IPL 2023: ಮೈದಾನದಲ್ಲಿ ಮಿಂಚಿ ಪ್ರಶಸ್ತಿ ಗೆದ್ದ ಕ್ರಿಕೆಟ್‌ ತಾರೆ ಪಟ್ಟಿ ಇಲ್ಲಿದೆ ನೋಡಿ

IPL 2023: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 16ನೇ ಆವೃತ್ತಿಗೆ ತೆರೆಬಿದ್ದಿದೆ. ಈ ಆವೃತ್ತಿಯಲ್ಲಿ ಕಪ್‌ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ (Chennai Super Kings) ತಂಡ ಕೊಟ್ಯಾಂತರ ಅಭಿಮಾನಿಗಳ ಮನಗೆದ್ದಿತು. ಐದನೇ ಬಾರಿ ಐಪಿಎಲ್ ಚಾಂಪಿಯನ್‌ ಆಗಿ ಹೊರಹೊಮ್ಮಿದ ಸಿಎಸ್‌ಕೆ ತಂಡದ ಕ್ಯಾಪ್ಟನ್‌ ಧೋನಿ (Dhoni) ನಾಯಕತ್ವ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಐಪಿಎಲ್ ಸೀರೀಸ್‌ನಲ್ಲಿ ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಅಭಿಮಾನಿಗಳ ಹೀರೋಗಳಾಗಿ ಆಗಿ ಮಿಂಚಿದ್ರು. ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ನೀಡಿ ವಿಶೇಷ ಪ್ರಶಸ್ತಿ ಗಳಿಸಿದ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.


ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:

1 ಆರೆಂಜ್ ಕ್ಯಾಪ್ ಪ್ರಶಸ್ತಿ: ಶುಭಮನ್ ಗಿಲ್ (Shubman Gill) (890)

2 ಪರ್ಪಲ್ ಕ್ಯಾಪ್ ಪ್ರಶಸ್ತಿ: ಮೊಹಮ್ಮದ್ ಶಮಿ (Mohammad Shami) (28).

3 ಫೇರ್‌ಪ್ಲೇ ಆಫ್ ದಿ ಸೀಸನ್ ಪ್ರಶಸ್ತಿ: ಅಜಿಂಕ್ಯ ರಹಾನೆ (Ajinkya Rahane)

4 ಕ್ಯಾಚ್ ಆಫ್ ದಿ ಸೀಸನ್ ಪ್ರಶಸ್ತಿ: ರಶೀದ್ ಖಾನ್ (Rashid Khan)

5 ಋತುವಿನ ಉದ್ದದ ಆರು ಪ್ರಶಸ್ತಿ: ಫಾಫ್ ಡು ಪ್ಲೆಸಿಸ್ ಗೆಲುವುಗಳು (Faf du Plessis) (115 ಮೀ).

6 ಹೆಚ್ಚು ಬೌಂಡರಿಗಳ ಪ್ರಶಸ್ತಿ: ಶುಭಮನ್ ಗಿಲ್ (Shubuman Gill) (84)

7 ಋತುವಿನ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ: ಶುಬ್ಮನ್ ಗಿಲ್.

8 ಗೇಮ್ ಚೇಂಜರ್ ಆಫ್ ದಿ ಸೀಸನ್ ಪ್ರಶಸ್ತಿ: ಶುಭಮನ್ ಗಿಲ್.

9 ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ: ಗ್ಲೆನ್ ಮ್ಯಾಕ್ಸ್‌ವೆಲ್(Glen Maxwell).

10 ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ: ಯಶಸ್ವಿ ಜೈಸ್ವಾಲ್ (Yashasvi jaiswal)

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಈಡನ್ ಗಾರ್ಡನ್ಸ್ ಮತ್ತು ಮುಂಬೈ ಇಂಡಿಯನ್ಸ್ (ಎಂಐ) ಹೋಮ್ ಗ್ರೌಂಡ್ ವಾಂಖೆಡೆ ಸ್ಟೇಡಿಯಂ ಋತುವಿನ ಅತ್ಯುತ್ತಮ ಸ್ಥಳಗಳಿಗಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ರನ್ನರ್ ಅಪ್ ಗುಜರಾತ್ ಟೈಟಾನ್ಸ್‌ಗೆ (Gujurat Titans) INR 12.5 ಕೋಟಿ ಬಹುಮಾನ ನೀಡಲಾಯಿತು.


ಈ ಐಪಿಎಲ್‌ (IPL) ಸರಣಿಯಲ್ಲಿ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬಂದವು. ಈ ಪ್ರತಿಭೆಗಳು ಮುಂದೆ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗುತ್ತವೆ. ಇಂಥಾ ಪ್ರತಿಭೆಗಳ ಹುಡುಕಾಟಕ್ಕೆ ಐಪಿಎಲ್‌ ಒಂದು ಉತ್ತಮ ವೇದಿಕೆಯಾಗಿದೆ.

Exit mobile version