ವಯನಾಡ್ ನಲ್ಲಿರುವ ಚೈನ್ ಟ್ರೀಯ ಭಯಾನಕತೆಯ ಹಿಂದಿದೆ ದಾರುಣ ಕಥೆ

Wayanad

ನಮ್ಮ ದೇಶ ಹಲವಾರು ಕುತೂಹಲಗಳ ಆಗರ, ಅನೇಕ ಕುತೂಹಲಕಾರಿಯಾದ ಸ್ಥಳಗಳು ನಮ್ಮಲ್ಲಿವೆ. ಇಂತಹ ಸ್ಥಳಗಳ ವಿಚಿತ್ರವು ದೆವ್ವ, ಭೂತಗಳ ಇರುವಿಕೆಯ ಬಗ್ಗೆ ಇರಬಹುದು, ಅಥವಾ ಅದ್ಭುತವಾದ ಪ್ರಕೃತಿ ಸೌಂದರ್ಯವನ್ನೂ ಕೂಡ ಒಳಗೊಂಡಿರಬಹುದು. ಒಟ್ಟಾರೆ, ಇಂತಹ ವಿಶೇಷವಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಕಣ್ತುಂಬಿಕೊಳ್ಳಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಇಂತಹ ವಿಶೇಷ ತಾಣಗಳಲ್ಲಿ ಒಂದು ‘ಲಕ್ಕಿಡಿ ಗೇಟ್ ವೇ’(Lakkidi Gate Way).


ಹೌದು, ಈ ಪ್ರದೇಶದಲ್ಲಿರುವ ಸರಪಣಿಯ ಮರವನ್ನು ಚೈನ್ ಟ್ರೀ(Chain Tree) ಎಂದೇ ಕರೆಯುತ್ತಾರೆ. ಈ ಮರವು ಕೇರಳ(Kerala) ರಾಜ್ಯದ ವಯನಾಡ್(Waynad) ಜಿಲ್ಲೆಯಲ್ಲಿರುವ ಲಕ್ಕಿಡಿ ಗೇಟ್ ವೇ ಎಂಬ ಸ್ಥಳದಲ್ಲಿ ಇದೆ. ಸ್ಥಳೀಯರ ಕಥೆಯ ಪ್ರಕಾರ ಒಬ್ಬ ಸ್ಥಳೀಯ ನಿವಾಸಿಯೊಬ್ಬನ ಆತ್ಮ ಈ ಮರದಲ್ಲಿ ಸರಪಣಿಯಿಂದ ಬಂಧಿಸಲ್ಪಟ್ಟಿದೆಯಂತೆ. ಈ ಹಿಂದೆ ಬ್ರಿಟೀಷ್ ಆಡಳಿತದ ಸಮಯದಲ್ಲಿ ಬ್ರಿಟೀಷ್ ಇಂಜಿನೀಯರ್ ಒಬ್ಬ ತಮ್ಮ ಕಛೇರಿಗೆ ಸುಲಭವಾದ ಮಾರ್ಗವನ್ನು ಕಂಡು ಹಿಡಿಯಲು ಯೋಜಿಸುತ್ತಿದ್ದ.

ಅದಕ್ಕಾಗಿ ಎಲ್ಲಾ ಸ್ಥಳಗಳ ಬಗ್ಗೆ ಸೂಕ್ಷ್ಮವಾಗಿ ತಿಳಿದಿದ್ದ, ಸ್ಥಳೀಯ ನಿವಾಸಿ ಕರಿಂತಂದಾನ್ ಎಂಬಾತನ ಸಹಾಯವನ್ನು ಪಡೆದ. ಹೀಗಾಗಿ ಲಕ್ಕಿಡಿ ಪಾಸ್ ಅನ್ನು ಶೋಧನೆ ಮಾಡಲು ದೊಡ್ಡ ಮಟ್ಟದ ಕೊಡುಗೆ ನೀಡಿದವನೇ ಈ ಕರಿಂತಂದಾನ್. ಕರಿಂತಂದನ್ ಈ ಮಾರ್ಗವನ್ನು ಕಂಡುಹಿಡಿದ್ದಿದ್ದರಿಂದ ಆ ಗೌರವ ಅವನಿಗೇ ಸಲ್ಲುತ್ತದೆ ಎಂಬ ಹೊಟ್ಟೆಕಿಚ್ಚಿನಿಂದ ಆ ಬ್ರಿಟಿಷ್ ಇಂಜಿನಿಯರ್ ದುರುದ್ದೇಶದಿಂದ ಕರಿಂತಂದನ್‍ನನ್ನು ಕೊಲೆ ಮಾಡಿಸುತ್ತಾನೆ.

ಆದರೆ ಕರಿಂತಂದನ್‍ನ ಆತ್ಮ ಮಾತ್ರ ಆ ಪ್ರದೇಶದಲ್ಲಿ ಅಲೆದಾಡತೊಡಗಿತು, ಆ ಹೊಸದಾರಿಯಲ್ಲಿ ಹೋಗುವವರಿಗೆಲ್ಲಾ ಪೀಡಿಸಲು ಪ್ರಾರಂಭ ಮಾಡಿತು ಎಂದು ಸ್ಥಳೀಯ ಜನ ಹೇಳುತ್ತಾರೆ ಜೊತೆಗೆ ಇದನ್ನೇ ನಂಬುತ್ತಾರೆ. ಈ ಎಲ್ಲಾ ವೃತ್ತಾಂತ ತಿಳಿದ ಒಬ್ಬ ಪಾದ್ರಿ ಆ ಆತ್ಮವನ್ನು ಸರಪಣಿಯೊಂದರಲ್ಲಿ ಬಂಧಿಸಿ ಮರವೊಂದಕ್ಕೆ ಕಟ್ಟಿದರು. ಇದೆ ಆ ಲಕ್ಕಿಡಿಯಲ್ಲಿರುವ ಆ ಚೈನ್ ಕಟ್ ಟ್ರೀ ಅಥವಾ ಸರಪಣಿ ಮರವಾಗಿದೆ ಎಂದು ಅಲ್ಲಿನ ಸ್ಥಳೀಯರು ಇಂದಿಗೂ ನಂಬಿದ್ದಾರೆ.

Exit mobile version