ಕಾಲೇಜು ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್ ; 8 ವಿದ್ಯಾರ್ಥಿಗಳು ಪೋಲೀಸರ ವಶಕ್ಕೆ

Mangaluru

ಮಂಗಳೂರು(Mangaluru) ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳು(Students) ಖಾಸಗಿ ಕೊಠಡಿಯಲ್ಲಿ ಕಿಸ್ಸಿಂಗ್ ನಲ್ಲಿ ತೊಡಗಿದ್ದಲ್ಲದೇ, ಅದನ್ನ ವಿಡಿಯೋ(Video) ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದರು. ಇಬ್ಬರು ವಿದ್ಯಾರ್ಥಿಗಳು ಚುಂಬಿಸುತ್ತಿರುವ ಈ ವಿಡಿಯೋ ವೈರಲ್(Viral) ಆದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪ್ರತಿಷ್ಠಿತ ಕಾಲೇಜಿನ 8 ಅಪ್ರಾಪ್ತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನ(St Aloysius College) ಈ ಹದಿಹರೆಯದ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಿಸ್ಸಿಂಗ್‌ನಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಪಿಯುಸಿ(PUC) ಶಿಕ್ಷಣ ಪಡೆಯುತ್ತಿದ್ದರು ಎನ್ನಲಾಗಿದೆ. ವೈರಲ್ ಆಗಿದ್ದ ಕಿಸ್ಸಿಂಗ್ ವಿಡಿಯೋವನ್ನು ಆರು ತಿಂಗಳ ಹಿಂದೆ ಚಿತ್ರೀಕರಿಸಲಾಗಿದ್ದು, ಇತ್ತೀಚೆಗೆ ಅಪ್‌ಲೋಡ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ವಿದ್ಯಾರ್ಥಿಗಳು ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟಿಗೆ ಸೇರಿದ್ದು, ಮುತ್ತಿಡುವುದು “ಟ್ರೂಥ್ ಅಂಡ್ ಡೇರ್” ಆಟದ ಭಾಗವಾಗಿತ್ತು.

ವೀಡಿಯೋದಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರೂ ಸಮವಸ್ತ್ರದಲ್ಲಿ ಚುಂಬಿಸುತ್ತಿದ್ದು, ಅವರ ಸ್ನೇಹಿತರು ಅವರನ್ನು ಹುರಿದುಂಬಿಸುತ್ತಿದ್ದರು.
ಪೋಲೀಸರ ಪ್ರಕಾರ, ಹುಡುಗರು ಈ ಗೆಟ್-ಟುಗೆದರ್ ಸಮಯದಲ್ಲಿ ತೆಗೆದ ವೀಡಿಯೊ ತುಣುಕುಗಳನ್ನು ಬಳಸಿಕೊಂಡು ಇಬ್ಬರು ಹುಡುಗಿಯರ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ(Sexual Harrasment) ಎಸಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ವೀಡಿಯೋದಲ್ಲಿ ಮೂವರು ಯುವಕರು ಹಾಗೂ ಮೂವರು ವಿದ್ಯಾರ್ಥಿನಿಯರಿದ್ದಾರೆ. ಮೂವರು ವಿದ್ಯಾರ್ಥಿನಿಯರು ಕಾಲೇಜು ಯೂನಿಫಾರಂ, ಐಡಿ ಕಾರ್ಡ್ ಸಹಿತ ಇದ್ದರೆ, ಉಳಿದ ಮೂವರು ಯುವಕರು ಯೂನಿಫಾರಂನಲ್ಲಿಲ್ಲ.

ಸದ್ಯ, ಪೊಲೀಸರು ವಿದ್ಯಾರ್ಥಿನಿಯರು ‌ಹಾಗೂ ಆ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿದ್ದು, ಶೀಘ್ರವೇ ಅವರೆಲ್ಲರನ್ನೂ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Exit mobile version