ಹೊಸ ಪೀಳಿಗೆಯ ಡುಕಾಟಿ ಸ್ಕ್ರ್ಯಾಂಬ್ಲರ್‌ ಶ್ರೇಣಿಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ: ಇದರಲ್ಲೇನಿದೆ ಹೊಸ ಫೀಚರ್‌?

ಭಾರತೀಯ ಮಾರುಕಟ್ಟೆಗೆ ಮತ್ತೊಂದು ಸೂಪರ್ ಬೈಕ್ (Bike) ಎಂಟ್ರಿ ಕೊಟ್ಟಿದೆ. ಈ ದುಬಾರಿ ಬೈಕ್‌ನ ವೈಶಿಷ್ಟ್ಯಗಳು, ಎಂಜಿನ್ (New generation Ducati Scrambler) ಸಾಮರ್ಥ್ಯ ಸೇರಿದಂತೆ ಇದರ

ಪ್ರಮುಖ ಮಾಹಿತಿಗಳು ಇಲ್ಲಿದೆ. ಇಟಲಿ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಡುಕಾಟಿಯು ಮುಂದಿನ ಪೀಳಿಗೆಯ ಡುಕಾಟಿ ಸ್ಕ್ರ್ಯಾಂಬ್ಲರ್‌ (Ducati Scrambler) ಶ್ರೇಣಿಯ ಹೊಸ

ಆವೃತ್ತಿಗಳನ್ನು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸೂಪರ್ ಸ್ಟೈಲಿಶ್ ಬೈಕ್‌ನ ಎಕ್ಸ್‌ಶೋರೂಮ್ ಬೆಲೆ 10.40 ಲಕ್ಷ ರೂಪಾಯಿ ಶುರುವಾಗುತ್ತದೆ.

ಈ ಶ್ರೇಣಿಯು ಮೂರು ಮಾದರಿಗಳಲ್ಲಿ ಲಭ್ಯವಿದ್ದು 2023 ಫುಲ್ ಥ್ರೋಟಲ್‌ (Full Petrol) , ಐಕಾನ್ ಮತ್ತು ನೈಟ್‌ಶಿಫ್ಟ್‌ನ ಎಂಬ ಶ್ರೇಣಿಗಳಲ್ಲಿ ಇದು ಮಾರಾಟವಾಗುತ್ತಿದೆ ಇದರಲ್ಲಿ ಐಕಾನ್‌ನ

ಎಕ್ಸ್‌ಶೋರೂಮ್ ಬೆಲೆ 10.40 ಲಕ್ಷ ರೂಪಾಯಿಯಾದರೆ ಇನ್ನುಳಿದ ಬೈಕ್‌ಗಳು ಎಕ್ಸ್‌ಶೋರೂಮ್ (Ex showroom) ಬೆಲೆ 12 ಲಕ್ಷ ರೂಪಾಯಿಗೆ ಸಿಗುತ್ತವೆ.

ಹೊಸ ಪೀಳಿಗೆಯ 2023 ಸ್ಕ್ರ್ಯಾಂಬ್ಲರ್ ರೇಂಜ್‌ 803 ಸಿಸಿ, ಏರ್-ಕೂಲ್ಡ್, 2-ಸಿಲಿಂಡರ್ ಎಂಜಿನ್‌ನಿಂದ ಮಾಡಲ್ಪಟ್ಟಿದೆ ಈ ಎಂಜಿನ್ ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದ್ದು ಈ ಶಕ್ತಿಶಾಲಿ

ಎಂಜಿನ್ 73 ಎಚ್‌ಪಿ ಗರಿಷ್ಟ 65.2 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಹೊರಹಾಕುತ್ತದೆ. ಇದರ ಜೊತೆಗೆ ಹೊಸ ಘಟಕಗಳನ್ನು ಈ ಹೊಸ ಬೈಕ್‌ನಲ್ಲಿ ಪರಿಚಯಿಸಲಾಗಿದೆ.

2023 ಡುಕಾಟಿ ಸ್ಕ್ರ್ಯಾಂಬ್ಲರ್ ಐಕಾನ್ ನವೀಕರಣಗಳನ್ನುಪಡೆದಿದ್ದು ರೈಡರ್ ಕೇಂದ್ರಿತ ಹ್ಯಾಂಡಲ್‌ಬಾರ್ ಮತ್ತು ಸವಾರರು ಹಾಗೂ ಹಿಂಬದಿ ಸವಾರರು ಇಬ್ಬರಿಗೂ ಫ್ಲಾಟರ್ ಸೀಟ್ (Flatter Seat) ಅನ್ನು

ಇದು ಹೊಂದಿದೆ ಅಷ್ಟೇ ಅಲ್ಲದೆ ‘ಡುಕಾಟಿ ಸ್ಕ್ರ್ಯಾಂಬ್ಲರ್’ ಗ್ರಾಫಿಕ್ಸ್ ಅನ್ನು ಒಳಗೊಂಡಿರುವ ಕಪ್ಪು ಅಂಡರ್-ಸೀಟ್ ಸೈಡ್ ಪ್ಯಾನೆಲ್‌ಗಳನ್ನೂ ಇದು ಹೊಂದಿದೆ. ಇದರ ಜೊತೆಗೆ ಸಾಕಷ್ಟು ವೈಶಿಷ್ಟ್ಯಗಳೂ

ಈ ಬೈಕ್‌ನಲ್ಲಿವೆ.

ಸ್ಪೋರ್ಟಿ ಲುಕ್‌ನ ಬೈಕ್ ಇದಾಗಿದ್ದು, ಯುಎಸ್‌ನ ಫ್ಲಾಟ್ ಟ್ರ್ಯಾಕ್ ರೇಸಿಂಗ್‌ನಿಂದ ಸ್ಫೂರ್ತಿ ಪಡೆಯುವ ಸ್ಕ್ರ್ಯಾಂಬ್ಲರ್ ಫುಲ್ ಥ್ರೊಟಲ್ ಬೈಕ್ ಸ್ಕಿಡ್ ಪ್ಲೇಟ್, ಸ್ಪೋರ್ಟ್-ಲುಕ್ ಸೀಟ್ ಕವರ್,

ಮುಂಭಾಗದ ಕವರ್‌ಗಳು ಮತ್ತು ಟರ್ಮಿಗ್ನೋನಿ ಸೈಲೆನ್ಸರ್. (Termignoni Silencer) ಅನ್ನು ಹೊಂದಿದೆ. ಇಷ್ಟೇ ಅಲ್ಲ ಈ ಮಾದರಿಯ ಮುಂಭಾಗದಲ್ಲಿ ಸಣ್ಣ ಫೆಂಡರ್, ಹಿಂಭಾಗದ ಫೆಂಡರ್,3

ಇಂಡಿಕೇಟರ್,ಆಲಾಯ್ ವ್ಹೀಲ್‌ನಲ್ಲಿ ಕೆಂಪು ಟ್ಯಾಗ್‌ಗಳು, ಇಂಡಿಕೇಟರ್‌ಗಳು ಮತ್ತು ಕ್ವಿಕ್ ಶಿಫ್ಟ್ ಅಪ್/ಡೌನ್ ಫಂಕ್ಷನ್ ಅನ್ನೂ ಹೊಂದಿದೆ.

2023 ಸ್ಕ್ರ್ಯಾಂಬ್ಲರ್ ರೇಂಜ್‌ನ ಮತ್ತೊಂದು ಮಾದರಿ ಸ್ಕ್ರಾಂಬ್ಲರ್ ನೈಟ್‌ಶಿಫ್ಟ್. ಇದು ಕ್ಲಾಸಿಕ್ ಮತ್ತು ಪರಿಷ್ಕೃತ ಲುಕ್‌ನೊಂದಿಗೆ ಗಮನ ಸೆಳೆಯುತ್ತದೆ. ಡಾರ್ಕ್ ಲೆದರ್‌ನೊಂದಿಗೆ ಕೆಫೆ ರೇಸರ್-ಎಸ್ಕ್ಯೂ

ಸ್ಯಾಡಲ್, ಫ್ಲಾಟ್-ಸೆಟ್ ವೇರಿಯಬಲ್-ಸೆಕ್ಷನ್ ಹ್ಯಾಂಡಲ್‌ಬಾರ್ ಮತ್ತು ಕೆಫೆ ರೇಸರ್ ಶೈಲಿಯ ಬಾರ್-ಎಂಡ್ ಮಿರರ್‌ಗಳಂತಹ ಸಾಕಷ್ಟು ವಸ್ತುಗಳನ್ನೂ ಒಳಗೊಂಡಿದ್ದು, ಬೈಕ್ ಉತ್ಸಾಹಿಗಳನ್ನು

ಸೆಳೆಯುವಂತಹ ಸಾಕಷ್ಟು ಸಂಗತಿಗಳು (New generation Ducati Scrambler) ಈ ಹೊಸ ಮೋಟರ್‌ ಸೈಕಲ್‌ನಲ್ಲಿದೆ.

2023 ಡುಕಾಟಿ ಸ್ಕ್ರ್ಯಾಂಬ್ಲರ್ ಶ್ರೇಣಿ ಗಮನಾರ್ಹವಾಗಿ ಈಗ ರೋಡ್ ಮತ್ತು ವೆಟ್ ಎರಡು ರೈಡಿಂಗ್ ಮೋಡ್‌ಗಳನ್ನು ಹೊಂದಿದ್ದು ಇದು ಅಡ್ಜೆಸ್ಟೇಬಲ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನೂ ಒಳಗೊಂಡಿದೆ.

ಈ ಬೈಕ್‌ನ ಚಾಸಿಸ್ ಟ್ಯೂಬುಲರ್ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಅನ್ನು ಹೊಂದಿದೆ. ಮತ್ತು ಮುಂಭಾಗದಲ್ಲಿ ಸಿಂಗಲ್ 330 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಕಾರ್ನರಿಂಗ್ ಎಬಿಎಸ್ ಜೊತೆಗೆ 245 ಎಂಎಂ

ಡಿಸ್ಕ್‌ಗಳು ಬ್ರೇಕಿಂಗ್ ಕೆಲಸವನ್ನು ನಿರ್ವಹಿಸುತ್ತವೆ. ಅಷ್ಟೇ ಅಲ್ಲದೆ ಸಂಪೂರ್ಣ ಎಲ್‌ಇಡಿ ಲೈಟಿಂಗ್, 4.3-ಇಂಚಿನ ಬಣ್ಣದ ಟಿಎಫ್‌ಟಿ ಕ್ಲಸ್ಟರ್ ಸೇರಿ ಸಾಕಷ್ಟು ವೈಶಿಷ್ಟ್ಯಗಳನ್ನುಹೊಂದಿದೆ. ಇಷ್ಟೇಅಲ್ಲದೆ

ಹೊಸ ಸ್ಕ್ರ್ಯಾಂಬ್ಲರ್ 4 ಕೆಜಿಯಷ್ಟು ಕಡಿಮೆ ಹಗುರವಾಗಿದೆ.

ಇದನ್ನು ಓದಿ: ಗೃಹಲಕ್ಷ್ಮೀ ಯೋಜನೆಯ 2ನೇ ಕಂತು ಬಿಡುಗಡೆ ಯಾವಾಗ..? ಇಲ್ಲಿದೆ ಮಾಹಿತಿ

Exit mobile version