ಬಿಸಿಸಿಐ ಅಧ್ಯಕ್ಷರಾದ ಗಂಗೂಲಿಯಿಂದ ಆನ್ಲೈನ್ ಜೂಜಾಟಕ್ಕೆ ಪ್ರೇರಣೆ, ಪಿಐಎಲ್ ದಾಖಲೆ.

Patna : ಭಾರತೀಯ ಕ್ರಿಕೆಟ್ (Cricket) ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (BCCI President Sourav Ganguly) ಹಾಗೂ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ನಟ ಅಮೀರ್ ಖಾನ್ ಮತ್ತು ಇನ್ನುಳಿದ ಇತರರು ಆನ್ಲೈನ್ ಮೂಲಕ ಆಡುವ (Motivation to online game ) ಜೂಜಾಟವನ್ನು ಪ್ರೋತ್ಸಾಹಿಸುತ್ತಿದ್ದಾರೆಂದು

ಆರೋಪಿಸಿ ಬಿಹಾರ ಮುಜಾಪೂರದ ಸಾಮಾಜಿಕ ಕಾರ್ಯಕರ್ತರೊಬ್ಬರು ಜಿಲ್ಲಾ ನ್ಯಾಯಾಲಯದಲ್ಲಿ ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.


ಐಪಿಎಲ್ (IPL) ಗೆ ಸಂಬಂಧಪಟ್ಟ ವಿವಿಧ ಆನ್ಲೈನ್ ಗೇಮ್ ಗಳ ಮೂಲಕ ಜೂಟಾಟದಲ್ಲಿ ಪರೋಕ್ಷವಾಗಿ ತೊಡಗಿಸಿಕೊಳ್ಳುವಂತೆ ಯುವಜನತೆಯನ್ನು,

ಕ್ರೀಡಾಪಟುಗಳು ಮತ್ತು ನಾಯಕ ನಟರು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ತಮ್ಮನಾ ಹಶ್ಮಿ ಎನ್ನುವವರು ಆರೋಪಿಸಿದ್ದಾರೆ.


ಆಕರ್ಷಕ ಬಹುಮಾನಗಳ ಆಮೀಷವನ್ನು ತೋರಿಸಿ ಆನ್ಲೈಲ್ ಗಳ ಮೂಲಕ ಜುಜಾಟಗಳನ್ನು ಆಡುವಂತೆ ಯುವಕರನ್ನು ಜೂಜಾಟದ ಚಟಕ್ಕೆ ಬೀಳುವಂತೆ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಏಪ್ರಿಲ್ 22ರಂದು ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ನಿಗದಿಪಡಿಸಲಾಗಿದೆ ಇವರುಗಳ ಮೇಲೆ ಅರ್ಜಿ ಸಲ್ಲಿಸಿರುವ ಹಶ್ಮಿಯವರು

ಇನ್ನೂ ಹಲವಾರು ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ವ್ಯಕ್ತಿಗಳ ವಿರುದ್ಧ ಪಿಐಎಲ್ ಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ : https://vijayatimes.com/fasal-bima-yojana/


ಆನ್‌ಲೈನ್‌ ಜೂಜಾಟಗಳು ಯುವಕರ ದಾರಿ ತಪ್ಪಿಸುತ್ತಿದೆ. ಅಲ್ಲದೆ ಈ ಬೆಟ್ಟಿಂಗ್ ಆಪ್‌ಗಳು (Betting app) ಯುವಕರಿಂದ ಸಾಲ ಮಾಡಿಸುತ್ತಿದೆ.

ಸಾಲ ತೀರಿಸಲಾಗದೆ ಅನೇಕ ಯುವಕರು ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಕ್ರಿಕೆಟ್‌ ಬೆಟ್ಟಿಂಗ್‌ ಅಂತು ಯುವಜನತೆಯ ಭವಿಷ್ಯಕ್ಕೆ ಮಾರಕವಾಗುತ್ತಿದೆ.

ಎಷ್ಟೋ ಯುವಕರು ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ನಿಂದ ನಷ್ಟ ಅನುಭವಿಸಿ ಊರು ಬಿಟ್ಟು ಓಡಿಹೋದ (Motivation to online game) ಘಟನೆಗಳಿವೆ. ಬರೀ ಯುವಕರಲ್ಲ,

ಶಾಲಾ ಮಕ್ಕಳು ಕೂಡ ಇದಕ್ಕೆ ಬಲಿಯಾಗುತ್ತಿವೆ. ಆನ್‌ಲೈನ್‌ ಬೆಟ್ಟಿಂಗ್‌ ಗೇಮ್‌ ಕಂಪೆನಿಗಳು ನಿರಂತರವಾಗಿ ಕೊಡೋ ಜಾಹಿರಾತುಗಳು,

ಆ ಜಾಹಿರಾತುಗಳಲ್ಲಿ ಬರೋ ಜನಪ್ರಿಯ ಆಟಗಾರರು ಹಾಗೂ ಸಿನೆಮಾ ತಾರೆಯರು ಇವರನ್ನು ಮರಳು ಮಾಡುತ್ತಿದ್ದಾರೆ.

ಇದನ್ನೂ ಓದಿ : https://vijayatimes.com/12-lakh-fine-on-sanju-samson/

ಜಾಹಿರಾತಿಗೆ ಮಾರು ಹೋಗಿ ಮಕ್ಕಳು ಈ ಗೇಮ್‌ಗಳ ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಈ ಹಿಂದೆಯೂ ಸಾಕಷ್ಟು ದೂರುಗಳು, ಈ ನಟರ ವಿರುದ್ಧ ಅಭಿಯಾನಗಳು ನಡೆದಿವೆ.

ಆದ್ರೆ ದುಡ್ಡಿನಾಸೆಗೆ ಆಟಗಾರರು, ಚಿತ್ರನಟರು ನೈತಿಕತೆಯನ್ನು ಮರೆತು ಇಂಥಾ ಮಾರಕ ಜಾಹಿರಾತುಗಳಲ್ಲಿ ಕಾಣಿಸಿಕೊಂಡು ಯುವಕರ ದಾರಿ ತಪ್ಪಿಸುತ್ತಿರುವುದು ಖಂಡಿತವಾಗಿಯೂ ಅಪರಾಧವೆ.

Exit mobile version