‘ವಿಷ ಪಾತ್ರೆ’ ನಿಮ್ಮ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆ ಇದ್ರೆ ಇಂದೇ ಬಿಸಾಕಿ

ನಾನ್ ಸ್ಟಿಕ್ (Non-stick) ಪಾತ್ರೆ ಬಳಸಿದ್ರೆ ಕ್ಯಾನ್ಸರ್ ಪಕ್ಕಾ ! ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆ ಇದ್ರೆ ಬಿಸಾಡಿ. ನೀವು ತಿನ್ನೋ (non stick side effects) ಅನ್ನವನ್ನೇ ವಿಷ ಮಾಡುತ್ತಿದೆ. ಈ ಪಾತ್ರೆಯಲ್ಲಿ ಊಟ ಅಲ್ಲ ಕ್ಯಾನ್ಸರ್ (Cancer) ತಿಂತಿದ್ದೀವಿ. ಸಂಶೋಧನೆಗಾರರು ಬಿಚ್ಚಿಟ್ಟಿದ್ದಾರೆ ಕರಾಳ !


ನಿಮ್ಮ ಮನೆಯಲ್ಲಿದೆಯಾ ಈ ವಿಷ ಪಾತ್ರೆ? ಹಾಗಾದ್ರೆ ಇಂದೇ ಮನೆಯಿಂದ ಬಿಸಾಕಿ. ಇದನ್ನು ಎಚ್ಚರಿಕೆ ಅಂತ ಆದ್ರೂ ತಿಳ್ಕೊಳ್ಳಿ ಅಥವಾ ಸಲಹೆ ಅಂತ ಆದ್ರೂ ತಿಳ್ಕೊಳ್ಳಿ. ಆದ್ರೆ ಮೊದಲು ಈ ವಿಷಪಾತ್ರೆಯನ್ನು ಮನೆಯಿಂದ ಬಿಸಾಡಿ.

ವಿಷ ಪಾತ್ರೆಯಾ? ಮನೆಯೊಳಗಾ? ಅಂತ ಅಚ್ಚರಿ ಪಡಬೇಡಿ. ಹೌದು ವಿಷ ಪಾತ್ರೆಯೇ. ಇದು ಇಂದು ಪ್ರತಿ ಮನೆಯ ಅಡುಗೆ ಮನೆಯೊಳಗೆ ಸೇರಿದೆ.

ಆ ವಿಷ ಪಾತ್ರೆ ಯಾವುದು ಗೊತ್ತಾ? ನಾನ್‌ ಸ್ಟಿಕ್‌ ತವಾ!
ಯಸ್‌, ನಾನ್‌ ಸ್ಟಿಕ್ ಪಾತ್ರೆಗಳು. ಈ ಪಾತ್ರೆಗಳು ಇಂದು ನಮ್ಮ ದೇಹಕ್ಕೆ ಭಯಾನಕ ಕಾಯಿಲೆ ಕ್ಯಾನ್ಸರ್‌ ಕೊಡೋ ಮೂಲವಾಗಿದೆ.

ನೋಡೋಕೆ ಚಂದ, ಅಡುಗೆ ಮಾಡೋಕೆ ಸುಲಭ ಜೊತೆಗೆ ಗೌರವದ ಪ್ರತೀಕ ಅಂತ ಅನೇಕರು ಬರೀ ನಾನ್‌ ಸ್ಟಿಕ್ ಪಾತ್ರೆಗಳಲ್ಲೇ ಅಡುಗೆ ಮಾಡ್ತಾರೆ.

ಅಂಥಾ ಹವ್ಯಾಸ ಏನಾದ್ರೂ ನೀವು ಮಾಡಿಕೊಂಡಿದ್ರೆ ಇಂದೇ ಅದಕ್ಕೆ ಫುಲ್‌ಸ್ಟಾಪ್(Full Stop) ಹಾಕಿ.


ಸಂಶೋಧನೆಯಲ್ಲಿ ಬಯಲಾಗಿದೆ ಭಯಾನಕ ಸತ್ಯ:


ನಾನ್‌ ಸ್ಟಿಕ್ ಪಾತ್ರೆಗಳು ಕ್ಯಾನ್ಸರ್‌ಕಾರಕ ಅಂತ ಸಂಶೋಧನೆಗಳಿಂದಲೇ ಬಹಿರಂಗಗೊಂಡಿದೆ. ಈ ನಾನ್ ಸ್ಟಿಕ್ ಪಾತ್ರೆಗಳಲ್ಲಿ ಮಾಡಿದ ಆಹಾರವನ್ನು ಹೆಚ್ಚು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ನಾನ್ ಸ್ಟಿಕ್ ಪಾತ್ರೆಗಳನ್ನು ಆಹಾರ ಪಾತ್ರೆಯಲ್ಲಿ ಅಂಟದಂತೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಟೆಫ್ಲಾನ್(Teflon) ಎಂಬ ಕೆಮಿಕಲ್ನನ್ನು ಬಳಸಲಾಗುತ್ತದೆ.

ಇದರಿಂದ ಆಹಾರವನ್ನು ಸುಲಭವಾಗಿ ಬೇಯಿಸಲು ಸಹಾಯವಾಗುತ್ತದೆ. ಪರ್ಫ್ಲೋರೊಕ್ಟಾನೊಯಿಕ್ ಆಸಿಡ್ (ಪಿಎಫ್ಒಎ) ಎಂಬ ರಾಸಾಯನಿಕವನ್ನು ಸ್ಟಿಕ್ ಅಲ್ಲದ ಟೆಫ್ಲಾನ್ (non stick side effects) ಪ್ಯಾನ್ ಗಳ ಲೇಯರ್ ಮಾಡಲು ಬಳಸಲಾಗುತ್ತದೆ.

ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಸ್ತನದ ಕ್ಯಾನ್ಸರ್‌, ಥೈರಾಯ್ಡ್‌, ಕಿಡ್ನಿ ಸಮಸ್ಯೆ ಬರುತ್ತೆ ಜೋಕೆ !


ಇನ್ನು ತಜ್ಞರು ಹೇಳುವ ಪ್ರಕಾರ, ಈ ನಾನ್ ಸ್ಟಿಕ್ ಪಾತ್ರೆಗಳನ್ನು ಹೆಚ್ಚೆಚ್ಚು ಬಳಸಿದ್ರೆ ನಮಗೆ ಸ್ತನದ ಕ್ಯಾನ್ಸರ್ ,ಥೈರಾಯಿಡ್ (Thyroid) ಮತ್ತು ಮೂತ್ರಪಿಂಡದ ಕಾಯಿಲೆ ಕಾಡುತ್ತದೆ.

ಅಷ್ಟೇ ಅಲ್ಲದೆ ಟೆಫ್ಲಾನ್‌ನಲ್ಲಿ ಬಳಸುವ ಪಾಲಿಟೆಟ್ರಾಫ್ಲೋರೋಎಥಿಲೀನ್ (ಪಿಟಿಎಫ್ಇ) 570°F ಗಿಂತ ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದರೆ ಟೆಫ್ಲಾನ್ ಲೇಪನವು ಹೊಡೆಯಲು ಪ್ರಾರಂಭಿಸುತ್ತದೆ ಇದು ಗಾಳಿಯಲ್ಲಿ ವಿಷಕಾರಿ ರಾಸಾಯನಗಳನ್ನು ಬಿಡುಗಡೆ ಮಾಡುತ್ತದೆ.

ಈ ವಿಷಕಾರಿ ಹೊಗೆಯನ್ನು ಉಸಿರಾಡಿದಾಗ ಜ್ವರದಂತಹ ರೋಗ ಲಕ್ಷಣಗಳಿಗೆ ಕಂಡು ಬರುತ್ತೆ. ಅಲ್ಲದೆ ಶೀತ ,ಜ್ವರ ತಲೆನೋವುಗಳಂತಹ ಸಮಸ್ಯೆಗಳು ಕಾಡ ಬಹುದು ಎಚ್ಚರ !


ಇತ್ತೀಚಿನ ದಿನಗಳಲ್ಲಿ ಈ ನಾನಾಸ್ಟಿಕ್ ಪಾತ್ರೆಗಳ ನಾನಾ ಕಂಪೆನಿಗಳು ತಲೆ ಎತ್ತಿವೆ. ಅವುಗಳ ಪೈಕಿ ಕಡಿಮೆ ಬೆಲೆಗೆ ಕೊಡೋ ಅತ್ಯಂತ ಕಳಪೆ ಗುಣಮಟ್ಟದ ಪಾತ್ರೆಗಳು ಅತ್ಯಂತ ಅಪಾಯಕಾರಿಯಾಗಿವೆ.

ನಾನ್‌ಸ್ಟಿಕ್ ಪಾತ್ರೆಗಳೇ ಅಪಾಯಕಾರಿ, ಇನ್ನು ಇಂಥಾ ಕಳಪೆ ಪಾತ್ರೆಗಳು ಇನ್ನೆಷ್ಟು ದೇಹಕ್ಕೆ ತೊಂದರೆಯುಂಟು ಮಾಡಬಲ್ಲವು. ಅದರ ಜೊತೆಗೆ ಈ ನಾನ್‌ ಸ್ಟಿಕ್ ಪಾತ್ರೆಗಳ ಕೋಟಿಂಗ್ ಹೋದ ಬಳಿಕ ಬಳಸೋದು ಇನ್ನೂ ಅಪಾಯಕಾರಿ.

ಆದ್ರೆ ನಮ್ಮ ಜನರಿಗೆ ಇದರ ಬಗ್ಗೆ ಜ್ಞಾನವೇ ಇಲ್ಲ, ಅಪಾಯದ ಅರಿವೂ ಇಲ್ಲ. ಹಾಗಾಗಿ ಇಂಥಾ ಪಾತ್ರೆಗಳನ್ನು ಬಳಸಿ ಮತ್ತಷ್ಟು ದೇಹವನ್ನು ಅಪಾಯದಂಚಿಗೆ ತಳ್ಳುತ್ತಿದ್ದಾರೆ.


ಹಾಗಾಗಿ ಸ್ನೇಹಿತ್ರೆ. ಇಂದೇ ಈ ನಾನ್‌ ಸ್ಟಿಕ್ ಪಾತ್ರೆಗಳಿಗೆ ಗುಡ್‌ಬೈ ಹೇಳಿ. ಮಣ್ಣಿನ ಪಾತ್ರೆ, ತಾಮ್ರ ,ಹಿತ್ತಾಳೆಯಂತಹ ಪಾತ್ರೆಗಳನ್ನು ಉಪಯೋಗಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.


ಪ್ರೀತು ಮಹೇಂದರ್‌

Exit mobile version