ಮುದ್ರಾ ಸಾಲದ ಯೋಜನೆಯಡಿ ಗ್ಯಾರಂಟಿ ನೀಡದೆ 10 ಲಕ್ಷದವರೆಗೆ ಸಾಲ

India:ದೇಶಾದ್ಯಂತ ಎಲ್ಲ ಸಣ್ಣ ವ್ಯಾಪಾರಿಗಳು ಯಾವುದೇ ಗ್ಯಾರಂಟಿ (mudra loan without gurantee) ನೀಡದೆ 10 ಲಕ್ಷದವರೆಗೆ ಸಾಲ ಪಡೆಯಬಹುದು. ಸಾಲಕ್ಕೆ ಅಗತ್ಯವಿರುವ ದಾಖಲೆಗಳು ಇರಬೇಕು ಮತ್ತು ಸಾಲ ಪಡೆಯುವ ಫಲಾನುಭವಿಗಳು ಸಂಪೂರ್ಣ ವ್ಯಾಪಾರ ಯೋಜನೆಯನ್ನು ಹೊಂದಿರಬೇಕು.


ಆಧಾರ್ ಕಾರ್ಡ್, ಪಾಸ್ಪೋರ್ಟ್, ವೋಟರ್ ಐಡಿ ಕಾರ್ಡ್ (Voter I-D Card), ಡ್ರೈವಿಂಗ್ ಲೈಸೆನ್ಸ್ (Driving lincse), ಪ್ಯಾನ ಕಾರ್ಡ್ ಇರಬೇಕು ನೀವೇನಾದ್ರೂ SC-ST ಅಥವಾ OBC ವರ್ಗಕ್ಕೆ ಸೇರಿದವರಾಗಿದ್ದರೆ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.


ಈ ಸಾಲಕ್ಕೆ ಆರು ತಿಂಗಳ ಬ್ಯಾಂಕ್ ಸ್ಟೆಟ್ಮೆಂಟ್ (Bank Statement) ಮತ್ತು ಆದಾಯ ಪ್ರಮಾಣ ಪತ್ರ (Income Certificate) ನೀಡಬೇಕಾಗುತ್ತದೆ. ಜೊತೆಗೆ ವ್ಯಾಪಾರ ವಿಳಾಸ,ವ್ಯಾಪಾರದ ಪುರಾವೆಗಳನ್ನು ಒದಗಿಸಬೇಕು.

ಇದನ್ನು ಓದಿ :ಜೀವನಪೂರ್ತಿ ನಿದ್ರೆಯನ್ನು ಮಾಡದೆ ಎಚ್ಚರವಾಗಿಯೇ ಬದುಕಿದ್ದ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ!


ಈ ಸಾಲದ ಮೇಲಿನ ಸ್ಥಿರ ಬಡ್ಡಿ ದರ ಇರುವುದಿಲ್ಲ. ಕನಿಷ್ಠ ಬಡ್ಡಿ ದರವು 12% ಆಗಿದ್ದು, ವ್ಯಾಪಾರ ಪ್ರಾರಂಭಿಸಲು ಪಲನುಭವಿಗಳು ಸುಲಭ ರೂಪದಲ್ಲಿ ಸಾಲವನ್ನು ಪಡೆಯಬಹುದು. ಅರ್ಜಿಯ ಪ್ರಕ್ರಿಯೆ ಹೀಗಿದೆ.

ನಿಮ್ಮ ಹತ್ತಿರದ ಬ್ಯಾಂಕ್ ನಲ್ಲಿ ಸಾಲದ ಯೋಜನೆಗೆ ಅರ್ಜಿ ನಮೂನೆ ಸಲ್ಲಿಸಬಹುದು. ಜೊತೆಗೆ ಅಗತ್ಯವಿರುವ ಎಲ್ಲಾ ದಾಖಲಾತಿಗಳು (mudra loan without gurantee) ಸಹ ಸಲ್ಲಿಸಬೇಕು.


ಈ ಯೋಜನೆಯ ಅರ್ಜಿಯನ್ನು ಅನ್ ಲೈನ್ ಮೂಲಕ ಸಲ್ಲಿಸಬಹುದು. ಈ ಸಾಲಗಳನ್ನು ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು,ಸಣ್ಣ ಹಣಕಾಸು ಬ್ಯಾಂಕ್ ಗಳು,MFI ಗಳು,ಮತ್ತು NBFC ಗಳ ಮೂಲಕ ಉದ್ಯಮಿಗಳಿಗೆ ಈ ಸಾಲವನ್ನು ಒದಗಿಸಲಾಗುತ್ತದೆ.

ಮುದ್ರಾ ಸಾಲವನ್ನು ಮೂರು ಅಥವಾ ಐದು ವರ್ಷಗಳಲ್ಲಿ ಪಾವತಿಸಲಾಗುವುದು. ಜನರಿಗೆ ಸಾಲದ ನೆರವು ನೀಡಲು ಮತ್ತು ಅವರ ಅಗತ್ಯಗಳಿಗೆ ಅನುಗುಣವಾಗಿ ಸಾಲ ನೀಡಲು ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಪಡೆಯಲು ಅಧಿಕೃತ ವೆಬ್ ಸೈಟ್ udyamimitra.in ಗೆ ಭೇಟಿ ನೀಡಿ

Exit mobile version