• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ನಾಲ್ಕು ವರ್ಷಗಳ ಬಳಿಕ ಚಂದ್ರನೂರಿಗೆ ಭಾರತದ ಮೂರನೇ ತೇರು ಸಿದ್ದ: ಆಲ್‌ ದಿ ಬೆಸ್ಟ್‌

Teju Srinivas by Teju Srinivas
in Vijaya Time, ಪ್ರಮುಖ ಸುದ್ದಿ
ನಾಲ್ಕು ವರ್ಷಗಳ ಬಳಿಕ ಚಂದ್ರನೂರಿಗೆ ಭಾರತದ ಮೂರನೇ ತೇರು ಸಿದ್ದ: ಆಲ್‌ ದಿ ಬೆಸ್ಟ್‌
0
SHARES
218
VIEWS
Share on FacebookShare on Twitter

ಭಾರತದ ಮಹತ್ವಾಕಾಂಕ್ಷೆಯ ಚಂದ್ರನ ಪರಿಶೋಧನಾ ಮಿಷನ್ ಚಂದ್ರಯಾನ-3ಗೆ (Chandrayaan-3) ಇಂದಿನಿಂದ ಕೌಂಟ್‌ ಡೌನ್ (mission chandrayaan 3)ಶುರುವಾಗಲಿದೆ.
10 9 8 7 6 5 4 3 2 1 ಬಳಿಕ ಆಗುವುದೇನು?

chandrayaan 3

Chandrayaan-3 by ISRO : ನಾಲ್ಕು ವರ್ಷಗಳ ನಂತರ ಇಸ್ರೋದ ಚಂದ್ರಯಾನಕೆ ನೌಕೆ ಜು.14 ರಂದು ನಭಕ್ಕೆ ಜಿಗಿಯಲಿದೆ. ಚಂದ್ರನ ಕಕ್ಷೆಗೆ ಜಿಗಿಯಲಿರುವ ಲ್ಯಾಂಡರ್‌ (Lander),

ಚಂದ್ರನಲ್ಲಿ ಕಾಲೂರಲಿರುವ ರೋವರ್‌ಗಳನ್ನು ಹೊತ್ತುಕೊಂಡು ಎಲ್‌ವಿಎಂ-3 ರಾಕೆಟ್‌ ಶ್ರೀಹರಿಕೋಟಾದ ಉಡಾವಣಾ ಪ್ಯಾಡ್‌ನ (mission chandrayaan 3)ಮೇಲೆ ನಿಂತಿದೆ.

“Our country is now ready to fly high in the field of science”.

  • Atal Bihari Vajpayee

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು (ಜುಲೈ 13 ರಂದು) ಮಧ್ಯಾಹ್ನ 1.05 ಕ್ಕೆ 26 ಗಂಟೆಗಳ ಕೌಂಟ್‌ ಡೌನ್ (Countdown) ಪ್ರಾರಂಭವಾಗಲಿದೆ ಎಂದು ಹೇಳಿದೆ.

ಜುಲೈ 14ರ ಮಧ್ಯಾಹ್ನ 2:30 ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಉಡಾವಣೆವಾಗಲಿದೆ ಎಂದು ಹೇಳಲಾಗಿದೆ. ಜೊತೆಗೆ ಇದು ರಾಷ್ಟ್ರದ ಬಾಹ್ಯಾಕಾಶ

ಪರಿಶೋಧನೆಯಲ್ಲಿ ಮಹತ್ವಾಕಾಂಕ್ಷೆಯ ಸಾಧನೆಯಾಗಿದೆ.

ಚಂದ್ರಯಾನ-3ಯ ಕಾರ್ಯತಂತ್ರಗಳು ಎಲ್ಲಾ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಭಾರತವು ಚಂದ್ರನಲ್ಲಿ ತನ್ನ ಮಿಷನನ್ನು ಸುರಕ್ಷಿತ ಲ್ಯಾಂಡಿಂಗ್ ಮಾಡುವ ನಾಲ್ಕನೇ ರಾಷ್ಟ್ರವಾಗಲಿದೆ.

ಬಾಹ್ಯಾಕಾಶ ಸಂಶೋಧನೆಯ ಕ್ಷೇತ್ರದಲ್ಲಿ ಭಾರತ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಈ ಮೂಲಕ ಪ್ರದರ್ಶಿಸುತ್ತಿದೆ.

ಎಂವಿಎಂ3 ರಾಕೆಟ್ ನ ಸಾಮರ್ಥ್ಯ
640 ಟನ್ ಕವುಳ್ಳ,ಅತ್ಯಂತ ಭಾರವಾದ ರಾಕೆಟ್, ಒಟ್ಟು ಉದ್ದ 43.5 ಮೀಟರ್.
8 ಟನ್ ಪೇಲೋಡನ್ನು ಭೂಮಿಯಿಂದ 200 ಕಿ.ಮೀ ಎತ್ತರಕ್ಕೆ ಹೊತ್ತೊಯ್ಯಬಲ್ಲ ಬಾಹುಬಲಿ.
3000 ಕೆಜಿ ಪೇಲೋಡನ್ನು ಭೂಮಿಯ ಗುರುತ್ವಾಕರ್ಷಣೆಯಿಂದ ವಿರುದ್ಧ ಕೊಂಡೊಯ್ಯುವ ಬಹುದೊಡ್ಡ ಟಾಸ್ಕನ್ನು ಪ್ರಸ್ತುತ ಈ ರಾಕೆಟ್ (Rocket) ಹೊತ್ತುಕೊಂಡಿದೆ

56ನೇ ಸ್ವಾತಂತ್ರ್ಯ ದಿನ ಹೊರಹೊಮ್ಮಿದ ಆ ವಾಗ್ದಾನದಂತೆ 2008ರ ಅಕ್ಟೋಬರ್ 22ರಂದು ಚಂದ್ರಯಾನ-1′, ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿತ್ತು.

ತ್ರಿವರ್ಣ ಧ್ವಜ ಬಣ್ಣದ ಚಂದ್ರನೌಕೆಯು 2008ರ ನವಂಬರ್‌ 8ರಂದು ಚಂದ್ರನನ್ನು ಚುಂಬಿಸಿತ್ತು.ಚಂದ್ರನಲ್ಲಿ ನೀರು ಪತ್ತೆಹಚ್ಚಿದ ಖ್ಯಾತಿಯೂ ವಿಶ್ವದಲ್ಲೇ ಭಾರತದ ಇಸ್ರೋ ಆ ನೌಕೆಯ ಪಾಲಾಯಿತು.

2019ರ ಸೆಪ್ಟೆಂಬರ್‌ನಲ್ಲಿ ಅದೇ ವಿಶ್ವಾಸದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿದ್ದ ‘ಚಂದ್ರಯಾನ-2’ರ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ (Landing) ಸಾಧ್ಯವಾಗದೇ ಅಪ್ಪಳಿಸಿ,

ವೈಫಲ್ಯ ಕಂಡಿತ್ತು.ಚಂದ್ರಯಾನದ ಆ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಲು ಈಗ 4 ವರ್ಷಗಳ ನಂತರ ಇಸ್ರೋ ‘ಚಂದ್ರಯಾನ 3’ಕ್ಕೆ ಕ್ಷಣಗಣನೆ ಆರಂಭಿಸಿದೆ.

mission chandrayaan 3

ಮಂಗಳನಿಗಿಂತ ಚಂದ್ರನ ಮೇಲೆ ಲ್ಯಾಂಡಿಂಗ್‌ ಏಕೆ ಅಪಾಯಕಾರಿ?
ಭೂಮಿಯಿಂದ ಚಂದ್ರನ ಅಂತರವು ಸುಮಾರು 3.80 ಲಕ್ಷ ಕಿ.ಮೀ.ಗಳು. ಮತ್ತು ಭೂಮಿಯಿಂದ ಮಂಗಳದ ಅಂತರವು ಸುಮಾರು 3,390 ಲಕ್ಷ ಕಿಲೋಮೀಟರ್. ಚಂದ್ರ ಇಷ್ಟು ಹತ್ತಿರವಿದ್ದಾಗ್ಯೂ

ಆ ನೆಲದ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಅತ್ಯಂತ ದೊಡ್ಡ ಸವಾಲು

  1. ಚಂದ್ರನಿಗೆ ವಾತಾವರಣವೇ ಇಲ್ಲದಿರುವುದು.
  2. ಚಂದ್ರನ ಮೇಲೆ ಜಿಪಿಎಸ್‌ ಇಲ್ಲ.
  3. ಚಂದ್ರನ ದಕ್ಷಿಣ ಧ್ರುವ ಅತ್ಯಂತ ವಿಚಿತ್ರ

ನೌಕೆ ಇಳಿಯುವ ಮೊದಲು ಏನಾಗುತ್ತೆ?

  • ಚಂದ್ರನ ಮೇಲೆ ಇಳಿಯುವ ಮೊದಲು ಚಂದ್ರನಿಗೆ 5 ಸುತ್ತು ಪ್ರದಕ್ಷಿಣೆ ಹಾಕುವುದರ ಮೂಲಕಲ್ಯಾಂಡರ್‌ ಮಾಡ್ಯೂಲ್‌,ಪ್ರೊಪಲ್ಷನ್‌ ಮಾಡ್ಯೂಲ್‌ನಿಂದ ಬೇರ್ಪಡುತ್ತದೆ.ಪ್ರೊಪಲ್ಷನ್‌ ಮಾಡ್ಯೂಲ್‌
    ಅದೇ ಕಕ್ಷೆಯಲ್ಲೇ ಸುತ್ತುವುದನ್ನು ಮುಂದುವರಿಸುತ್ತದೆ. ಲ್ಯಾಂಡರ್‌ ನಿಧಾನಕ್ಕೆ ಚಂದ್ರನ ಮೇಲ್ಮೈಯಲ್ಲಿಇಳಿಯಲು ಪ್ರಾರಂಭಿಸುತ್ತದೆ.
  • ಲ್ಯಾಂಡರ್‌ ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಒಟ್ಟು 8 ಸಣ್ಣ ಎಂಜಿನ್‌ಗಳನ್ನು ಹೊಂದಿದೆ. ಇದು ವಾಹನವನ್ನು ನಿರ್ದೇಶಿಸಲು ಮತ್ತು ತಿರುಗಿಸಲು ನೆರವಾಗುತ್ತದೆ. ಇವುಗಳನ್ನು ‘ಲ್ಯಾಂಡರ್‌ ಪ್ರೊಪಲ್ಷನ್‌
    ಸಿಸ್ಟಂ’ ಎನ್ನಲಾಗುತ್ತದೆ. ಇದರ ಸಹಾಯದಿಂದ, ಲ್ಯಾಂಡರ್‌ ಸೆಕೆಂಡಿಗೆ 2 ಮೀಟರ್‌ ವೇಗದಲ್ಲಿ ಇಳಿಯುತ್ತದೆ. ಆದರೆ, ಮೇಲ್ಮೈ ಮೇಲೆ ಇಳಿಯುವ ಸಂದರ್ಭದಲ್ಲಿ ಅದು ಸೆಕೆಂಡಿಗೆ 0.5 ಮೀ.
    ವೇಗವನ್ನಷ್ಟೇ ಹೊಂದಿರುತ್ತದೆ. ಅಂದರೆ, ಹೆಲಿಕಾಪ್ಟರ್‌ ನೆಲದ ಮೇಲೆ ನಿಧಾನವಾಗಿ ಇಳಿಯುವ ರೀತಿ

ಚಂದ್ರನಲ್ಲಿ ಇಳಿಯುವ ರೋವರ್‌ಗೆ ಸೆನ್ಸಾರ್‌ಗಳೇ ದೇವರು
ಚಂದ್ರನ ಮೇಲ್ಮೈಯಲ್ಲಿ 7 ಕಿ.ಮೀ. ಎತ್ತರದಿಂದ ನೌಕೆ ಇಳಿಯಲು ಪ್ರಾರಂಭಿಸುತ್ತದೆ. 2 ಕಿ.ಮೀ. ಎತ್ತರಕ್ಕೆ ಬಂದ ತಕ್ಷಣ ಇದರ ಸೆನ್ಸಾರ್‌ಗಳು ಕೆಲಸ ಶುರುಮಾಡುತ್ತವೆ. ಚಂದ್ರಯಾನ-3ರ
ಲ್ಯಾಂಡರ್‌ನಲ್ಲಿ ನೂರಾರು ಸಂವೇದಕಗಳನ್ನು ಅಳವಡಿಸಲಾಗಿದೆ. ಚಳ್ಳಕೆರೆಯ ಕೃತಕ ಚಂದ್ರನ ನೆಲದಲ್ಲಿ ರೋವರ್‌ ಸಂಚರಿಸುವಾಗ ಎದುರಿಸಿದ ಸವಾಲುಗಳನ್ನೂ ಇಲ್ಲಿ ಸೆನ್ಸಾರ್‌ಗೆ ಪರಿಗಣಿಸಲಾಗಿದೆ.
ಇವು ಚಂದ್ರನ ಮೇಲ್ಮೈನ ಎತ್ತರ, ಲ್ಯಾಂಡಿಂಗ್‌ ಸ್ಥಳ, ವೇಗ, ಚಲಿಸಬೇಕಾದ ದಿಕ್ಕನ್ನೂ ನಿರ್ಧರಿಸುತ್ತವೆ. ಕಲ್ಲುಗಳಿಂದ ಲ್ಯಾಂಡರನ್ನು ಉಳಿಸಲೂ ಈ ಸಂವೇದಕಗಳೇ ಅವಶ್ಯ.

ಕುಶಾಲ್ .ಎನ್‌

Tags: chandrayaanIsrorocket

Related News

ಜಾತಿ ಗಣತಿ ಜಟಾಪಟಿ: ಬಿಹಾರ ಬಳಿಕ ಕರ್ನಾಟಕ ಸರದಿ, ಜಾತಿ ಗಣತಿ ಮಾಡುವುದರಿಂದ ಲಾಭ ಏನು?
ದೇಶ-ವಿದೇಶ

ಜಾತಿ ಗಣತಿ ಜಟಾಪಟಿ: ಬಿಹಾರ ಬಳಿಕ ಕರ್ನಾಟಕ ಸರದಿ, ಜಾತಿ ಗಣತಿ ಮಾಡುವುದರಿಂದ ಲಾಭ ಏನು?

October 3, 2023
2022ರ ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡಲು ಗೃಹ ಇಲಾಖೆಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ..!
ಪ್ರಮುಖ ಸುದ್ದಿ

2022ರ ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡಲು ಗೃಹ ಇಲಾಖೆಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ..!

October 3, 2023
ಚಿಲುಮೆ ಪ್ರಕರಣ: ತುಷಾರ್‌ ಗಿರಿನಾಥ್‌ಗೂ ತಟ್ಟಿದ ಚಿಲುಮೆ ಬಿಸಿ, ತನಿಖೆಗೆ ಆದೇಶಿಸಿದ ಸರ್ಕಾರ
ಪ್ರಮುಖ ಸುದ್ದಿ

ಚಿಲುಮೆ ಪ್ರಕರಣ: ತುಷಾರ್‌ ಗಿರಿನಾಥ್‌ಗೂ ತಟ್ಟಿದ ಚಿಲುಮೆ ಬಿಸಿ, ತನಿಖೆಗೆ ಆದೇಶಿಸಿದ ಸರ್ಕಾರ

October 3, 2023
ಎಲೆಕ್ಟ್ರಿಕ್,ಹೈಬ್ರಿಡ್ ವಾಹನಗಳ ಮಾರಾಟದಲ್ಲಿ ಬಾರಿ ಏರಿಕೆ: ಡೀಸೆಲ್ ವಾಹನ ಮಾರಾಟ 2% ಇಳಿಕೆ
ದೇಶ-ವಿದೇಶ

ಎಲೆಕ್ಟ್ರಿಕ್,ಹೈಬ್ರಿಡ್ ವಾಹನಗಳ ಮಾರಾಟದಲ್ಲಿ ಬಾರಿ ಏರಿಕೆ: ಡೀಸೆಲ್ ವಾಹನ ಮಾರಾಟ 2% ಇಳಿಕೆ

October 3, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.