25 ವರ್ಷ ವಯಸ್ಸಾದ್ರೂ ಮದುವೆಯಾಗದೇ ಉಳಿದವರಿಗೆ ಡೆನ್ಮಾರ್ಕ್ ನಲ್ಲಿದೆ ಮಸಾಲೆ ಸ್ನಾನದ ಶಿಕ್ಷೆ!

Denmark : ನಾವು ಬದುಕುತ್ತಿರುವ ಈ ಜಗತ್ತು ಅತ್ಯಂತ ವೈವಿಧ್ಯಮಯವಾಗಿದ್ದು, ಕೇವಲ ಭೌಗೋಳಿಕ ವಿನ್ಯಾಸದಲ್ಲಿ ಮಾತ್ರವಲ್ಲದೇ ಜೀವನ ಶೈಲಿಯ(Masala powder bath) ವಿಷಯದಲ್ಲಿ ಕೂಡ ಭಿನ್ನವಾಗಿದೆ. ಪ್ರತಿಯೊಂದು ದೇಶವೂ ತನ್ನದೇ ಆದ ವಿಭಿನ್ನ ಆಚರಣೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದ್ದು,

ಒಂದು ದೇಶದ ಸಂಪ್ರದಾಯ ಇನ್ನೊಂದು ದೇಶದ ಜನರಿಗೆ ವಿಚಿತ್ರವಾಗಿ ಕಾಣಿಸಬಹುದು. ಆದರೆ ತಮ್ಮ ತಮ್ಮ ಸಂಪ್ರದಾಯಗಳನ್ನು ನಂಬುವವರು ಮಾತ್ರ ಅದಕ್ಕೆ ಬದ್ಧರಾಗಿಯೇ ಇರುತ್ತಾರೆ. ಇಂತದ್ದೇ ಒಂದು ವಿಚಿತ್ರ ಎನಿಸುವ ಸಂಪ್ರದಾಯವೊಂದು ಡೆನ್ಮಾರ್ಕ್‍ನಲ್ಲಿದೆ(Denmark), ಅದೇನು ಅಂತ ಯೋಚಿಸ್ತಿದ್ದೀರಾ.

ಡೆನ್ಮಾರ್ಕ್ ನಲ್ಲಿ ಅವಿವಾಹಿತರಿಗೆ ದಾಲ್ಚಿನ್ನಿ ಪುಡಿಯಿಂದ(Cinnamon powder) ಸ್ನಾನ ಮಾಡಿಸಲಾಗುತ್ತದೆ! ಹೌದು, 25 ವರ್ಷಕ್ಕೆ ಸರಿಯಾಗಿ ಮದುವೆಯಾಗದೇ ಇರುವುದಕ್ಕೆ ಇದು ಶಿಕ್ಷೆಯಂತೆ! ಇನ್ನು, ಇದು ಮೇಲ್ನೋಟಕ್ಕೆ 25 ವರ್ಷದೊಳಗೆ ಮದುವೆಯಾಗಿ ಸೆಟಲ್ ಆಗದೇ ಇರುವುದಕ್ಕೆ ಒಂದು ಶಿಕ್ಷೆಯಂತೆ ಕಾಣಿಸಿದರೂ,

ಇದನ್ನೂ ಓದಿ : https://vijayatimes.com/lecturer-humilates-student/

ತಮ್ಮ ಬರ್ತ್ ಡೇ ಆಚರಿಸಿ ಕೊಳ್ಳುತ್ತಿರುವವರನ್ನು ಗೋಳು ಹೊಯ್ದುಕೊಳ್ಳಲು ಮತ್ತು ತರಲೆ ಮಾಡಲು ಒಂದು ಅವಕಾಶ ಎಂದರೂ ತಪ್ಪಿಲ್ಲ. ದಾಲ್ಚಿನ್ನಿ ಪುಡಿಯಿಂದ ಸ್ನಾನ ಮಾಡಿಸುವುದು ಒಂದು ಸಂಪ್ರದಾಯ,

25 ನೇ ವರ್ಷಕ್ಕೆ ಕಾಲಿಟ್ಟವರ ಮೇಲೆ ಸುಮ್ಮನೆ ಶಾಸ್ತ್ರದ ಸಲುವಾಗಿ ಸ್ವಲ್ಪ ದಾಲ್ಚಿನ್ನಿ ಪುಡಿ ಸಿಂಪಡಿಸಿ ಸುಮ್ಮನಾಗುತ್ತಾರೆನೋ ಎಂದು ನೀವು ಭಾವಿಸಿದರೆ ನಿಮ್ಮ ಊಹೆ ತಪ್ಪು.

25 ವರ್ಷ ಪೂರೈಸಿದ ವ್ಯಕ್ತಿಗೆ ಅಡಿಯಿಂದ ಮುಡಿಯ ವರೆಗೆ ದಾಲ್ಚಿನ್ನಿ ಪುಡಿಯಿಂದ ಸ್ನಾನ ಮಾಡಿಸಲಾಗುತ್ತದೆಯಂತೆ! ಕೆಲವೊಮ್ಮೆ, ದಾಲ್ಚಿನ್ನಿ ಪುಡಿ ದೇಹಕ್ಕೆ ಚೆನ್ನಾಗಿ ಮೆತ್ತಿಕೊಳ್ಳಲಿ ಎಂದು ನೀರನ್ನು ಕೂಡ ಸಿಂಪಡಿಸುತ್ತಾರೆ.

ಕೆಲವು ತರಲೇ ಪ್ರಿಯರು, ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ದಾಲ್ಚಿನ್ನಿ ಪುಡಿಯು ದೇಹಕ್ಕೆ ಚೆನ್ನಾಗಿ ಅಂಟಿಕೊಳ್ಳಬೇಕು,

ಎಂದು ದಾಲ್ಚಿನ್ನಿ ಪುಡಿಯೊಂದಿಗೆ ಮೊಟ್ಟೆಯನ್ನು ಕೂಡ ಬಳಸುತ್ತಾರೆ. ಇನ್ನು ಈ ಸಂಪ್ರದಾಯದ ಆಚರಣೆಯಲ್ಲಿ ಕುಟುಂಬದ ಸದಸ್ಯರು ಮಾತ್ರವಲ್ಲದೇ ಸ್ನೇಹಿತರು ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ.

25 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವ್ಯಕ್ತಿಯನ್ನು ಲೈಟ್ ಕಂಬ ಅಥವಾ ಮರಕ್ಕೆ ಕಟ್ಟಿ ಹಾಕಿ, ಆಕೆ ಅಥವಾ ಆತನ ಮೈಗೆಲ್ಲಾ ಮೊಟ್ಟೆ ಹಾಗೂ ದಾಲ್ಚಿನ್ನಿ ಪುಡಿಯ ಸ್ನಾನ ಮಾಡಿಸಿ,

ಕೀಟಲೆ ಮಾಡುತ್ತಾ ಮನರಂಜನೆ ಪಡೆಯುವುದೂ ಉಂಟು. ಸ್ಥಳೀಯ ವ್ಯಕ್ತಿಯೊಬ್ಬರು ಇದರ ಬಗ್ಗೆ ನೀಡಿರುವ ಮಾಹಿತಿಯ ಪ್ರಕಾರ, ಈ ಸಂಪ್ರದಾಯ ನೂರಾರು ವರ್ಷ ಹಳೆಯದ್ದಂತೆ.

ಆಗಿನ ಕಾಲದಲ್ಲಿ, ಮಸಾಲೆ ಮಾರಾಟಗಾರರು ಮಸಾಲೆಗಳನ್ನು ಮಾರಲು ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸುತ್ತಿದ್ದಾಗ,

https://fb.watch/h4m9r-F31S/ 4 ವರ್ಷಗಳಾದ್ರೂ ಮುಗಿದಿಲ್ಲ ವೆಸ್ಟ್ ಆಫ್ ಕಾರ್ಡ್ ಮೇಲ್ಸೇತುವೆ ಕಾಮಗಾರಿ!

ನಗರದಿಂದ ನಗರಕ್ಕೆ ಸುತ್ತಬೇಕಾದ್ದರಿಂದ ಮದುವೆಗಾಗಿ ಸಂಗಾತಿಯನ್ನು ಹುಡುಕುವುದು ಕಷ್ಟವಾಗಿ, ದೀರ್ಘಕಾಲದವರೆಗೆ ಅವಿವಾಹಿತರಾಗಿ ಉಳಿಯುತ್ತಿದ್ದರು. ಇಂತಹ, ಮಸಾಲೆ ಮಾರಾಟಗಾರ ಪುರುಷರನ್ನು ಪೆಪ್ಪರ್‍ಡೂಡ್ಸ್(Pepper dudes) ಮತ್ತು ಮಸಾಲೆ ಮಾರಾಟಗಾರ ಮಹಿಳೆಯರನ್ನು ಪೆಪ್ಪರ್ ಮೇಡೆನ್ಸ್(Pepper Maidens) ಎಂದು ಕರೆಯಲಾಗುತ್ತಿತ್ತು.

ಆದರೆ ನಂತರದ ದಿನಗಳಲ್ಲಿ ಈ ಸಂಪ್ರದಾಯ ಸಂಪೂರ್ಣವಾಗಿ ಮಾರ್ಪಾಡಾಗುತ್ತಾ ಬಂದು 25 ವರ್ಷ ಮೇಲ್ಪಟ್ಟ ಪ್ರತೀ ಯುವಕ ಯುವತಿಯರಿಗೂ ದಾಲ್ಚಿನ್ನಿ ಪುಡಿ ಹಚ್ಚುವ ರೂಢಿ ಜಾರಿಗೆ ಬಂದಿತು.

Exit mobile version