Chitradurga: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ರಂಗೇರಿದೆ.ಚುನಾವಣೆಗೆ ಭರದಿಂದ ಸಿದ್ಧತೆ ನಡೆಯುತಿದ್ದು ಪ್ರಚಾರದ ಭರಾಟೆ ಜೋರಾಗಿಯೇ ನಡೆಯುತಿದೆ. ಬಿಜೆಪಿ, ಕಾಂಗ್ರೆಸ್ ಕೇಂದ್ರ ನಾಯಕರು ರಾಜ್ಯದಲ್ಲಿ (Modi visit to Chitradurga) ರೌಂಡ್ಸ್ (Rounds) ಹಾಕುತ್ತಿದ್ಧರೆ, ಇನ್ನು ಬಿಜೆಪಿ (BJP) ನಾಯಕರು ದೇಶದ ನಾಲ್ಕು ದಿಕ್ಕಿನಲ್ಲೂ ಕಮಲದ ಹೂವನ್ನು ಅರಳಿಸಲು ಟೊಂಕ ಕಟ್ಟಿ ನಿಂತಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವೇಳಾಪಟ್ಟಿಯ ಪ್ರಕಾರ, ಇನ್ನು 6 ಬಾರಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
ಅದರಂತೆ ಮೇ 02ರಂದು ಕೋಟೆನಾಡು ಚಿತ್ರದುರ್ಗಕ್ಕೆಬೆಳಿಗ್ಗೆ 10:30ಕ್ಕೆ ಆಗಮಿಸಲಿದ್ದಾರೆ.
ಇಲ್ಲಿರುವ ನಗರದ ಜಯದೇವ ಮುರುಘರಾಜೇಂದ್ರ (Jayadeva Murugarajendra) ಕ್ರೀಡಾಂಗಣದಲ್ಲಿ ನಡೆಯಬೇಕಾಗಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಈ ಹಿಂದೆ ಕಲ್ಯಾಣ ಕರ್ನಾಟಕ ಮತ್ತು ಹಳೇ ಮೈಸೂರಿನಲ್ಲಿ ಏ.29 ಮತ್ತು 30 ರಂದು ಎರಡು ದಿನ ಅಬ್ಬರದ ಪ್ರಚಾರ ಮತ್ತು ರೋಡ್ ಶೋಗಳಲ್ಲಿ ಭಾಗಿಯಾಗಿದ್ಧರು.
ಚಿತ್ರದುರ್ಗದಲ್ಲಿ ಪೊಲೀಸ್ ಬಿಗಿ ಭದ್ರತೆಗಳು ಜೋರಾಗಿವೆ. ಪ್ರಧಾನಿ ಮೋದಿಯವರು ಮೊದಲು ಒನಕೆ ಓಬವ್ವ ಸ್ಟೇಡಿಯಂಗೆ ಆಗಮಿಸಿ ನಂತರಜಯದೇವ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಮಾರ್ಗ ಕೂಡ ಬದಲಾವಣೆ ಮಾಡಲಾಗಿದೆ. ಇನ್ನು ಈ ಬೃಹತ್ ಸಮಾವೇಶದಲ್ಲಿ ಚಿತ್ರದುರ್ಗ, ದಾವಣಗೆರೆ (Modi visit to Chitradurga) ಜಿಲ್ಲೆಯ ಜನ ಸೇರಿದಂತೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.
ಅಲ್ಲದೇ ಪ್ರಧಾನಿ ಮೋದಿ ಸಮಾವೇಶದಲ್ಲಿ ಭಾಗಿಯಾಗಲು ಬರುವವರು ಕಪ್ಪು ಬಟ್ಟೆಗಳನ್ನು ಧರಿಸುವಂತಿಲ್ಲ, ಬೆಂಕಿಪೊಟ್ಟಣ, ಲೈಟರ್ ಕೂಡ ತರುವಂತಿಲ್ಲ.
ಮತ್ತು ನೀರಿನ ಬಾಟಲ್(Bottle) , ಬ್ಯಾಗ್(Bag) , ಸ್ಪೋಟಕ ಸಾಮಗ್ರಿಗಳಿಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಮತ್ತು ಯಾವುದೇ ಅಪಾಯಕಾರಿ ವಸ್ತುಗಳನ್ನು ತರುವಂತಿಲ್ಲ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.

ಇನ್ನು ಈ ಸಮಾವೇಶದಲ್ಲಿಚಿತ್ರದುರ್ಗದ 6ಕ್ಷೇತ್ರ, ದಾವಣಗೆರೆಯ (Davanagere) 4 ಕ್ಷೇತ್ರ ಕ್ಕೆ ಸಂಬಂಧಿಸಿ 10 ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ಮೋದಿ ಮತಯಾಚಿಸಲಿದ್ದಾರೆ.
ಇನ್ನು ಈ ಬಿಗಿ ಬಿಜೆಪಿ ಪ್ರಚಾರ ಸಭೆಗೆ ಒಟ್ಟು 75ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.ಹಾಗೂ 5 ಕಡೆ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆಯನ್ನು ಮಾಡಲಾಗಿದೆ.
ಕೋಟೆನಾಡು ಎಂದೇ ಪ್ರಸಿದ್ದಿಯಾಗಿರುವ ಚಿತ್ರದುರ್ಗದ ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸಲು ಪ್ರಧಾನಿ ಮೋದಿಯವರಿಗೆ ಮ್ಯಾಸ ಬೇಡರ
ಧಿರಿಸಿನ ಮಾದರಿಯ ಸನ್ಮಾನ ಮಾಡಲು ಜಿಲ್ಲಾ ಬಿಜೆಪಿ ನಾಯಕರು ಪ್ಲಾನ್ ಮಾಡಿಕೊಂಡಿಧಾರೆ.
ವೀರ ವನಿತೆ ಒನಕೆ ಓಬವ್ವ (Onake Obavva) ವಿಗ್ರಹವನ್ನು ಬಹುಮಾನವಾಗಿ ಕೊಡಲು ನಿರ್ಧಾರಿಸಿದ್ಧರೆ.
ದಾವಣಗೆರೆ-ಚಿತ್ರದುರ್ಗ-ತುಮಕೂರು (Davanagere-Chitradurga-Tumkur) ಮಾರ್ಗವಾಗಿ ನೇರ ರೈಲು ಮಾರ್ಗ ಯೋಜನೆ,
ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ,ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 5.300ಕೋಟಿ ರೂ ಅನುದಾನ ಬಿಡುಗಡೆ ಸೇರಿ
ಇತರೆ ಅನೇಕ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡುವ ಸಾಧ್ಯತೆ ಇದೆ.ಹಾಗೂ ಚಿತ್ರದುರ್ಗ-ದಾವಣಗೆರೆಯಲ್ಲಿ ಎಸ್ಸಿ-ಎಸ್ಟಿ ಮತಗಳು ನಿರ್ಣಾಯಕವಾಗಿವೆ.
ರಶ್ಮಿತಾ ಅನಿಶ್