಾ ಶಿಕ್ಷಕರ ಹುದ್ದೆ ಖಾಲಿ ಇವೆ.

ಇದರಿಂದ ಸರ್ಕಾರಿ ಶಾಲಾ ಶಿಕ್ಷಣ ಕುಸಿಯುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕಲ್ಬುರ್ಗಿಯ (Kalaburagi) ಶಿಕ್ಷಣ ಇಲಾಖೆಯ ಅಪರಾ ಆಯುಕ್ತರ ಕಚೇರಿಯ

ಅಂಕಿ ಅಂಶಗಳ ಪ್ರಕಾರ 19 ಸಾವಿರ ಶಿಕ್ಷಕರ ಕೊರತೆಯ ಜೊತೆಗೆ 241 ಮುಖ್ಯಗುರುಗಳು 8 ಬಿಇಒ (BEO) ಹುದ್ದೆಗಳೂ ಖಾಲಿ ಇದ್ದು, ಶಿಕ್ಷಕರಿಲ್ಲದ ಸರಕಾರಿ ಶಾಲಾ ಶಿಕ್ಷಣ ಸೊರಗಿದೆ.

ಇನ್ನು ಆಡಳಿತ ಉಸ್ತುವಾರಿ ನೋಡಿಕೊಳ್ಳುವವರು ಯಾರು ಇಲ್ಲದೇ ಪಾರ್ಶ್ವವಾಯು ಹೊಡೆದಂತಾಗಿದೆ.

ಎಸ್ಸೆಸ್ಸೆಲ್ಸಿ (SSLC) ಮತ್ತು ಪಿಯುಸಿ (PUC) ಫಲಿತಾಂಶದಲ್ಲಿ ಪ್ರತಿ ವರ್ಷವು ಕೊನೆ ಸ್ಥಾನದಲ್ಲಿರುವ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲೇ ಶಿಕ್ಷಕರ ಹುದ್ದೆ ಖಾಲಿಯಿರುವುದು

ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿರುವುದು ಗಾಯದ ಮೇಲೆ ಬರೆ ಎಳೆದಂತಿದೆ. ಶಿಕ್ಷಕರು ಇಲ್ಲದಿರುವುದರಿಂದ ಮಕ್ಕಳು ಕಲಿಯುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡಿದ್ದು, 2022ರಲ್ಲಿ

ಕಲಬುರಗಿ, ಬೀದರ್‌ (Bidar), ಯಾದಗಿರಿ, ಬಳ್ಳಾರಿ (Ballary) ಮತ್ತು ಕೊಪ್ಪಳ, ರಾಯಚೂರು (Raichuru), ವಿಜಯನಗರ ಸೇರಿ ಕಲ್ಯಾಣ ಕರ್ನಾಟಕ ಭಾಗದ ಎಸ್ಸೆಸ್ಸೆಲ್ಸಿ

ಫಲಿತಾಂಶ ಶೇ 87 ರಷ್ಟಿದ್ದು, ಇನ್ನು 2023ರಲ್ಲಿ ಶೇ 82ಕ್ಕೆ ಕುಸಿದಿದೆ.

ಯಾದಗಿರಿ (Yadagiri) ಜಿಲ್ಲೆಯ ಫಲಿತಾಂಶ ಆತಂಕ ಹುಟ್ಟಿಸುತ್ತಿದ್ದು, 2022ರಲ್ಲಿಈ ಜಿಲ್ಲೆಯ ಫಲಿತಾಂಶ ಶೇ 81 ಇದ್ದರೆ, ಈ ಬಾರಿ ಶೇ 73ಕ್ಕೆ ಕುಸಿದಿದೆ. ಹಿಂದಿನ ವರ್ಷಗಳಿಗೆ

ಹೋಲಿಸಿದರೆ ಈ ಬಾರಿ ಹೆಚ್ಚು ಶಿಕ್ಷಕರು ವರ್ಗಾವಣೆ ಮತ್ತು ನಿವೃತ್ತಿಯಿಂದ ಹೆಚ್ಚು ಹುದ್ದೆಗಳು ಖಾಲಿಯಾಗಿರುವುದು ಜಿಲ್ಲೆಯಲ್ಲಿ ಮತ್ತಷ್ಟು ಕಳವಳ ಉಂಟು ಮಾಡಿದೆ.

ಈ ಭಾಗದ ಮಕ್ಕಳಿಗೆ ಗಣಿತ, ವಿಜ್ಞಾನ ವಿಷಯಗಳು ಕಬ್ಬಿಣದ ಕಡಲೆಯಾಗಿದ್ದು, ಹೆಚ್ಚು ವಿದ್ಯಾರ್ಥಿಗಳು ಇದೇ ವಿಷಯದಲ್ಲಿ ಫೇಲ್‌ (Fail) ಆಗುತ್ತಿದ್ದಾರೆ. ಪೂರ್ಣ ಪ್ರಮಾಣದ ಶಿಕ್ಷಕರು

ಇಲ್ಲದಿರುವುದರಿಂದ ಅರ್ಧದಷ್ಟು ಪ್ರಮಾಣದಲ್ಲಿಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದು, ಶಿಕ್ಷಕರಿಗೆ ಕೆಲವೆಡೆ ಹೆಚ್ಚುವರಿ ಪ್ರಭಾರ ನೀಡಲಾಗಿದೆ. ಶಿಕ್ಷಕರು ಇದ್ದರೂ ಈ ವಿಷಯದಲ್ಲಿ ಮಕ್ಕಳು

ಸೌಜನ್ಯಗೆ ನ್ಯಾಯ ಕೊಡಿ: ‘ಸೌಜನ್ಯ ಕೇಸ್ ಮುಗಿದ ಅಧ್ಯಾಯ’ ಸಂಚಲನ ಸೃಷ್ಟಿಸಿದೆ ಗೃಹಸಚಿವ ಪರಮೇಶ್ವರ್ ಹೇಳಿಕೆ

ಅನುತ್ತೀರ್ಣ ಆಗುತ್ತಿದ್ದಾರೆ. ಇಂಥದರಲ್ಲಿಈ ವಿಷಯ ಬೋಧಿಸುವ ಶಿಕ್ಷಕರೇ ಇಲ್ಲದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯ ಏನಾಗಬೇಕು ಎನ್ನುವ ಪ್ರಶ್ನೆ ಎದುರಾಗಿದ್ದು, ಅಧಿಕ ಸಂಖ್ಯೆಯಲ್ಲಿ

ಹುದ್ದೆ ಖಾಲಿ ಇರುವುದು ಮಕ್ಕಳ ಶಿಕ್ಷಣ ಮತ್ತು ಅವರ ಉಜ್ವಲ ಭವಿಷ್ಯಕ್ಕೂ ಬಲವಾದ ಹೊಡೆತ ನೀಡಿದೆ ಎನ್ನುತ್ತಾರೆ ಶಿಕ್ಷಣ ತಜ್ಞರು.

ಹುದ್ದೆಗಳ ವಿವರ:
ಜಿಲ್ಲೆ – ಪ್ರಾಥಮಿಕ – ಪ್ರೌಢ
ಕಲ್ಬುರ್ಗಿ : 2,693 – 417
ಬಳ್ಳಾರಿ: 1,841 -422
ಬೀದರ್‌: 1,132 -312
ಕೊಪ್ಪಳ: 2,215 – 455
ವಿಜಯ ನಗರ: 1468 – 274
ರಾಯಚೂರ: 3,549 – 776
ಯಾದಗಿರಿ : 2,800 -653
ಒಟ್ಟು: 15,698 – 3,309

ಕೆಕೆಆರ್‌ಡಿಬಿ (KKRDB) ಅಧ್ಯಕ್ಷ, ಡಾ. ಅಜಯಸಿಂಗ್‌ (Dr. Ajaysingh) ಅವರು ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು.

ಗ್ಯಾಪ್‌ ಫಿಲ್ಲಿಂಗ್‌ಗಾಗಿ (Gap Filling) ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವಕಾಶ ಇದ್ದು, ಈ ಬಗ್ಗೆ ಶಿಕ್ಷಕರ ನೇಮಕಾತಿಗೆ

ಕ್ರಮ ಕೈಗೊಳ್ಳಲಾಗುವುದು. ಈ ಬಾರಿ ಎಸ್ಸೆಸ್ಸೆಲ್ಸಿ (SSLC) ಫಲಿತಾಂಶ ವೃದ್ಧಿಗೆ ತಜ್ಞರೊಂದಿಗೆ ಚರ್ಚಿಸಿ ಯೋಜನೆ ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version