ನಾನು ಮಧ್ಯಮ ವರ್ಗದವಳೇ, ಮಧ್ಯಮ ವರ್ಗದವರ ಕಷ್ಟ ನನಗೆ ತಿಳಿದಿದೆ : ನಿರ್ಮಲಾ ಸೀತಾರಾಮನ್

New delhi : ಸಂಸತ್ತಿನಲ್ಲಿ ಬಜೆಟ್ ಅಧಿವೇಶನಕ್ಕೂ ಮುನ್ನ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala sitaraman middleclass person) ಅವರು, ತಮ್ಮನ್ನು ತಾವು ಮಧ್ಯಮ ವರ್ಗಕ್ಕೆ ಸೇರಿದವರು,

ಹಾಗಾಗಿ ನನಗೆ ಮಧ್ಯಮ ವರ್ಗದ ಜನರ ಕಷ್ಟವೇನು ಎಂಬುದು ತಿಳಿದಿದೆ ಎಂದು (Nirmala sitaraman middleclass person) ಹೇಳಿದ್ದಾರೆ.

ನಾನು ಮಧ್ಯಮ ವರ್ಗದವಳೇ (Middle class), ಮಧ್ಯಮ ವರ್ಗದ ಜನರ ಕಷ್ಟ ನನಗೆ ತಿಳಿದಿದೆ ಮತ್ತು ಈ ವಿಭಾಗವು ಎದುರಿಸುತ್ತಿರುವ ತೊಂದರೆಗಳನ್ನು ಪ್ರತ್ಯೇಕವಾಗಿ ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (Rss) ನಿಯತಕಾಲಿಕೆ ಪಾಂಚಜನ್ಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮಧ್ಯಮ ವರ್ಗಕ್ಕೆ ಸೇರಿದವಳಾಗಿದ್ದೇನೆ

ಮತ್ತು ನನ್ನನ್ನು ನಾನು ಮಧ್ಯಮ ವರ್ಗ ಎಂದು ಗುರುತಿಸಿಕೊಳ್ಳುತ್ತೇನೆ.

ಆದ್ದರಿಂದ ನಾನು ಮಧ್ಯಮ ವರ್ಗಕ್ಕೆ ಸೇರಿದ ಜನರ ಕಷ್ಟವನ್ನು ಅರ್ಥಮಾಡಿಕೊಳ್ಳಬಲ್ಲೆ. ವಾರ್ಷಿಕ 5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ಪ್ರಸ್ತುತ ಸರ್ಕಾರ ಯಾವುದೇ ಹೊಸ ತೆರಿಗೆಯನ್ನು ವಿಧಿಸಿಲ್ಲ!

ಸ್ಮಾರ್ಟ್ ಸಿಟಿಗಳ ನಿರ್ಮಾಣ(Smart city), ಜೀವನ ಸೌಕರ್ಯವನ್ನು ಉತ್ತೇಜಿಸುವುದು ಮತ್ತು ಮಧ್ಯಮ ವರ್ಗದ ಸಮಸ್ಯೆಯನ್ನು ಪರಿಹರಿಸಲು ಮೆಟ್ರೋ ರೈಲು

(Metro train) ಜಾಲವನ್ನು ಅಭಿವೃದ್ಧಿಪಡಿಸುವುದು ಮುಂತಾದ ಹಲವಾರು ಕ್ರಮಗಳನ್ನು ಕೇಂದ್ರವು ಪ್ರಮುಖವಾಗಿ ಕೈಗೊಂಡಿದೆ ಎಂದು ಹೇಳಿದ್ದಾರೆ.

2020 ರಿಂದ ಪ್ರತಿ ಬಜೆಟ್ ಅಧಿವೇಶನದಲ್ಲಿ ಸರ್ಕಾರವು ಬಂಡವಾಳ ವೆಚ್ಚದ ಮೇಲಿನ ವೆಚ್ಚವನ್ನು ಹೆಚ್ಚಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದನ್ನು ಶೇ. 35 ರಿಂದ 7.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಒತ್ತಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (Nrendra modi) ಅವರ ಸರ್ಕಾರ ಇದುವರೆಗೆ ಯಾವುದೇ ಬಜೆಟ್ನಲ್ಲಿ ಮಧ್ಯಮ ವರ್ಗದವರಿಗೆ ಯಾವುದೇ ಹೊಸ ತೆರಿಗೆ ವಿಧಿಸಿಲ್ಲ. 5 ಲಕ್ಷದವರೆಗೆ(ವಾರ್ಷಿಕವಾಗಿ) ಸಂಬಳ ಪಡೆಯುವ

ಜನರಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಮಧ್ಯಮ ವರ್ಗದವರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುತ್ತಾರೆ ಮತ್ತು ನಾವು 27 ಸ್ಥಳಗಳಲ್ಲಿ ಮೆಟ್ರೋ (ರೈಲ್ವೆ) ತಂದಿದ್ದೇವೆ. ಬಹಳಷ್ಟು ಮಧ್ಯಮ ವರ್ಗದ

ಜನರು ಉದ್ಯೋಗದ ಹುಡುಕಾಟದಲ್ಲಿ ನಗರಗಳಿಗೆ ಪ್ರಯಾಣ ಬೆಳಸುತ್ತಿದ್ದಾರೆ ಮತ್ತು ನಾವು ಸ್ಮಾರ್ಟ್ ಸಿಟಿಗಳ ಗುರಿಯತ್ತ ಗಮನಹರಿಸುತ್ತಿದ್ದೇವೆ.

ಮಧ್ಯಮ ವರ್ಗದವರಿಗಾಗಿ ನಾವು ನಮ್ಮ ಕೆಲಸವನ್ನು ಎಂದಿನಂತೆ ಮುಂದುವರಿಸುತ್ತೇವೆ. ಭಾರತ ದೇಶವು 2013 ರಲ್ಲಿ ವಿಶ್ವದಲ್ಲಿ ‘ಫ್ರೇಜಿಲ್ ಫೈವ್’(Fragile five) ಆರ್ಥಿಕತೆಗಳಲ್ಲಿ ಒಂದಾಗಿದೆ.

2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಭಾರತದ ಆರ್ಥಿಕತೆಯು ಗಮನಾರ್ಹ ಬದಲಾವಣೆಗಳಿಗೆ ಹಸೆರಾಗಿದೆ. ಅದು ಈಗ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.

ಇದನ್ನೂ ಓದಿ: https://vijayatimes.com/muruli-vijay-turned-to-foreign-teams/

ಡಾಲರ್‌ಗೆ(Dollar) ಹೋಲಿಸಿದರೆ ರೂಪಾಯಿ ಏರಿಳಿತದ ಹೊರತಾಗಿಯೂ, ಭಾರತದಲ್ಲಿ ಸ್ಥಿರ ಸರ್ಕಾರವಿದೆ ಮತ್ತು ನೀತಿಗಳಲ್ಲಿ ಯಾವುದೇ ಅಸಮತೋಲನವಿಲ್ಲ. ಡಾಲರ್ ಹೊರತುಪಡಿಸಿ ಇತರ ಕರೆನ್ಸಿಗಳಿಗೆ ಹೋಲಿಸಿದರೆ ಭಾರತೀಯ ರೂಪಾಯಿ ಉತ್ತಮವಾಗಿದೆ.

ದ್ವಿತೀಯ ಅನಿಸಿಕೆಗಳನ್ನು ಬಳಸಿಕೊಂಡು ಅಂತಹ ಸೂಚ್ಯಂಕಗಳೊಂದಿಗೆ ಬರುವ ವಿದೇಶಿ ಸಂಸ್ಥೆಗಳು ಸರ್ಕಾರಿ ಸಂಸ್ಥೆಗಳಲ್ಲ. ಇಂತಹ ಸೂಚ್ಯಂಕಗಳನ್ನು ಹೆಚ್ಚಾಗಿ ಭಾರತ ಸರ್ಕಾರವನ್ನು ಗುರಿಯಾಗಿಸಲು ಬಳಸಲಾಗುತ್ತದೆ.

ಈ ಸಂಸ್ಥೆಗಳು ಬಳಸುವ ವಿಧಾನ, ಅವುಗಳ ಡೇಟಾ ಮತ್ತು ಉದ್ದೇಶಗಳನ್ನು ನಾವು ಪ್ರಶ್ನಿಸಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

Exit mobile version