Bengaluru: 2024ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಎನ್ಡಿಎ (mayawati tweet viral) ಮತ್ತು ಇಂಡಿಯಾ ಮೈತ್ರಿಕೂಟಗಳ ನಡುವೆ ಭಾರೀ ಸ್ಪರ್ದೆ
ಏರ್ಪಟ್ಟಿದೆ. ಆದರೆ ಎರಡು ಮೈತ್ರಿಕೂಟಗಳನ್ನು ಸೇರದೇ, ತಟಸ್ಥವಾಗಿರುವ ಕೆಲವು ಪಕ್ಷಗಳ ನಿಲುವು ಈ ಬಾರಿಯ ಲೋಕಸಭಾ ಚುನಾವಣೆಯ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಗಳಿವೆ.
ಹೀಗಾಗಿಯೇ ತಟಸ್ಥವಾಗಿರುವ ಪಕ್ಷಗಳನ್ನು ಸೆಳೆಯಲು ಎರಡೂ ಮೈತ್ರಿಕೂಟಗಳು ಪ್ರಯತ್ನ ನಡೆಸುತ್ತಿವೆ. ಈ ಮಧ್ಯೆ ಬಿಎಸ್ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ನಿಲುವು ಹೊಸ
ರಾಜಕೀಯ ಸಮೀಕರಣಕ್ಕೆ ದಾರಿ (mayawati tweet viral) ಮಾಡಿಕೊಟ್ಟಿದೆ.
ಮುಂಬರುವ ಲೋಕಸಭಾ ಚುನಾವಣೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಯಾರೋಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿರುವ ಅವರು
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಅಥವಾ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (ಭಾರತ) ದೊಂದಿಗೆ ಮೈತ್ರಿ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳನ್ನು ತಳ್ಳಿಹಾಕಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಯಾವತಿ (Mayavathi) ಅವರು, ಮುಂಬರುವ 2024ರ ಲೋಕಸಭೆ ಚುನಾವಣೆಗಳು ಮತ್ತು ನಾಲ್ಕು ರಾಜ್ಯಗಳಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ
ಜಿ-20 ಶೃಂಗಸಭೆ : ಭದ್ರತೆಗೆ AI ಕ್ಯಾಮರಾ ; ಎಲ್ಲೆಡೆ ಸ್ನೈಪರ್ಸ್ ; ಭದ್ರಕೋಟೆಯಾದ ದೆಹಲಿ..!
ತಮ್ಮ ಪಕ್ಷವು ಏಕಾಂಗಿಯಾಗಿ ಹೋಗಲಿದೆ. ಎನ್ಡಿಎ (NDA) ಮತ್ತು ಭಾರತ ಮೈತ್ರಿಕೂಟವು ಹೆಚ್ಚಾಗಿ ಬಡವರ ವಿರೋಧಿ ನೀತಿಗಳನ್ನು ಹೊಂದಿರುವ ಪಕ್ಷಗಳು. ಬಿಎಸ್ಪಿ ಪಕ್ಷವು ಈ ನೀತಿಗಳ ವಿರುದ್ಧ ನಿರಂತರ
ಸಂಘರ್ಷ ನಡೆಸುತ್ತಿರುವುದರಿಂದ ಅವರೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಬಿಎಸ್ಪಿ(BSP), ತನ್ನ ವಿರೋಧಿಗಳ ತಂತ್ರಗಳನ್ನು ಮೀರಿ, ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಪರಸ್ಪರ ಸಹೋದರತ್ವದ ಆಧಾರದ ಮೇಲೆ ಲಕ್ಷಾಂತರ ಅಂಚಿನಲ್ಲಿರುವ ವ್ಯಕ್ತಿಗಳನ್ನು ಒಗ್ಗೂಡಿಸಿ
ಮತ್ತು ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ 2007ರಲ್ಲಿ ಮಾಡಿದ ರೀತಿಯಲ್ಲಿಯೇ ಸ್ಪರ್ಧಿಸಲಿದೆ ಎಂದು ಮಾಯಾವತಿ ಹೇಳಿದ್ಧಾರೆ. ಬದಲಾದ ರಾಜಕೀಯ ಸಮೀಕರಣ : ಮಾಯಾವತಿ ಅವರ
ಈ ಘೋಷಣೆಯಿಂದಾಗಿ ಇದೀಗ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಏಕೆಂದರೆ, ದಲಿತ ಮತ್ತು ಮುಸ್ಲಿಂ ಮತಗಳ
ಮೇಲೆ ಹಿಡಿತ ಹೊಂದಿರುವ ಬಿಎಸ್ಪಿ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಿದರೆ, ಈ ಮತಗಳು ವಿಭಜನೆಯಾಗಿ ಅದರ ನೇರ ಲಾಭ ಬಿಜೆಪಿಗೆ ಆಗುತ್ತದೆ.
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮಹತ್ವದ ಘೋಷಣೆ ; ಬದಲಾಯಿತು ರಾಜಕೀಯ ಸಮೀಕರಣ..!
ಒಂದು ವೇಳೆ ಕಾಂಗ್ರೆಸ್ (Congress) -ಬಿಎಸ್ಪಿ-ಎಸ್ಪಿ (SP) ಪಕ್ಷಗಳು ಒಂದುಗೂಡಿ ಸ್ಪರ್ಧೆ ಮಾಡಿದರೆ, ಬಿಜೆಪಿಗೆ ಚುನಾವಣೆ ಎದುರಿಸುವುದು ಕಷ್ಟವಾಗುತ್ತಿತ್ತು. ಆದರೆ ಇದೀಗ ಬಿಜೆಪಿ (BJP)
ಏಕಾಂಗಿಯಾಗಿಯೇ ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟವನ್ನು ಎದುರಿಸಬಹುದು ಎನ್ನಲಾಗುತ್ತಿದೆ. 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ
ಈ ನಿಲುವು ಪರೋಕ್ಷವಾಗಿ ಇಂಡಿಯಾ ಮೈತ್ರಿಕೂಟಕ್ಕೆ ಹಿನ್ನಡೆಯುಂಟು ಮಾಡಿದೆ ಎನ್ನಲಾಗುತ್ತಿದೆ. ಹೀಗಾಗಿ ಇದೀಗ ಉತ್ತರಪ್ರದೇಶದ (Uttar Pradesh) ರಾಜಕೀಯ ಸಮೀಕರಣಗಳು ಸಾಕಷ್ಟು
ಬದಲಾವಣೆ ಆಗುವ ಸಾಧ್ಯತೆಗಳಿವೆ.
ಮಹೇಶ್