ಸಂಸದರ ಆಸ್ತಿ 10 ವರ್ಷದಲ್ಲಿ ಶೇ 71 ಏರಿಕೆ

New Delhi: 2009 ರಿಂದ 2019 ರ ಅವಧಿಯ ವೇಳೆಗೆ ಲೋಕಸಭೆ ಸಂಸದರಾಗಿ ಮರು ಆಯ್ಕೆಯಾಗಿರುವ 71 ಸಂಸದರ ಆಸ್ತಿಗಳ ಮೌಲ್ಯವು ಶೇ 71 ರಷ್ಟು ಏರಿದೆ.

ಬಿಜೆಪಿ ಸಂಸದರಾದ ಕರ್ನಾಟಕದ ರಮೇಶ್ ಚಂದ್ರಪ್ಪ ಜಿಗಜಿಣಗಿ(Ramesh Chandrappa Jigajinagi) ಹಾಗೂ ಪಿ ಸಿ ಮೋಹನ್‌(PC Mohan) ಅವರ ಆಸ್ತಿ ಮೌಲ್ಯವು ಅತ್ಯಧಿಕವಾಗಿ ಏರಿಕೆ ಕಂಡಿದೆ ಎಮದು ತಿಳಿದು ಬಂದಿದೆ.

ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್(ಎಡಿಆರ್)(ADR) ಲೋಕಸಭಾ ಚುಣಾವಣೆಯ ಸಂದರ್ಭದಲ್ಲಿ ಬಿಜೆಪಿ ನಾಯಕರು ಸಲ್ಲಿಸಿದ್ದ ಸ್ವಯಂ ಪ್ರಮಾಣ ಪತ್ರಗಳನ್ನು ಉಲ್ಲೇಖಿಸಿ ಎಡಿಆರ್ ಈ ವರದಿಯನ್ನು ಸಿದ್ದಪಡಿಸಿದೆ.

ಬಿಜಾಪುರದಿಂದ ಲೋಕಸಭೆ ಸಂಸದರಾಗಿ ಸತತ 6 ಬಾರಿ ಆಯ್ಕೆಯಾಗಿದ್ದ ರಮೇಶ್ ಚಂದ್ರಪ್ಪ ಜಿಗಜಿಣಗಿ ಇವರ ಆಸ್ತಿ 2009 ರಲ್ಲಿ 1.18 ಕೋಟಿ,2014 ರಲ್ಲಿ 8.94 ಕೋಟಿ, 2019 ರ ಅವಧಿಗೆ 50.41 ಕೋಟಿಗೆ ಏರಿಕೆಯಾಗಿದೆ.

ಅಂದರೆ ರಮೇಶ್ ಅವರ ಆಸ್ತಿ 2009 ರಿಂದ 2019 ರವರೆಗೆ ಶೇ 4,189 ರಷ್ಟು ಏರಿಕೆಯಾಗಿದೆ.

ಇನ್ನು ಎರಡನೆಯದಾಗಿ ಬಿಜೆಪಿ ಸಂಸದ ಬೆಂಗಳೂರು(Bengaluru) ಕೇಂದ್ರ ವಿಧಾನಸಭೆ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಪಿ.ಸಿ ಮೋಹನ್ 2 ನೇ ಸ್ಥಾನದಲ್ಲಿದ್ದಾರೆ.

2009 ರಲ್ಲಿ ಇವರ ಆಸ್ತಿ 5.37 ಕೋಟಿ ರೂ ಗಳಿತ್ತು, 2019 ರಲ್ಲಿ 75.55 ಕೋಟಿ ಯಷ್ಟು ಏರಿಕೆಯಾಗಿದೆ.ಅಂದರೆ 2009 ರಿಂದ 2019 ರವರೆಗೆ ಅವರ ಆಸ್ತಿ ಮೌಲ್ಯವು ಶೇ 1,306 ರಷ್ಟು ಏರಿಕೆಯಾಗಿದೆ.

Exit mobile version