ಮೊಬೈಲ್‌ ಸಹವಾಸ, ಮನೆ ಮಂದಿ ಮಾಡಬೇಕಾಗುತ್ತೆ ವನವಾಸ ಜೋಕೆ !

Health: ಮೊಬೈಲ್ ಫೋನ್ (Mobile phone Side effects) ನೋಡೋ ಹವ್ಯಾಸ ಮದ್ಯ ವ್ಯಸನದಷ್ಟೇ ಕೆಟ್ಟದ್ದು. ಇದು ಕೂಡ ಒಂದು ಕೆಟ್ಟ ಚಟವಾಗಿ ಬದಲಾಗಿದೆ. ಬೆಳಿಗ್ಗೆ ಬೇಗ ಏಳಲು ಇಡುವ ಅಲಾರಂನಿಂದ ಹಿಡಿದು ರಾತ್ರಿ ಕಣ್ಣಿಗೆ ನಿದ್ರೆ ಸುಳಿಯುವವರೆಗೂ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮೊಬೈಲ್‌ಗೆ ದಾಸರಾಗಿದ್ದಾರೆ.

ಈ ಸ್ಮಾರ್ಟ್ ಫೋನ್(Smart Phone) ಎಂಬುವುದು ನಮ್ಮನ್ನು ಒಂದು ರೀತಿಯ ಒಂದು ರೀತಿಯ ಗುಲಾಮರನ್ನಾಗಿ ಮಾಡಿಕೊಂಡಿದೆ. ಹೈಡೆಲ್ಬರ್ಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ಸುಮಾರು 48 ಜನರ ಮೆದುಳನ್ನು

ಎಂಆರ್‌ಐ ಸ್ಕ್ಯಾನಿಂಗೆ(MRI SCANNING) ಒಳಪಡಿಸಿದಾಗ ಅದರಲ್ಲಿ 22 ಮಂದಿ ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾರೆ ಎಂಬ ಆತಂಕಕಾರಿ ವಿಷಯ ಹೊರ ಬಿದ್ದಿದೆ.

ಇಂಟರ್ನೆಟ್ ನಲ್ಲಿ ಬ್ರೌಸಿಂಗ್(Mobile phone Side effects) ಮಾಡುವ ವೇಳೆ ನೀವು ತುಂಬಾ ಹಿತಕರ ಅನುಭವ ಪಡೆಯುವುದಕ್ಕೆ ಕಾರಣವೇನೆಂದರೆ, ಆ ವೇಳೆಯಲ್ಲಿ ನಮ್ಮ ದೇಹ ಡೋಪಮೈನ್ ಎನ್ನುವ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ.

ಸ್ಮಾರ್ಟ್‌ಫೋನ್‌ ಗೀಳು ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂದರೆ ಅದು ನಮ್ಮ ಮೆದುಳಿನ ಮೇಲೆ ತನ್ನ ಪ್ರಾಬಲ್ಯವನ್ನು ಸಾಧಿಸಿದೆ. ಇತ್ತೀಚೆಗೆ ಅಂತೂ ಮಕ್ಕಳಲ್ಲಿನ ಮೊಬೈಲ್ ಗೀಳು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಕೊರೋನ(Corona) ಮಹಾಮಾರಿ ವಕ್ಕರಿಸಿದಾಗ ಆನ್ಲೈನ್ ಕ್ಲಾಸ್ ಎಂಬ ನೆಪದಲ್ಲಿ ಮಕ್ಕಳು ಮೊಬೈಲ್ ಹಿಡಿಯಲು ಶುರು ಮಾಡಿದ್ರು. ಆದರೆ ಇದೇ ನೆಪ ಇಂದು ಗೀಳಾಗಿ ಬದಲಾಗಿದೆ.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಸ್ಟಾರ್ ಎಂದು ನನ್ನನ್ನು ಕರೆಯಬೇಡಿ ಅದು ಸರಿಹೊಂದುವುದಿಲ್ಲ : ನಟ ವಿಜಯ್ ಸೇತುಪತಿ

ಮೊದಲು ಚಿಕ್ಕ ಮಕ್ಕಳಿಗೆ ಚಂದಮಾಮನ ಕತೆಗಳು, ಪರಿಸರ ಗಿಡಮರ ಗೀತೆಗಳು ಸಾಕುಪ್ರಾಣಿಗಳ ಪ್ರಹಸನಗಳು ಹೀಗೆ ಎಲ್ಲವನ್ನೂ ತೋರಿಸುತ್ತಾ ಅವುಗಳನ್ನು ಪರಿಚಯಿಸುತ್ತ ಕಥೆಗಳನ್ನು ಹೇಳುತ್ತಾ ಊಟ ಮಾಡಿಸುವುದು,

ನಿದ್ದೆ ಮಾಡಿಸುವುದು ಒಂದು ಪದ್ಧತಿಯಾಗಿತ್ತು. ಇದರಿಂದ ಮಕ್ಕಳಲ್ಲಿ ಪರಿಸರ ಜ್ಞಾನದ ಜೊತೆಗೆ ಪ್ರತಿಯೊಂದರ ಮೌಲ್ಯಗಳನ್ನು ಕಲಿಸುತ್ತಾ ಜೀವನದ ಎಲ್ಲಾ ಮಜಲುಗಳ ಬಗ್ಗೆ ವಿಸ್ತಾರವಾಗಿ ತಿಳುವಳಿಕೆ ಪಡೆಯುತ್ತಿದ್ದರು.

ಆದರೆ ಇಂದಿನ ತಾಯಂದಿರು ಮಕ್ಕಳು ಅಳುತ್ತಿವೆ, ಹಠ ಮಾಡುತ್ತಿವೆ ಅಂದ್ರೆ ಸಾಕು ಮೊಬೈಲ್ ಅನ್ನು ಕೈಗೆ ಇಟ್ಟು ಬಿಡುತ್ತಾರೆ. ಎಂಥಾ ವಿಪರ್ಯಾಸ ನೋಡಿ ತಂದೆ ತಾಯಿಯರ ಮಾತಿಗೆ,

ಏಟಿಗೆ ಬಗ್ಗದ ಮಕ್ಕಳು ಇಂದು ಮೊಬೈಲ್ ಎಂಬ ಮಯಾಂಗನೆಗೆ ದಾಸರಾಗಿದ್ದಾರೆ.

ಈ ಮೊಬೈಲ್ ಫೋನ್ ನೋಡುವುದರಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ತುಂಬಾ ನಕಾರಾತ್ಮಕವಾದ ಪರಿಣಾಮ ಬೀಳುತ್ತಿದೆ. ಆದರೆ ಇದು ಪೋಷಕರಿಗೆ ಅರ್ಥವಾಗುತ್ತಿಲ್ಲ.

ಮಕ್ಕಳು ಸುಮ್ಮನಿದ್ದರೆ ಸಾಕು ಎಂಬ ಭಾವ,ಆದರೆ ಮಕ್ಕಳು ಮೊಬೈಲ್‌ಗಳಲ್ಲಿ ಏನನ್ನು (Mobile phone Side effects) ನೋಡುತ್ತಿದ್ದಾರೆ?

ಅವುಗಳಿಂದ ಅವರ ಮನಸ್ಸಿಗೆ ಆಗುವ ಪರಿಣಾಮವೇನು? ಅದೆಲ್ಲವುದರ ಬಗ್ಗೆ ಅರಿವೇ ಇರುವುದಿಲ್ಲ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಮೊಬೈಲ್ ಕುತ್ತು. ಇದೊಂದು ವ್ಯಕ್ತಿತ್ವವನ್ನು ಹೀನವಾಗಿಸೋ ವ್ಯಸನ.

ಮಕ್ಕಳ ಕೈಯಲ್ಲಿ ಮೊಬೈಲ್ ಬೇಡವೇ ಬೇಡ ಎಂದು ಶಿಕ್ಷಣ ಸಂಸ್ಥೆಗಳೇ ಅನೇಕ ನಿಯಮಗಳನ್ನು ಜಾರಿಗೆ ತಂದರೂ, ಆನ್ಲೈನ್ ಶಿಕ್ಷಣದ ಹೆಸರಿನಲ್ಲಿ ಸ್ಮಾರ್ಟ್ ಫೋನ್ ಒಳಗೆ ಮಕ್ಕಳು ಮುಳುಗುವಂತೆ ಮಾಡುತ್ತಿದೆ ಅದೇ ಶಿಕ್ಷಣ ವ್ಯವಸ್ಥೆ.

ಇದನ್ನೂ ಓದಿ: 2023ರ ಐಸಿಸಿ ತಿಂಗಳ ಆಟಗಾರರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್

ಮಕ್ಕಳ ಮನಸ್ಸನ್ನು ಕೇಳಬೇಕಾ ಕೈಯಲ್ಲಿಯೇ ಇರೋ ವಿಶ್ವದಿಂದ ಏನೇನೋ ವೆಬ್‌ಸೈಟ್‌ಗಳನ್ನು(Website) ಜಾಲಾಡಿ ಬಿಡುತ್ತವೆ. ಅಕಸ್ಮಾತ್ ಮೊಬೈಲ್ ಕಸಿದುಕೊಂಡರೆ ಆತ್ಮವಿಶ್ವಾಸವನ್ನೇ ಕಳೆದುಕೊಂಡವರ ಹಾಗೆ ಪರದಾಡುತ್ತಾರೆ.

ಮಕ್ಕಳು ಅಂತಲೇ ಅಲ್ಲ ತೊಟ್ಟಿಲ ಶಿಶುಗಳಿಂದ ಹಿಡಿದು ದೊಡ್ಡವರಾದಿಯಾಗಿ ಎಲ್ಲರೂ ಮೊಬೈಲ್‌ಗೆ ದಾಸರಾಗಿದ್ದಾರೆ. ಈ ಅಂಗೈ ಅಗಲದ ಪೆಟ್ಟಿಗೆಯೊಳಗೆ ಮನುಷ್ಯನ ವ್ಯಕ್ತಿತ್ವವನ್ನೇ ಬದಲಿಸುವ,ಮಕ್ಕಳಿಗೆ ವ್ಯಕ್ತಿತ್ವವೇ ಇಲ್ಲದಂತೆ ಮಾಡುವುದರಲ್ಲಿ ಮೊಬೈಲ್ ಮುಂಚೂಣಿಯಲ್ಲಿದೆ.

ವ್ಯಕ್ತಿ ಅಥವಾ ಮಕ್ಕಳು ಹೆಚ್ಚು ಅಮೂಲ್ಯವಾದ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಾಗೂ ಗೇಮ್(Game) ನಲ್ಲಿ ಕಳೆಯುತ್ತಿದ್ದಾರೆ ಎಂದರೆ ನೋಮೋಫೋಬಿಯಾ ಎಂದು ಕರೆಯುವ ಅಡಿಕ್ಷನ್ ಗೆ ತುತ್ತಾಗುತ್ತಿದ್ದಾನೆ ಎಂದು ಅರ್ಥ.

ಒಂದು ದಿನ ಮೊಬೈಲ್ ಕೈಗೆ ಸಿಗಲಿಲ್ಲವೆಂದರೆ ಮನುಷ್ಯ ಹುಚ್ಚನಂತಾಗುತ್ತಾನೆ.ಒಂದು ರೀತಿಯ ಭಯ ಆತಂಕ ಚಡಪಡಿಕೆ ಜಾಸ್ತಿಯಾಗುತ್ತಾ ಹೋಗುತ್ತದೆ. ಚಿಕ್ಕ ವಯಸ್ಸಿನ ಮಕ್ಕಳು ಯುವಕರು ಈ ಮೊಬೈಲನ್ನು ಅತಿಯಾಗಿ ಬಳಸುವುದರಿಂದ ಲೈಂಗಿಕತೆಯ ಬಗೆಗಿನ ಕುತೂಹಲ ಹೆಚ್ಚುತ್ತಾ ಹೋಗುತ್ತಿದೆ.

ಈ ಕುತೂಹಲವನ್ನು ತಣಿಸಿಕೊಳ್ಳಲು ಅನೇಕ ತಪ್ಪು ದಾರಿಗಳನ್ನು ಹುಡುಕುತ್ತಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದಲ್ಲದೆ ಮಾನವ ಸಂಬಂಧದ ಮೌಲ್ಯಗಳು ಕಣ್ಮರೆಯಾಗುತ್ತಿವೆ.

ಲಂಡನ್ ಯೂನಿವರ್ಸಿಟಿಯ (London Universities) ವರದಿ ಪ್ರಕಾರ ಅತಿಯಾಗಿ ಮೊಬೈಲ್ ಬಳಕೆ ಮಾಡುವುದರಿಂದ ಮೆದುಳಿನ ಕ್ಯಾನ್ಸರ್ (Brain Cancer) ಬರುತ್ತದೆ. ವಿಶ್ವದಲ್ಲಿ ಸುಮಾರು ಶೇಕಡ 80% ಜನ ಮೊಬೈಲ್ ಅಡಿಕ್ಷನ್ ಗೆ ಒಳಗಾಗಿದ್ದಾರೆ.

ಅದರಲ್ಲಿಯೂ ವಿಶೇಷವಾಗಿ ಮಕ್ಕಳು ಈ ಫೋನ್ ಬಳಸುವುದರಿಂದ ಅದರಿಂದ ಹೊರಬರುವ ತರಂಗಗಳು ವ್ಯತಿರಿಕ್ತ ಪ್ರಭಾವ ಬೀರುತ್ತದೆ.

ಪೋಷಕರು ಮತ್ತು ಮಕ್ಕಳ ನಡುವಿನ ಪ್ರೀತಿಯ ಸಂವಹನದ ಕೊರತೆಯಿಂದಾಗಿ ಮಕ್ಕಳು ಮತ್ತು ಪೋಷಕರ ನಡುವೆ ದೊಡ್ಡ ಬಿರುಕೇ ಉಂಟಾಗುತ್ತಿದೆ. ಮಕ್ಕಳು ಹೆಚ್ಚಾಗಿ ಅಂತರ್ಮುಖಿಗಳಾಗುತ್ತಿದ್ದಾರೆ

ಮಕ್ಕಳು ಮೊಬೈಲ್‌ಗೆ ಅಡಿಕ್ಟ್ ಆಗಿರುವುದನ್ನು ಕಂಡು ಹಿಡಿಯುವುದು ಹೇಗೆ?

ಈ ಮೊಬೈಲ್ ಅಡಿಕ್ಷನನ್ನು ಮಕ್ಕಳಲ್ಲಿ ಕಡಿಮೆ ಮಾಡುವುದು ಹೇಗೆ..?

Exit mobile version