ಬಿಜೆಪಿ ಮುಖಂಡನ ಹತ್ಯೆ ; ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾನು ರಾಜೀನಾಮೆ ನೀಡ್ತೇನೆ : ಎಂ.ಪಿ ರೇಣುಕಾಚಾರ್ಯ

ಮಂಗಳವಾರ ರಾತ್ರಿ ಕರ್ನಾಟಕದ(Karnataka) ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯಲ್ಲಿ ಬಿಜೆಪಿ(BJP) ಯುವ ಮುಖಂಡ ಪ್ರವೀಣ್ ನೆಟ್ಟಾರು(Praveen Nettar) ಅವರನ್ನು ಬೈಕ್ ನಲ್ಲಿ ಬಂದ ಅಪರಿಚಿತರು ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದಾರೆ(Murdered).

ಈ ಪ್ರಕರಣ ಕುರಿತು ಮಾತನಾಡಿದ ಬಿಜೆಪಿ ಶಾಸಕ(BJP MLA) ಎಂ.ಪಿ ರೇಣುಕಾಚಾರ್ಯ(MP Renukacharya), ರಾಜ್ಯ ಸರ್ಕಾರವು ಹತ್ಯೆಗೈದ ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ(Resign) ಸಲ್ಲಿಸುವೆ ಎಂದು ಹೇಳಿಕೆ ನೀಡಿದ್ದಾರೆ.

ಹಿಂದೂ ಕಾರ್ಯಕರ್ತರ(Hindu Workers) ಹತ್ಯೆಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ, ಬೆಳ್ಳಾರೆ ಗ್ರಾಮದಲ್ಲಿ ಕೊಲೆಯಾದ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು, ತಮ್ಮ ಕೋಳಿ ಅಂಗಡಿಯನ್ನು ರಾತ್ರಿ 9:30ರ ಸಮಯಕ್ಕೆ ಸರಿಯಾಗಿ ಮುಚ್ಚಿ ಹೋಗುವಾಗ ಅಪರಿಚಿತರಿಂದ ಹತ್ಯೆಯಾಗಿದ್ದಾರೆ.

ಉತ್ತರ ಪ್ರದೇಶ(Uttarpradesh) ಸರ್ಕಾರದ ಬುಲ್ಡೋಜರ್ ನ್ಯಾಯವನ್ನು ಉಲ್ಲೇಖಿಸಿದ ಶಾಸಕ ಎಂ.ಪಿ. ರೇಣಾಕಾಚಾರ್ಯ,

ಯೋಗಿ ಆದಿತ್ಯನಾಥ್(Yogi Adityanath) ಅವರ ಸರ್ಕಾರದ ಮಾದರಿಯಲ್ಲಿ ನಮ್ಮ ಸರ್ಕಾರವು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ, ನಮ್ಮ ಸರ್ಕಾರ ಮತ್ತು ಸಂಘಟನೆಯು ಉಳಿಯಲು ಸಾಧ್ಯ.

ರಾಜ್ಯದಲ್ಲಿ ಪದೇ ಪದೇ ಹಿಂದೂ ಕಾರ್ಯಕರ್ತರ ಹತ್ಯೆಗಳು ಹೆಚ್ಚಾಗುತ್ತಿವೆ. ನಮ್ಮ ಹಿಂದೂ ಕಾರ್ಯಕರ್ತರನ್ನು ನಾವು ರಕ್ಷಿಸಲು ಸಾಧ್ಯವಾಗದಿದ್ದರೆ ಅಧಿಕಾರದಲ್ಲಿರುವುದರಿಂದ ಏನು ಪ್ರಯೋಜನ? ಪ್ರತಿ ಬಾರಿ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ, ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಶ್ರದ್ಧಾಂಜಲಿ,

ಕಠಿಣ ಕ್ರಮಕ್ಕಾಗಿ ಕರೆಗಳು, ದುಷ್ಕರ್ಮಿಗಳ ಮರಣದಂಡನೆ ಮತ್ತು ಸಂತಾಪ ಸೂಚಿಸುವ ಪೋಸ್ಟ್‌ಗಳು ಬರುತ್ತವೆ ವಿನಃ ಅವುಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಹಿಂದೂ ಕಾರ್ಯಕರ್ತರ ರಕ್ಷಣೆ ಆದ್ಯತೆ.

ಹಾಗಾಗಿ ನಮ್ಮ ಸರ್ಕಾರ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ನನ್ನ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸುತ್ತೇನೆ. ಜನರು ಬಯಸುವುದು ನಮ್ಮ ಭಾಷಣಗಳು ಅಥವಾ ಹೇಳಿಕೆಗಳಲ್ಲ, ನಾವು ತೆಗೆದುಕೊಳ್ಳುವ ನಿರ್ಣಾಯಕ ಕ್ರಮಗಳನ್ನು” ಮಾತ್ರ!

ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ ನಾನು ಈ ಸರ್ಕಾರದಲ್ಲಿ ಮುಂದುವರಿಯುತ್ತೇನೆ ಎಂದು ಪದೇ ಪದೇ ಒತ್ತಿ ಹೇಳಿದ್ದಾರೆ.

Exit mobile version