ಕಾಶ್ಮೀರದಲ್ಲಿ ಹನಿಮೂನ್ ಕ್ಷಣಗಳನ್ನು ಕಳೆಯುತ್ತಿರುವ ಮೌನಿ ರಾಯ್!

mouni

ಒಂದೆರೆಡು ವಾರಗಳ ಹಿಂದೆಯಷ್ಟೇ ಮದುವೆಯಾದ ನಟಿ ಮೌನಿ ರಾಯ್ ಸದ್ಯ ಬಿಡುವಿಲ್ಲದಂತೆ ತಮ್ಮ ಹನಿಮೂನ್ ಕ್ಷಣಗಳನ್ನು ಪತಿ ಸೂರಜ್ ನಂಬಿಯಾರ್ ಜೊತೆ ಕಾಶ್ಮೀರದ ಚಳಿಯಲ್ಲಿ ಕಳೆಯುತ್ತಿದ್ದಾರೆ. ನಟಿ ಮೌನಿ ರಾಯ್ ಹನಿಮೂನ್ ಕ್ಷಣಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕೆಜಿಎಫ್ ೧ ಸಿನಿಮಾದಲ್ಲಿ ಸೊಂಟ ಬಳುಕಿಸುವ ಮುಖೇನ ಪಡ್ಡೆ ಹುಡುಗರ ಮನಸ್ಸು ಗೆದ್ದ ಬ್ಯೂಟಿ!

ಬಾಲಿವುಡ್ ಅಂಗಳದಲ್ಲಿ ತಮ್ಮದೇ ಖ್ಯಾತಿಯನ್ನು ಗಳಿಸಿದ ಮೌನಿ ರಾಯ್ ಸಿನಿಮಾಗಳಿಗಿಂತ ಹೆಚ್ಚಾಗಿ ಧಾರವಾಹಿಗಳಲ್ಲಿ ಮಿಂಚಿ ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡವರು. ಇಂದು ನಟಿ ಮೌನಿ ರಾಯ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ‘ನಾಗಿನಿ’ ಧಾರವಾಹಿಯಲ್ಲಿ ತಮ್ಮದೇ ವಿಶೇಷ ಶೈಲಿಯಲ್ಲಿ ನಟಿಸಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸದ್ಯ ಕಾಶ್ಮೀರದಲ್ಲಿ ತಮ್ಮ ಹನಿಮೂನ್ ಸಂಭ್ರಮಿಸುತ್ತಿರುವ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್, ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಭಿನ್ನವಾದ ಶೀರ್ಷಿಕೆ ನೀಡಿ ಫೋಟೋ ಪೋಸ್ಟ್‌ ಮಾಡಿದ್ದಾರೆ.

ಹೆಚ್ಚು ಅಡ್ವೆಂಚರ್ ಸ್ಪೋರ್ಟ್ಸ್ ನಲ್ಲಿ ಆಟವಾಡಿರುವ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಒಟ್ಟಾರೆ ನಟಿ ಮೌನಿ ರಾಯ್ ಅವರು ತಮ್ಮ ಪತಿಯೊಂದಿಗೆ ಹನಿಮೂನ್ ಕ್ಷಣಗಳನ್ನು ಭರ್ಜರಿಯಾಗಿ ಸಂಭ್ರಮಿಸುತ್ತಿದ್ದಾರೆ. ಅವರ ಫೋಟೊಗಳಿಗೆ ಅಭಿಮಾನಿಗಳು ಕಮೆಂಟ್ ಮಾಡುವ ಮುಖೇನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

Exit mobile version