ಮುಸ್ಲಿಮರ ಮೇಲಿನ ಹಿಂಸಾಚಾರ ನೋಡಿ ಬೇಸರವಾಗಿದೆ : ಲೇಖಕಿ ಪದ್ಮಾ ಲಕ್ಷ್ಮಿ!

Model

ಭಾರತದಲ್ಲಿ ಮುಸ್ಲಿಮರ ಮೇಲೆ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ. ಸದ್ಯ ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಂ ವಿರೋಧಿ ಘಟನೆಗಳನ್ನು ನೋಡಿ ನನಗೆ ಬೇಸರವಾಗಿದೆ ಎಂದು ಅಮೇರಿಕಾದ ಮಾಡೆಲ್(Model) ಮತ್ತು ಲೇಖಕಿ(Writer) ಪದ್ಮಾ ಲಕ್ಷ್ಮಿ(Padma Lakshmi) ಹೇಳಿದ್ದಾರೆ.


ಈ ಕುರಿತು ಟ್ವೀಟ್(Tweet) ಮಾಡಿರುವ ಅವರು, ಭಾರತ ಸೇರಿದಂತೆ ಜಗತ್ತಿನ ಯಾವುದೇ ಭಾಗದಲ್ಲಿ ಹಿಂದೂ ಧರ್ಮಕ್ಕೆ ಬೆದರಿಕೆ ಇಲ್ಲ. ಭಾರತ ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ. ಈ ವಿಶಾಲವಾದ ಭೂಮಿಯಲ್ಲಿ ಸಾವಿರಾರೂ ವರ್ಷಗಳಿಂದ ಜಗತ್ತಿನ ಎಲ್ಲ ಧರ್ಮಿಯರು ಸಾಮರಸ್ಯದಿಂದ ಬದುಕಿದ್ದಾರೆ. ಮುಂದೆಯೂ ಹೀಗೆ ಎಲ್ಲ ಧರ್ಮದವರು ಶಾಂತಿಯುತವಾಗಿ ಬದುಕಲು ಸಾಧ್ಯವಾಗಬೇಕು ಎಂದು ಮನವಿ ಮಾಡಿದ್ದಾರೆ.

ಭಾರತದಲ್ಲಿ ವ್ಯಾಪಕವಾಗಿ ಮುಸ್ಲಿಂ ವಿರೋಧಿ ಭಾವನೆ ನೆಲೆಯೂರಿದೆ. ಮುಸ್ಲಿಂ ವಿರೋಧಿ ವಾಕ್ಚಾತುರ್ಯವು ಸಾಮಾಜಿಕ ಮಾದ್ಯಮಗಳಲ್ಲಿ ತುಂಬಿಕೊಂಡಿದೆ. ಆದರೆ ಹಿಂದೂಗಳು ಈ ಭಯ ಮತ್ತು ಉತ್ತೇಜಕ ಪ್ರಚಾರಕ್ಕೆ ಬಲಿಯಾಗುವುದಿಲ್ಲ ಎಂದು ನಂಬಿದ್ದೇನೆ. ಈ ರೀತಿಯ ಕೋಮು ಪ್ರಚೋದಕ ಪ್ರಚಾರವೂ ಜನರ ಮನಸ್ಸನ್ನು ಕಲುಷಿತಗೊಳಿಸುತ್ತದೆ. ದ್ವೇಷ ಭಾವನೆ ಬೆಳೆಸುತ್ತದೆ. ಇನ್ನು ನಾವು ಯಾರನ್ನಾದರೂ ತುಚ್ಚವಾಗಿ ಕಂಡರೆ ಆ ನಮ್ಮ ಭಾವನೆ ದಬ್ಬಾಳಿಕೆಗೆ ದಾರಿಯಾಗುತ್ತದೆ. ನನ್ನ ಪ್ರಿಯ ಹಿಂದೂಗಳೇ, ಭಾರತ ಆಧ್ಯಾತ್ಮಿಕ ಭೂಮಿ.

ನಿಜವಾದ ಆಧ್ಯಾತ್ಮವೂ ದ್ವೇಷವನ್ನು ಬಿತ್ತುವುದಿಲ್ಲ. ಭಾರತ ಸೇರಿದಂತೆ ಜಗತ್ತಿನ ಬೇರೆಲ್ಲಿಯೂ ಹಿಂದೂ ಧರ್ಮಕ್ಕೆ ಅಪಾಯವಿಲ್ಲ. ಭಯ ಹುಟ್ಟಿಸುವವರ ಪ್ರಚಾರಕ್ಕೆ ಮಣಿಯಬೇಡಿ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಪದ್ಮಾ ಲಕ್ಷ್ಮಿ ಅವರು ಅಮೇರಿಕಾದ ಪ್ರಸಿದ್ದ ಮಾಡೆಲ್ ಮತ್ತು ಲೇಖಕಿಯಾಗಿದ್ದಾರೆ. ಅವರು ಕಳೆದ ಅನೇಕ ವರ್ಷಳಿಂದ ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರೆ. ಆಧ್ಯಾತ್ಮಿಕ ಸಿದ್ದಿಗಾಗಿ ಅವರು ಭಾರತಕ್ಕೆ ಅನೇಕ ಬಾರಿ ಭೇಟಿ ನೀಡಿದ್ದಾರೆ.

Exit mobile version