ಮ್ಯಾಟ್ರಿಮೋನಿಯಲ್ ಚೀಟಿಂಗ್‌: ಬೆಲೆಬಾಳುವ ಚಿನ್ನಾಭರಣ ,ಹಣ ಕಳೆದುಕೊಂಡ ಬೆಂಗಳೂರಿನ ಮಹಿಳೆ

New Delhi: ಮಹಿಳೆಯೊಬ್ಬರಿಗೆ ಮ್ಯಾಟ್ರಿಮೋನಿಯಲ್‌ನಲ್ಲಿ (Matrimonial) ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಭಾರೀ ಮೋಸ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಂಗಳೂರು ಮೂಲದ 39 ವರ್ಷದ ಮಹಿಳೆಯನ್ನು (Matrimonial cheating) ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ (Website) ಮೂಲಕ ವ್ಯಕ್ತಿಯೊಬ್ಬರು ಪರಿಚಯವಾಗಿ ಕೆಲವು ಬೆಲೆಬಾಳುವ ವಸ್ತುಗಳು ಮತ್ತು ಹಣವನ್ನು ಮಹಿಳೆಯು ಕಳೆದುಕೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ಪೊಲೀಸರು ಬುಧವಾರ ತಿಳಿಸಿದ್ದಾರೆ.


ಮ್ಯಾಟ್ರಿಮೋನಿಯಲ್‌ನಲ್ಲಿ ಮೋಸ ಹೋಗುವ ಸುದ್ದಿ ಇತ್ತೀಚೆಗೆ ಅನೇಕ ಬಾರಿ ಕೇಳಿ ಬರುತ್ತಿದೆ. ಅಂತೆಯೇ ಈ ಬಾರಿ ದೆಹಲಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಲಾದ ಎಫ್‌ಐಆರ್‌ನಲ್ಲಿ (FIR) ಹೇಳಿರುವಂತೆ,

ಏರ್‌ಲೈನ್(Airline) ಉದ್ಯಮದಲ್ಲಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ಎರಡು ವಾರಗಳ ಹಿಂದೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ (Matrimonial cheating) ಮೂಲಕ ಅನ್ಯುಲ್ ಜೈನ್ ಅವರನ್ನು ಪರಿಚಯ ಮಾಡಿಕೊಂಡಿದ್ದಾರೆ.

ಆ ವ್ಯಕ್ತಿಯು ಎನ್‌ಸಿಆರ್ ಪ್ರದೇಶದಲ್ಲಿ ತನ್ನನ್ನು ತಾನು ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದಾನೆ.

ನಂತರ ಆತನ ಕುಟುಂಬದೊಂದಿಗೆ ಮದುವೆಯ ಬಗ್ಗೆ ಚರ್ಚಿಸಲು ದೆಹಲಿಗೆ ಬರುವಂತೆ ಕೇಳಿಕೊಂದಿದ್ದನು,

ಈ ಸಂದರ್ಭಕ್ಕಾಗಿ ಬೇಕಾಗುವ ಬಟ್ಟೆ ಮತ್ತು ಆಭರಣಗಳನ್ನು ತರುವಂತೆ ಕೂಡ ಜೈನ್ ತನಗೆ ಸೂಚಿಸಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾಳೆ.


ಅನ್ಯುಲ್ ಜೈನ್ (Anyul Jain) ಭಾನುವಾರ ದೆಹಲಿ ವಿಮಾನ ನಿಲ್ದಾಣದಿಂದ ನನ್ನನ್ನು ಕರೆದುಕೊಂಡು ಹೋಗಿ,

ಅಲ್ಲಿಂದ ಏರೋಸಿಟಿ ಫುಡ್ ಕೋರ್ಟ್‌ನಲ್ಲಿ ಊಟ ಮಾಡಿದೆವು ನಂತರ ಅವರ ಕಾರಿನಲ್ಲಿ ಅಲ್ಲಿಂದ ಹೊರಟೆವು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಸುಮಾರು ಅರ್ಧ ಕಿಲೋಮೀಟರ್ (Kilometer) ಹೋದ ನಂತರ, ಕಾರಿನ ಟೈರ್‌ನಿಂದ ಏನೋ ಹೊರಬರುತ್ತಿದೆ ಎಂದು ಅನ್ಯುಲ್ ಜೈನ್ ಹೇಳಿದರು.

ಟೈರ್ ಪರಿಶೀಲಿಸಲು ಕಾರಿನಿಂದ ಇಳಿದ ತಕ್ಷಣ ಅಮ್ಮುಲ್ ಜೈನ್ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.


ಅವರ ಬಳಿ ಇದ್ದ 300 ಗ್ರಾಂ ಚಿನ್ನಾಭರಣ, 15 ಸಾವಿರ ರೂ. ನಗದು, ಮೊಬೈಲ್ ಫೋನ್(Mobile Phone) , ಮೂರು ಎಟಿಎಂ ಕಾರ್ಡ್‌ಗಳು (ATM Card) ಮತ್ತು ಒಂದು ಬ್ಯಾಗ್ ಕಳ್ಳತನವಾಗಿದೆ ಎಂದು ಅವರು ಹೇಳಿದರು.ಈ ಪ್ರಕರಣ ದಾಖಲಿಸಿಕೊಂಡಿದ್ದೇವೆ ಈಗ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಶ್ಮಿತಾ ಅನೀಶ್

Exit mobile version