ಮತ್ತೆ ಜನರಿಗೆ ಗ್ಯಾಸ್‌ದರ ಏರಿಕೆ ಬರೆ

ಬೆಂಗಳೂರು ಸೆ 1 : ಕೊರೊನಾ ಸಂಕಷ್ಟದ ನಡುವೆಯೂ ಅಗತ್ಯ ವಸ್ತುಗಳ ದರ ದಿನದಿಂದ ದಿನಕ್ಕೆ ಏರುತ್ತಿದ್ದು, ಇದೀಗ ಇದೆಲ್ಲದರ ಜೊತೆಗೆ ಗ್ಯಾಸ್‌ ಸಿಲಿಂಡರ್‌ಗೂ ಕೂಡ ದರ ಹೆಚ್ಚಿದ್ದು ಗಾಯದ ಮೇಲೆ ಬರೆ ಎಳೆಂದತಾಗಿದೆ.

ಇಂದಿನಿಂದಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಲಾಗಿದೆ. ಇದಕ್ಕೂ ಮೊದಲು ಆಗಸ್ಟ್​ 17ರಂದು ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗೆ 25 ರೂಪಾಯಿ ಹೆಚ್ಚಿಸಲಾಗಿತ್ತು. 15 ದಿನಗಳ ಅಂತರದಲ್ಲಿ 2 ಬಾರಿ ಗ್ಯಾಸ್​ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಇದರ ಜೊತೆಗೆ 19 ಕೆಜಿಯ ಕಮರ್ಷಿಯಲ್​​ ಸಿಲಿಂಡರ್​ ಬೆಲೆಯೂ 75 ರೂಪಾಯಿ ಹೆಚ್ಚಾಗಿದೆ. ಸಬ್ಸಿಡಿ ರಹಿತ 14.2 ಕೆ.ಜಿ ಸಿಲಿಂಡರ್​ ಬೆಲೆ 884.50 ರೂ.ಆಗಿದೆ. ಕಳೆದ ತಿಂಗಳು ಆಗಸ್ಟ್​​ನಲ್ಲೂ ಗ್ಯಾಸ್​ ಸಿಲಿಂಡರ್​ಗೆ 25 ರೂಪಾಯಿ ಹೆಚ್ಚಿಸಲಾಗಿತ್ತು. ಆಗ 859.50 ರೂ.ಗೆ ಏರಿಕೆಯಾಗಿತ್ತು. 

ಕಳೆದ ಜೂನ್‌ನಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ 809 ಇತ್ತು ನಂತರ ಜುಲೈನಲ್ಲಿ 834 ಆಯಿತು. ಇದೀಗ ಮತ್ತೆ ಬೆಲೆ ಏರಿಕೆ ಆಗಿದ್ದು ಶೀಘ್ರದಲ್ಲೇ 1000 ಗಡಿ ದಾಟುವ ಸೂಚನೆ ಕೂಡ ಲಭಿಸುತ್ತಿದೆ. ಒಂದಡೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದೆ. ಇದರ ಬಿಸಿ ತಾಳಲಾರದ ಗ್ರಾಹಕರಿಗೆ ಇದೀಗ ಸಿಲಿಂಡರ್ ಬೆಲೆ ಏರಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Exit mobile version