ಸಂಸತ್ ಸ್ಮೋಕ್ ಬಾಂಬ್ ಪ್ರಕರಣ: ಆರೋಪಿ ಮನೋರಂಜನ್ ಯಾರು? ಆತನ ಹಿನ್ನೆಲೆ ಏನು ?

Bengaluru: ನಿನ್ನೆಯಷ್ಟೇ (ಡಿ.14) ನೂತನ ಸಂಸತ್ತು (manoranjan parliament attack) ಭವನದೊಳಗೆ ಆತಂಕ ಸೃಷ್ಟಿಸಿದ್ದು, ವೀಕ್ಷಕರ ಗ್ಯಾಲರಿಯಿಂದ ಸಭಾಂಗಣಕ್ಕೆ ನುಗ್ಗಿ ಸ್ಮೋಕ್ (Smoke

burst into the auditorium from the spectators gallery) ಬಾಂಬ್ ಸಿಡಿಸಿ ಆತಂಕ ಉಂಟುಮಾಡಿದ್ದ ಆಗಂತುಕ ಮನೋರಂಜನ್ (Manoranjan) ಯಾರು ಅವನಿಗೆ ಪಾಸ್ ಸಿಕ್ಕಿದ್ದು ಹೇಗೆ

(How did he get the pass)? ಅವನ ಹಿನ್ನೆಲೆ ಏನು ಎಂದು ಇದೀಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಗಳಿಗೆ ಹೀಗಿದೆ ಉತ್ತರ..

ಈ ಘಟನೆ ಸಂಭವಿಸಿದ ಬಳಿಕ ಮೈಸೂರಿನ (Mysore) ಮನೋರಂಜನ್ ಹಿನ್ನೆಲೆ ಹುಡುಕಾಟ ಶುರುಮಾಡಿದ ಪೊಲೀಸರು. ಆದರೆ ಮನೋರಂಜನ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ (criminal case)

ದಾಖಲಾಗಿರುವ ಬಗ್ಗೆ ಈವರೆಗೂ ಮಾಹಿತಿ ಸಿಕ್ಕಿಲ್ಲ. ಇನ್ನು ಅವನ ಸೋಷಿಯಲ್ ಮೀಡಿಯಾ ಅಕೌಂಟ್ (social media account) ಬಗ್ಗೆಯು ಹುಡುಕಾಟ ನಡೆಸಿದ್ದು, ಸದ್ಯ ಆತನ ಸೋಷಿಯಲ್ ಮೀಡಿಯಾ

ಅಕೌಂಟ್ ಕೂಡ (manoranjan parliament attack) ಈವರೆಗು ಪತ್ತೆಯಾಗಿಲ್ಲ.

ಬೇರೆ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಅಕೌಂಟ್ ಇದೆಯಾ ಎಂಬ ಬಗ್ಗೆಯು ಹುಡುಕಾಟ‌ ನಡೆಸಿರುವ ತನಿಖಾಧಿಕಾರಿಗಳು. ಸದ್ಯ ಮೈಸೂರು ಪೊಲೀಸರಿಗೆ ಈತನ ಪೂರ್ವಪರ ವಿಚಾರಿಸಿ ಯಾವುದೇ

ದೆಹಲಿ ಪೊಲೀಸರಾಗಲಿ ಯಾರೂ ಕೂಡ ಸಂಪರ್ಕಮಾಡಿಲ್ಲ. ಆದರೂ ಆತನ ಹಿನ್ನೆಲೆ ಬಗ್ಗೆ ಹುಡುಕಾಟ ನಡೆಸುತ್ತಿರುವ ಪೊಲೀಸರು.

ಕ್ರಾಂತಿಕಾರಿ ವಿಚಾರಗಳನ್ನು, ಪುಸ್ತಕಗಳನ್ನು ಓದುತ್ತಿದ್ದರೂ ಒಂದೇ ಒಂದು ಹೋರಾಟದಲ್ಲೂ ಭಾಗಿಯಾಗದ ಮನೋರಂಜನ್ ಹೋರಾಟದಲ್ಲಿ ಭಾಗಿಯಾದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಆತನ ವಿರುದ್ಧ ಕೇಸ್ ಕೂಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಎಸ್‌ಎಫ್ಐ (SFI) ಜೊತೆಗೆ ಗುರುತಿಸಿಕೊಂಡಿರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ. ಆದರೆ ಎಸ್‌ಎಫ್‌ಐ ಇದನ್ನು ನಿರಾಕರಿಸಿದೆ.

ಮನೋರಂಜನ್‌ಗೂ ನಮಗೂ ನಂಟಿಲ್ಲ ಎಂದು ಹೇಳಿಕೆ ನೀಡಿರುವ ಎಸ್‌ಎಫ್‌ಐ. ಯಾವ ಸಂಘಟನೆಗಳ ಜೊತೆಯು ಅಧಿಕೃತವಾಗಿ ಗುರುತಿಸಿಕೊಂಡಿರದ ಮನೋರಂಜನ್. ಹಾಗಾದ್ರೆ ಮನೋರಂಜನ್

ದಾರಿ ತಪ್ಪಿದ್ದು ಎಲ್ಲಿ? ಕೀಳು ಪ್ರಚಾರದ ಆಸೆಗೆ ಹೇಯ ಕೃತ್ಯ ಎಸಗಿದನ ಮನೋರಂಜನ್?

ಪ್ರಸ್ತುತ ಮೈಸೂರಿನವನು:
ಮನೋರಂಜನ್ ಮುತ್ತಾತ ಪಟೇಲ್ ಈರೇಗೌಡ, ತಾತ ರುದ್ರಪ್ಪಗೌಡ, ತಂದೆ ದೇವರಾಜೇಗೌಡ ಪಿರ್ತಾರ್ಜಿತ ಬೇಕಾದಷ್ಟಿದೆ. ತಂದೆ ಮಾಡಿದ ತೋಟವಿದೆ. ಆದರೆ ಅದೆಲ್ಲವನ್ನೂ ಬಿಟ್ಟು ಸಮಾಜ

ಸುಧಾರಣೆಯ ಜಪ ಮಾಡುತ್ತಿದ್ದ ಮನೋರಂಜನ್. ಯಾವಾಗಲೂ ಪುಸ್ತಕ ಓದುವುದು ಸಮಾಜ ಸುಧಾರಣೆ ಮಾತಾಡುವುದು ಇದರಲ್ಲೇ ಮುಳುಗಿಹೋಗಿದ್ದ. ತಂದೆ ಮೂಲತಃ ಹಾಸನ ಜಿಲ್ಲೆ (Hassan) ಅರಕಲಗೂಡು

ಮಲ್ಲಾಪುರ ಗ್ರಾಮದವರು.

ಮೈಸೂರಿಗೆ ಮಗನ ಓದಿಗಾಗಿಯೇ ಬಂದಿದ್ದ ಕುಟುಂಬ. 15 ವರ್ಷಗಳಿಂದ ಮೈಸೂರಲ್ಲೇ ದೇವರಾಜೇಗೌಡ ವಾಸ ಮಾಡಲು ಶುರು ಮಾಡಿದರು. ಮೈಸೂರಿನ ಪ್ರತಿಷ್ಠಿತ ಮರಿಮಲ್ಲಪ್ಪ ಕಾಲೇಜಿನಲ್ಲಿ

ಪಿಯು ಶಿಕ್ಷಣ, ಸಂತ ಜೋಸೆಫ್ ಕಾಲೇಜಿನಲ್ಲಿ ಪ್ರೌಢ ವಿದ್ಯಾಭ್ಯಾಸ, ಬೆಂಗಳೂರಿನ ಬಿಇಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್. ಕಂಪ್ಯೂಟರ್ ಸೈನ್ಸ್​ನಲ್ಲಿ ಇಂಜಿನಿಯರಿಂಗ್ ಮಾಡಿರುವ ಮನೋರಂಜನ್.

2013-14ರಲ್ಲೇ ವಿದ್ಯಾಭ್ಯಾಸ ಮುಕ್ತಾಯಗೊಳಿಸಿದ್ದಾನೆ. ಆದರೆ ಓದು ಮುಗಿದರೂ ಕೆಲಸಕ್ಕೆ ಸೇರಲು ನಿರಾಸಕ್ತಿ. ಕ್ರಾಂತಿಕಾರಿಗಳ ಪುಸ್ತಕ ಓದಿನಲ್ಲೇ ಒಂದು ದಶಕ ಕಳೆದ ಆಸಾಮಿ. 34 ವರ್ಷವಾದರೂ

ಮದುವೆಯಾಗಲು ನಿರಾಕರಣೆ. ಸಮಾಜ ಸುಧಾರಣೆಯ ಕನಸು ಹೊತ್ತಿದ್ದ ಹುಡುಗ ಮಾಡಿದ್ದು ಮಾತ್ರ ಘೋರ ಅಪರಾಧ.

ಹಿಂದೆಯೂ ಹಳೇ ಸಂಸತ್ ಭವನಕ್ಕೆ ಮನೋರಂಜನ್ ಭೇಟಿ


ಹಳೇ ಸಂಸತ್ ಭವನಕ್ಕೆ (Parliament House) ಈ ಹಿಂದೆಯೂ ಹೋಗಿದ್ದ ಮನೋರಂಜನ್ ಆ ವೇಳೆಯೂ ಸಂಸದ ಪ್ರತಾಪ ಸಿಂಹ (MP Pratap Singh) ಅವರಿಂದ ಪಾಸ್ ಪಡೆದಿದ್ದ.

ವಿಚಿತ್ರವೆಂದರೆ ಒಮ್ಮೆಯೂ ಪ್ರತಾಪ್ ಸಿಂಹರನ್ನು ಭೇಟಿ ಮಾಡಿಲ್ಲವೆಂಬುದು. ಕಳೆದ ಬಾರಿ ಪಾಸ್ ಪಡೆದು ಸಂಸತ್ ಭವನಕ್ಕೆ ಹೋಗಿದ್ದಾಗ ಏಕಾಂಗಿಯಾಗಿದ್ದ.

ಆದರೆ ಈ ಬಾರಿ ಮೊನ್ನೆ ಸಂಸದರ ಕಚೇರಿಗೆ ತೆರಳಿ ಪಾಸ್ ಪಡೆದಿದ್ದ ಆರೋಪಿ ಜೊತೆಗೆ ದೆಹಲಿಯ (New Delhi) ಫ್ರೆಂಡ್ ಎಂದು ಶರ್ಮಾ ಎಂಬಾತನಿಗೂ ಪಾಸ್ ಪಡೆದಿದ್ದ ಒಂದೇ ಪಾಸ್‌ನಲ್ಲಿ

ಇಬ್ಬರು ಸಂಸತ್ತಿನೊಳಗೆ ಪ್ರವೇಶಿಸಿದ್ದ ಆರೋಪಿಗಳು.

ಮನೋರಂಜನ್ ಮನೆ ಬಳಿ ಪೊಲೀಸ್ ಕಾವಲು:


ಈ ದಾಂಧಲೆ ನಡೆಸಿದ ಪ್ರಕರಣದ ಬೆನ್ನಲ್ಲೇ ಮೈಸೂರು ಪೊಲೀಸರು ಮನೋರಂಜನ್ ನಿವಾಸಕ್ಕೆ ತೆರಳಿ ನಿನ್ನೆಯಿಂದ ಮನೆಮುಂದೆಯೇ ಕುಳಿತಿರೋ ಪೊಲೀಸರು. ಮನೆಯಿಂದ ಹೊರ ಬಾರದ

ಮನೋರಂಜನ್ ತಾಯಿ, ಆಗಾಗ ಹೊರಗೆ ಬಂದು ಹೋಗುತ್ತಿರುವ ತಂದೆ ದೇವರಾಜು, ಸದ್ಯ ಮನೋರಂಜನ್ ಮನೆ ಕಡೆಗೆ ಯಾರೊಬ್ಬರೂ ಸುಳಿಯುತ್ತಿಲ್ಲ..

ಇದನ್ನು ಓದಿ: ಸಮಾಜವಾದಿ ನಾಯಕನ ದುಬಾರಿ ಪ್ರವಾಸ: ಸಿದ್ದರಾಮಯ್ಯನವರ ದಾವೋಸ್ ಪ್ರವಾಸಕ್ಕೆ 12 ಕೋಟಿ ಮೀಸಲು

Exit mobile version