Dharwad: 11 ವರ್ಷಗಳ ಹಿಂದೆ ಧರ್ಮಸ್ಥಳ (Dharmasthala) ಸಮೀಪದ ಮಣ್ಣಸಂಕ ಬಳಿ ಸಂಭವಿಸಿದ ಸೌಜನ್ಯಾ (justice for soujanya case) ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು
ಮರು ತನಿಖೆಗೊಳಪಡಿಸಲು ತೀವ್ರ ಹೋರಾಟ ನಡೆಯುತ್ತಿರುವಾಗಲೇ ಸರ್ಕಾರ ಮರು ತನಿಖೆ ಅಸಾಧ್ಯ ಎಂದು ತಿಳಿಸಿದೆ. ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಅವರು ಈ ಕುರಿತು
ಮಾತನಾಡಿದ್ದು, ಈ ಪ್ರಕರಣ ಕಾನೂನಾತ್ಮಕವಾಗಿ ಮುಗಿದು ಹೋಗಿದೆ. ಈ ಪ್ರಕರಣಕ್ಕೂ ಸರ್ಕಾರಕ್ಕೂ (justice for soujanya case) ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಈ ಮೂಲಕ ಸೌಜನ್ಯಾ (Soujanya) ಹತ್ಯೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ವಿವಿಧ ವೇದಿಕೆಗಳಲ್ಲಿ ಹರಡುತ್ತಿರುವ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಧಾರವಾಡದಲ್ಲಿ (Dharwad)
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು ಪ್ರಕರಣದ ಮರು ತನಿಖೆ ಅಸಾಧ್ಯ ಎಂದು ತಿಳಿಸಿದ್ದಾರೆ. ಸರ್ಕಾರವು ಪ್ರಕರಣವನ್ನು ಪುನಃ ತೆರೆಯುವ ಯಾವುದೇ ಪ್ರಸ್ತಾಪ
ಹೊಂದಿಲ್ಲ ಎಂದು ಗೃಹ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಕೆಲವು ನ್ಯಾಯ ಪಂಡಿತರು ಕೂಡ ದೇಶದ ಪರಮೋಚ್ಚ ತನಿಖಾ ಸಂಸ್ಥೆ ಸಿಬಿಐಯೇ (CBI) ತನಿಖೆ ನಡೆಸಿದ ಬಳಿಕ ತಾಂತ್ರಿಕವಾಗಿ ಮತ್ತು
ಕಾನೂನಾತ್ಮಕವಾಗಿ ಮರುತನಿಖೆ ಅಸಾಧ್ಯ ಎಂದು ಹಿಂದೆಯೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕಾರ್ಕಳದ (Karkala) ಬೈಲೂರಿನ ಸಂತೋಷ್ ರಾವ್ (Santhosh Rao) ಅನ್ನು ಪ್ರಕರಣದ ಆರೋಪಿ ಎಂದು ಬಂಧಿಸಲ್ಪಟ್ಟಿದ್ದರು, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಿಡುಗಡೆಯಾದ ಬಳಿಕ
ಸೌಜನ್ಯಾ ಪ್ರಕರಣ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಸೌಜನ್ಯಾಗೆ ನ್ಯಾಯ ಕೊಡಿಸಬೇಕೆಂದು ತೀವ್ರ ಹೋರಾಟ ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ ಬೃಹತ್ ಸಭೆ ಆಯೋಜಿಸಲಾಗಿದ್ದು, ಇದರ ನಡುವೆಯೇ
ಸ್ವತಃ ಗೃಹ ಸಚಿವರೇ ಮರು ತನಿಖೆ ಸಾಧ್ಯ ಇಲ್ಲ ಎಂದಿರುವುದರಿಂದ ಕೊನೆಗೂ ಸೌಜನ್ಯಾಳನ್ನು ಕೊಂದದ್ದು ಯಾರು ಎನ್ನುವುದು ಪ್ರಶ್ನೆಯಾಗಿಯೇ ಉಳಿಯುವ ಸಾಧ್ಯತೆ ಇದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಸೌಜನ್ಯ ಪ್ರಕರಣ ತೀವ್ರ ಚರ್ಚೆಯಲ್ಲಿರುವ ವಿಚಾರವಾಗಿದ್ದು, ಸೌಜನ್ಯ ಪ್ರಕರಣ ಫೇಸ್‌ಬುಕ್ (Facebook), ಟ್ವಿಟರ್ (Tweeter) ಅಪ್ಲಿಕೇಶನ್‌ಗಳಲ್ಲಿ
‘ಜಸ್ಟಿಸ್ ಫಾರ್ ಸೌಜನ್ಯ’ (Justice For Soujanya) ಅಭಿಯಾನ ಆರಂಭ ಆಗಿದೆ. ನೆಟ್ಟಿಗರು ಈ ಕುರಿತು ಟ್ವೀಟ್ ಮಾಡಿ ಸಾಕಷ್ಟು ಕೋಪವನ್ನು ಹೊರಹಾಕುತ್ತಿದ್ದು, ಸೆಲೆಬ್ರಿಟಿಗಳೂ ಸಹ
ಈ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿರುವ ತಮ್ಮ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.
ವಾರಣಾಸಿಯಲ್ಲಿ ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ಸ್ಪರ್ಧೆ..! ಕಾಂಗ್ರೆಸ್ ಹೊಸ ಪ್ಲ್ಯಾನ್..!
ಪ್ರಕರಣ ಹಿನ್ನೆಲೆ:
2012ರ ಅಕ್ಟೋಬರ್ (October) 09ರಂದು ಈ ಘಟನೆ ನಡೆದಿದ್ದು, ಉಜಿರೆ (Ujire) ಎಸ್.ಡಿ.ಎಂ ಕಾಲೇಜು (SDM Collage) ವಿದ್ಯಾರ್ಥಿನಿ ಸೌಜನ್ಯ ಅವರನ್ನು ಅಪಹರಿಸಿ ಅತ್ಯಾಚಾರ ಹಾಗೂ ಕೊಲೆ
ಮಾಡಲಾಗಿತ್ತು. ಅದೇ ದಿನ ರಾತ್ರಿ ಮಿಸ್ಸಿಂಗ್ ಕೇಸ್ (Missing Case) ಕೂಡ ದಾಖಲಾಗಿಸಲಾಗಿತ್ತು. ಇನ್ನು 2012ರ ಅಕ್ಟೋಬರ್ 10 ರಂದು ಸೌಜನ್ಯ ಶವ ಧರ್ಮಸ್ಥಳ ಗ್ರಾಮದ ಮಣ್ಣಸಂಖದಲ್ಲಿ
ಪತ್ತೆಯಾಗಿತ್ತು. ಇನ್ನು ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಸಂತೋಷ್ ರಾವ್ (Santhosh Rao) ಅನ್ನು ನಿರ್ದೋಷಿ ಎಂದು ಕೋರ್ಟ್ (Court) ಇತ್ತೀಚೆಗೆ ಆದೇಶ ಹೊರಡಿಸಿತ್ತು.
ಹಾಗಾದರೆ ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳು ಯಾರು, ಸೌಜನ್ಯಳನ್ನು ಅಪಹರಿಸಿ ಕೊಲೆ ಮಾಡಿದವರು ಯಾರು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುವಂತೆ ಮಾಡಿದ್ದು, ಈ ಕೇಸ್ ಗೆ ಸಂಬಂಧಪಟ್ಟ
ಆರೋಪಿಗಳನ್ನು ಪತ್ತೆ ಮಾಡಿ ಅವರಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ.
ಭವ್ಯಶ್ರೀ ಆರ್.ಜೆ