ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಲಿಂಬಾವಳಿ ಹೆಸರು

Ramnagar: ಮಾಜಿ ಸಚಿವ ಅರವಿಂದ್ ಲಿಂಬಾವಳಿ(Arvind limbavali) ಸೇರಿದಂತೆ ಒಟ್ಟು 6 ಜನ ಗಣ್ಯರ ಹೆಸರನ್ನು ಬರೆದಿಟ್ಟು ತನ್ನ ಕಾರಿನಲ್ಲೇ ಗುಂಡು ಹಾರಿಸಿಕೊಂಡು ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಕರುಣಾಜನಕ ಘಟನೆ ಬೆಂಗಳೂರು(Limbavali’s name in death note) ದಕ್ಷಿಣ ತಾಲೂಕು ನೆಟ್ಟಗೆರೆಯ ಬಳಿಯಲ್ಲಿ ನಡೆದಿದೆ.

ಹೊಸ ವರ್ಷಾಚರಣೆಗಾಗಿ ಕುಟುಂಬ ಸಮೇತ ರಾಮನಗರದ(Ramnagar) ಕಗ್ಗಲೀಪುರ ಸಮೀಪದ ನೆಟ್ಟಗೆರೆ ಸಮೀಪದ ರೆಸಾರ್ಟ್ ಗೆ ಬಂದಿದ್ದ ಉದ್ಯಮಿ ಪ್ರದೀಪ್, ಬೆಳಗ್ಗೆ ಶಿರಾಗೆ ಹೋಗುವುದಾಗಿ ಹೇಳಿ ರೆಸಾರ್ಟ್ ನಿಂದ ಭಾನುವಾರ ಬೆಳಗ್ಗೆ ಒಬ್ಬರೇ ಬೆಂಗಳೂರಿನ ತಮ್ಮ ನಿವಾಸಕ್ಕೆ ಹೋಗಿ ಡೆತ್ ನೋಟ್ ಬರೆದಿದ್ದಾರೆ.

ಬಳಿಕ ರೆಸಾರ್ಟ್(Resort) ಗೆ ವಾಪಸ್ ಬರುವಾಗ ಕಾರಿನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಡೆತ್ ನೋಟ್ ನಲ್ಲಿ ತಮ್ಮ ಸಾವಿಗೆ ಕಾರಣವೇನೆಂದು ತಿಳಿಸಿರುವ ಪ್ರದೀಪ್,

ಬೆಂಗಳೂರಿನ ಹೆಚ್ ಎಸ್ ಲೇಔಟ್‌(Limbavali’s name in death note) ಬಳಿ ರೆಸಾರ್ಟ್ ತೆರೆಯಲು 5 ಮಂದಿ ನನ್ನ ಬಳಿ ಮಾತನಾಡಿ, ಒಂದೂವರೆ ಕೋಟಿ ರೂ. ಹಣ ಪಡೆದುಕೊಂಡಿದ್ದರು.

ನನ್ನನ್ನು ಪಾಲುದಾರನನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಮನೆ ಮಾರಿ, ಸಾಕಷ್ಟು ಸಾಲ ಮಾಡಿ ಹಣ ನೀಡಿದ್ದೆ.

https://vijayatimes.com/chandrababu-2024-last-election/

ಆದರೆ, ಪಾಲುದಾರಿಕೆ ಹೆಸರಿನಲ್ಲಿ ನನಗೆ ಮೋಸ ಮಾಡಿದ್ದಾರೆ. ಒಟ್ಟು ಎರಡೂವರೆ ಕೋಟಿ ಹಣ ನನಗೆ ಬರಬೇಕು ಎಂದು ಬರೆದುಕೊಂಡಿದ್ದಾರೆ.

ಈ ನಡುವೆ ರಾಜಕಾರಣಿಯೊಬ್ಬರು ರಾಜಿ ಮಾಡುವ ಪ್ರಯತ್ನ ಮಾಡಿದರಾದರೂ ನನಗೆ ಪೂರ್ಣ ಹಣ ಕೊಡದೇ ಮೋಸ ಮಾಡಲಾಗಿದೆ.

https://youtu.be/gRAVtWuZck8

ಈ ಬಗ್ಗೆ ಕೇಳಿದರೆ ಆ ರಾಜಕಾರಣಿ ನನಗೆ ಸಹಾಯ ಮಾಡಿಲ್ಲ. ನನ್ನ ಸಾವಿಗೆ 6 ಜನರು ಕಾರಣ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಡೆತ್ ನೋಟ್ ನಲ್ಲಿ ಪ್ರದೀಪ್(Pradeep) ಬರೆದುಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಉದ್ಯಮಿಯ ಪತ್ನಿ ನಮಿತಾ ಅವರ ದೂರಿನನ್ವಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ಧ ಎಫ್ ಐಆರ್(FIR) ದಾಖಲಿಸಲಾಗಿದೆ.

Exit mobile version