ದೇಶಕ್ಕೆ ಹೊಸ ಅಪರಾಧ ಸಂಹಿತೆ ; ಹೊಸ ಕಾನೂನುಗಳಲ್ಲೇನಿದೆ..?!

Delhi: ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಮೂರು ಹೊಸ (new penal code) ಅಪರಾಧ ಸಂಹಿಂತೆಗಳನ್ನು ಜಾರಿಗೆ ತರಲು ಮುಂದಾಗಿದೆ.

ನಿನ್ನೆ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಮೂರು ಹೊಸ ಮಸೂದೆಗಳನ್ನು ಮಂಡಿಸಿದ್ಧಾರೆ.

1860ರಲ್ಲಿ ಅಂದಿನ ಬ್ರಿಟಿಷ್ (British) ಸರ್ಕಾರ ಜಾರಿಗೆ ತಂದಿದ್ದ ಭಾರತೀಯ ದಂಡ ಸಂಹಿತೆ ಬದಲಾಗಿ ಭಾರತೀಯ ನ್ಯಾಯ ಸಂಹಿತೆ –2023, ಕ್ರಿಮಿನಲ್ ಪೊಸೀಜರ್ ಕೋಡ್

(Criminal Procedure Code) ಬದಲಿಗೆ ಭಾರತೀಯ ನಾಗರಿಕ ಸುರಕ್ಷತೆ ಸಂಹಿತೆ-2023, ಎವಿಡೆನ್ಸ್ ಆಕ್ಟ್ (Evidence Act) ಬದಲಿಗೆ ಭಾರತೀಯ ಸಾಕ್ಷ್ಯ ಕಾಯ್ದೆ-2023 ಎಂಬ ಮೂರು

ಹೊಸ ಮಸೂದೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸುತ್ತಿದೆ. ಈ ಹೊಸ ಕಾನೂನುಗಳಲ್ಲೇನಿದೆ (new penal code) ಅಂತಾ ನೋಡಿದರೆ,

• ಸಾಮೂಹಿಕ ಅತ್ಯಾಚಾರಕ್ಕೆ ಗರಿಷ್ಠ 20 ವರ್ಷಗಳ ಶಿಕ್ಷೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದರೆ, ಜೀವಿತಾವಧಿ ಶಿಕ್ಷೆ ಅಥವಾ

ಮರಣದಂಡನೆ. ಪದೇ ಪದೇ ಅತ್ಯಾಚಾರ ಅಪರಾಧ ಎಸಗುವ ಆರೋಪಿಗೆ ಜೀವಿತಾವಧಿ ಶಿಕ್ಷೆ ಅಥವಾ ಮರಣದಂಡನೆ

ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಕಂಪನಿಗೆ ಕರ್ನಾಟಕದಲ್ಲಿ ಭಾರೀ ವಿರೋಧ..!


• ಪ್ರತ್ಯೇಕತೆ, ಸಶಸ್ತ್ರ ದಂಗೆ, ವಿಧ್ವಂಸಕ ಚಟುವಟಿಕೆ, ಪ್ರತ್ಯೇಕತಾವಾದಿ ಚಟುವಟಿಕೆ ಅಪರಾಧಗಳನ್ನು ಪರಿಷ್ಕೃತ ಕಾನೂನುಗಳಲ್ಲಿ ಸೇರಿಸಲಾಗಿದೆ.
• ದೇಶದ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಅಂಶಗಳನ್ನು ಸೆಕ್ಷನ್ (Section) 145ರಿಂದ 156ವರೆಗಿನ ಸೆಕ್ಷನ್ಗಳಲ್ಲಿ ಪರಿಚಯಿಸಲಾಗಿದೆ.
• ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಗುಂಪು ಜನಾಂಗ, ಜಾತಿ, ಸಮುದಾಯ, ಭಾಷೆ, ಇತರ ಆಧಾರದ ಮೇಲೆ ಹತ್ಯೆ ನಡೆಸಿದರೆ ಗುಂಪಿನ ಪ್ರತಿ ಸದಸ್ಯನಿಗೆ ಮರಣದಂಡನೆ

ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.

• ದೇಶದ ವಿರುದ್ಧದ ಅಪರಾಧಗಳಿಗೆ 3ರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆ ಇರಲಿದೆ.
• ಗುರುತು ಮರೆಮಾಚಿ ಮಹಿಳೆಯನ್ನು ಮದುವೆ ಆಗುವುದು ಅಪರಾಧ.
• ಆರೋಪಪಟ್ಟಿಯನ್ನು 90 ದಿನಗಳ ಒಳಗೆ ಸಲ್ಲಿಸಬೇಕು. ನ್ಯಾಯಾಲಯವು ಇನ್ನೂ 90 ದಿನಗಳವರಗೆ ಕಾಲಾವಕಾಶ ನೀಡಬಹುದು.
• ಗುಂಪು ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಕನಿಷ್ಠ 7 ವರ್ಷದಿಂದ ಮರಣದಂಡನೆವರೆಗೆ ಶಿಕ್ಷೆ ಇರಲಿದೆ.

• ಕೊಲೆ ಪ್ರಕರಣಗಳಲ್ಲಿ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.• ಅಕ್ರಮ ಆಸ್ತಿ ಖರೀದಿಯಂತಹ ಅಪರಾಧಗಳನ್ನು ಎಸಗಿದರೆ ಮೂರು

ತಿಂಗಳಿಂದ ಮೂರು ವರ್ಷಗಳವರೆಗೆ ಶಿಕ್ಷೆ.


• ದೇಶದ್ರೋಹ ಕಾನೂನನ್ನು ರದ್ದುಗೊಳಿಸಲಾಗಿದೆ. ಭಯೋತ್ಪಾದಕ ಕೃತ್ಯ ಮತ್ತು ಸಂಘಟಿತ ಅಪರಾಧಗಳನ್ನು ಸೇರಿಸಲಾಗಿದೆ.
• ಭಯೋತ್ಪಾನೆ ಅಂದರೇನು ಎನ್ನುವುದನ್ನು ಇದೇ ಮೊದಲ ಬಾರಿಗೆ ವ್ಯಾಖ್ಯಾನಿಸಲಾಗಿದೆ.
• ವಿಡಿಯೊ ದಾಖಲೀಕರಣ ಮಾಡಿಕೊಂಡ ಮೇಲೆ ವಾಹನಗಳನ್ನು ಪ್ರಕರಣ ಮುಗಿಯುವವರೆಗೂ ಇರಿಸಿಕೊಳ್ಳುವ ಅಗತ್ಯ ಇಲ್ಲ.
• ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ, ಸಂತ್ರಸ್ತೆಯ ಹೇಳಿಕೆಯ ವಿಡಿಯೊ ದಾಖಲೀಕರಣವು ಕಡ್ಡಾಯ.
• ಯಾವುದೇ ಪ್ರಕರಣದ ತನಿಖೆಯನ್ನು 180 ದಿನಗಳ ಒಳಗೆ ಮುಗಿಸಿ, ವಿಚಾರಣೆಗೆ ಕಳುಹಿಸಬೇಕು
• ಅಪರಾಧಿಯ ಆಸ್ತಿಯಿಂದಲೇ ಪರಿಹಾರ ನೀಡುವ ಅವಕಾಶ

ಮಹೇಶ್

Exit mobile version