• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಈ ಕಾಡಿಗೆ ಹೋದವರು ಮರಳಿ ಬರಲು ಸಾಧ್ಯವೇ ಇಲ್ಲವಂತೆ : ಈ ವಿಚಿತ್ರ ಕಾಡಿನ ಬಗ್ಗೆ ಇಲ್ಲಿದೆ ಓದಿ ಮಾಹಿತಿ

Mohan Shetty by Mohan Shetty
in ಮಾಹಿತಿ, ವೈರಲ್ ಸುದ್ದಿ
romania
0
SHARES
0
VIEWS
Share on FacebookShare on Twitter

ಪ್ರಪಂಚದಲ್ಲಿ ಹಲವಾರು ಚಿತ್ರ-ವಿಚಿತ್ರ ತಾಣಗಳಿವೆ, ಅಂತಹ ಊಹೆಗೆ ನಿಲುಕದ ತಾಣಗಳಲ್ಲೊಂದು ಹೋಯಾ ಬಿಜು(Hoia Baciu) ಎನ್ನುವ ಕಾಡು (Forest).

ಈ ಕಾಡು ಟ್ರಾನ್ಸಿಲ್ವೇನಿಯಾದ ರೋಮಾನಿಯಾದಲ್ಲಿದೆ (Romania). ದೆವ್ವಗಳ ರಾಜ ಡ್ರ್ಯಾಕುಲಾಗೆ ಸೇರಿದ ಜಾಗವಂತೆ ಇದು.

Forest

ಇಲ್ಲಿ ನಡೆಯುವ ಚಿತ್ರ, ವಿಚಿತ್ರ ಘಟನೆಗಳು ಯಾರ ತರ್ಕಕ್ಕೂ ಸಿಗುವುದಿಲ್ಲ. ರೋಮಾನಿಯಾದ ಬರ್ಮುಡಾ ಟ್ರಯಾಂಗಲ್(Bermuda Triangle) ಎಂದೂ ಈ ಪ್ರದೇಶವನ್ನು ಕರೆಯುತ್ತಾರೆ.

ಸ್ಥಳೀಯರಿಗೆ ಈ ಪ್ರದೇಶವೊಂದು ದುಃಸ್ವಪ್ನ, ಸುಮಾರು 50 ವರ್ಷಗಳ ಹಿಂದೆ ಇಡೀ ವಿಶ್ವಕ್ಕೆ ಈ ಪ್ರದೇಶದ ಅಸ್ತಿತ್ವ ಅರಿವಿಗೆ ಬಂದಿದೆ.

ಆಗಸ್ಟ್ 18, 1968ರಲ್ಲಿ ಮಿಲಿಟರಿ ಟೆಕ್ನಿಷಿಯನ್ ಎಮಿಲ್ ಬರ್ನಿಯಾ ಎಂಬ ವ್ಯಕ್ತಿ (Mystery Hoia Baciu Forest)ಈ ಪ್ರದೇಶದ ಫೋಟೋ ತೆಗೆದಿದ್ದು, ಅದರಿಂದ ಈ ಕಾಡು ವಿಶ್ವದಲ್ಲಿಯೇ ಪ್ರಸಿದ್ಧಿಯಾಯಿತು.

ಈ ಕಾಡಿನಲ್ಲಿ ರಾತ್ರಿ ಹೊತ್ತು ಪ್ರಕಾಶಮಾನವಾದ ಬೆಳಕು ಕಾಣುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಇದನ್ನೂ ಓದಿ : https://vijayatimes.com/bombay-highcourt-verdict-over-divorce/

ಅಷ್ಟೇ ಅಲ್ಲ ಹೆಂಗಳೆಯರು ವಿಚಿತ್ರ ಕೂಗುವ ಸದ್ದು, ಈ ಪ್ರದೇಶದಲ್ಲಿ ಕೇಳಿ ಬರುತ್ತದೆ ಎಂಬುವುದು ಅಲ್ಲಿಯವರು ಅಂಬೋಣ. ಆ ಕಾಡಿನಲ್ಲಿ ಚಿತ್ರ ವಿಚಿತ್ರ ಪ್ರಾಣಿಗಳು ಇವೆಯಂತೆ, ದೊಡ್ಡ ದೊಡ್ಡ ತೋಳಗಳು,

ಹಲವು ತಲೆಗಳಿರುವ ಮನುಷ್ಯರು, ಆಕಾಶದೆತ್ತರದ ಮರಗಳು ಮುಂತಾದ ವಿಚಿತ್ರ ಜೀವಿಗಳಿವೆ ಎನ್ನುವ ಅಭಿಪ್ರಾಯಗಳೂ ಇವೆ.

romania


ಅಪ್ಪಿತಪ್ಪಿ ಈ ಕಾಡೊಳಗೆ ಯಾರಾದರೂ ಕಾಲಿಟ್ಟರೋ, ಮತ್ತೆ ಮರಳುವುದು ಅಸಂಭವವಂತೆ. ಕುರಿ ಕಾಯುವ ಹೊಯಾ ಬಸ್ಯೂ ಎಂಬುವವನು ಇಲ್ಲಿಗೆ ತೆರಳಿದವರನು ಮಿಸ್ ಆದ ನಂತರವೇ ಈ ಕಾಡಿಗೆ ಅವನ ಹೆಸರನ್ನೇ ಇಡಲಾಗಿದೆ.

ಮತ್ತೊಬ್ಬ ಬಾಲಕ ಈ ಕಾಡೊಳಗೆ ಹೋಗಿ ಐದು ವರ್ಷಗಳ ನಂತರ ಮರಳಿದ್ದನಂತೆ.

ಇದನ್ನೂ ಓದಿ : https://vijayatimes.com/pets-should-be-there-in-home/

ಆದರೆ, ಯಾವುದೂ ಅವನಿಗೆ ನೆನಪಿರಲಿಲ್ಲವಂತೆ. ಐದು ವರ್ಷದ ಹಿಂದೆ ಧರಿಸಿದ ಬಟ್ಟೆಯೂ ಹೊಚ್ಚ ಹೊಸತರಂತೆ (Mystery Hoia Baciu Forest) ಇತ್ತಂತೆ! ಹತ್ತು ಹಲವು ಚಿತ್ರ, ವಿಚಿತ್ರ, ತರ್ಕಕ್ಕೆ ನಿಲುಕದ ನಿಗೂಢ ಘಟನೆಗಳಿಗೆ ಈ ಪ್ರದೇಶ ಹೆಸರುವಾಸಿ. ಈ ಕಾಡೊಳಗೆ ಹೋದವರಿಗೆ ಬಗೆ ಬಗೆಯ ಭಯಾನಕ ಅನುಭವಗಳಾಗಿವೆಯಂತೆ.

Mystery Hoia Baciu Forest

ಈ ಕಾಡೊಳಗೆ ನುಗ್ಗಿದ ಮನುಷ್ಯನಿಗೆ ವಿಚಿತ್ರ ಭಯವೊಂದು ಆವರಿಸಿಕೊಳ್ಳುತ್ತದೆಯಂತೆ. ಮತ್ತೆ ಮರಳಿದವರಿಗೆ ದೇಹವೇ ಸುಟ್ಟು ಹೋದಂತೆ ಅನುಭವವಾಗಿದೆಯಂತೆ. ಮೈ ತುರಿಕೆ,

ಮೈ ಜಜ್ಜಿದ ಅನುಭವಗಳೂ ಆಗಿದವರಿದ್ದಾರೆ. ಇನ್ನು, ಈ ಕಾಡಿನ ಫೋಟೋ ತೆಗೆದ ಜೀವಶಾಸ್ತ್ರಜ್ಞನೊಬ್ಬನಿಗೂ ವಿಚಿತ್ರ ಅನುಭವವಾಗಿದೆ.

ಇದನ್ನೂ ಓದಿ : https://vijayatimes.com/student-gets-sanitary-pads-ad-offer/

ಅವನು ಸಾಯೋ ಸ್ವಲ್ಪ ದಿನಗಳ ಮೊದಲು, ಈತ ತೆಗೆದ ಫೋಟೋಗಳೆಲ್ಲವೂ ಮಾಯವಾಗಿದ್ದವಂತೆ. ಹೇಗೆ ಎಂಬುವುದಿನ್ನೂ ನಿಗೂಢ. ಹಾಗಾಗಿ, ಯಾವುದೋ ನಿಗೂಢ ಜೀವಿಗಳು, ದೆವ್ವಗಳು ಈ ಪ್ರದೇಶವನ್ನು ಆಳುತ್ತಿವೆ ಎಂದೇ ಸ್ಥಳೀಯರ ನಂಬಿಕೆ.
  • ಪವಿತ್ರ
Tags: forestHoia BaciuMysteryromania

Related News

ಹಸುವಿನ ಸಗಣಿ ತಿಂದರೆ ನಾರ್ಮಲ್‌ ಡೆಲಿವರಿ ಆಗುತ್ತೆ : ಆರ್‌ಎಸ್‌ಎಸ್‌ ಮುಖಂಡ ಪ್ರಮುಖ್‌ ಶಂಕರ್‌ಲಾಲ್‌
ವೈರಲ್ ಸುದ್ದಿ

ಹಸುವಿನ ಸಗಣಿ ತಿಂದರೆ ನಾರ್ಮಲ್‌ ಡೆಲಿವರಿ ಆಗುತ್ತೆ : ಆರ್‌ಎಸ್‌ಎಸ್‌ ಮುಖಂಡ ಪ್ರಮುಖ್‌ ಶಂಕರ್‌ಲಾಲ್‌

January 28, 2023
ಕಸ ಹೆಕ್ಕಿ ಕೋಟಿ ಗಳಿಸಿ! ಕಸದಿಂದಲೇ ಕೋಟಿ ಕೋಟಿ ಗಳಿಸಿದವರ ರೋಚಕ ಕತೆ.
ಮಾಹಿತಿ

ಕಸ ಹೆಕ್ಕಿ ಕೋಟಿ ಗಳಿಸಿ! ಕಸದಿಂದಲೇ ಕೋಟಿ ಕೋಟಿ ಗಳಿಸಿದವರ ರೋಚಕ ಕತೆ.

January 16, 2023
ಸ್ಯಾಂಟ್ರೋ ರವಿ ಕತೆ ಕೇಳಿದ್ರೆ ಬೆಚ್ಚಿ ಬೀಳ್ತಿರ ! ಈ ಹೆಣ್ಣುಬಾಕನ ಭಯಾನಕ ಹಿಸ್ಟ್ರಿ ಇಲ್ಲಿದೆ
ವೈರಲ್ ಸುದ್ದಿ

ಸ್ಯಾಂಟ್ರೋ ರವಿ ಕತೆ ಕೇಳಿದ್ರೆ ಬೆಚ್ಚಿ ಬೀಳ್ತಿರ ! ಈ ಹೆಣ್ಣುಬಾಕನ ಭಯಾನಕ ಹಿಸ್ಟ್ರಿ ಇಲ್ಲಿದೆ

January 10, 2023
ಬೆಂಗಳೂರು ಮಹಿಳೆಯರಿಗೆ ಸೇಫ್‌ ಅಲ್ವಾ? ಒಂದೇ ವರ್ಷದಲ್ಲಿ 156 ರೇಪ್‌ ಕೇಸ್‌ ದಾಖಲು !
ಮಾಹಿತಿ

ಬೆಂಗಳೂರು ಮಹಿಳೆಯರಿಗೆ ಸೇಫ್‌ ಅಲ್ವಾ? ಒಂದೇ ವರ್ಷದಲ್ಲಿ 156 ರೇಪ್‌ ಕೇಸ್‌ ದಾಖಲು !

January 6, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.