ಸಣ್ಣ ತಗಡಿನ ಶೆಡ್​ನಲ್ಲಿ ಕೇವಲ ಎರಡು ಬಲ್ಬ್ ಇರುವ 90ರ ವೃದ್ಧೆಯ ಮನೆಗೆ 1 ಲಕ್ಷ ವಿದ್ಯುತ್ ಬಿಲ್: ಕಣ್ಣೀರಿಟ್ಟ ಅಜ್ಜಿ

ಕೊಪ್ಪಳ: ಇತ್ತೀಚಿನ ವರದಿಗಳ ಪ್ರಕಾರ, ಕರ್ನಾಟಕ (one lakh electricity bill) ಸರ್ಕಾರದ ಗೃಹ ಜ್ಯೋತಿ (Gruha Jyoti Scheme) ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ

ಮಾಡಿದ ಬೆನ್ನಲ್ಲೇ, ರಾಜ್ಯದಾದ್ಯಂತ ಅನೇಕ ಮನೆಗಳು ದುಬಾರಿ ವಿದ್ಯುತ್ ಬಿಲ್ (one lakh electricity bill) ಪಡೆಯುತ್ತಿವೆ.

ಉದಾಹರಣೆಗೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ನಿವಾಸಿಯೊಬ್ಬರು 7.71 ಲಕ್ಷ ರೂಪಾಯಿ ಬಿಲ್ ಪಡೆದಿದ್ದಾರೆ. ಜತೆಗೆ ಬೆಳಗಾವಿಯ (Belgaum) ವಿಟಿಯು ವಿಶ್ವವಿದ್ಯಾಯಲಕ್ಕೆ

ಬರೋಬ್ಬರಿ 18 ಲಕ್ಷ ರೂ. ವಿದ್ಯುತ್ ಬಿಲ್ ಹೆಸ್ಕಾಂ(HESCOM) ನೀಡಿರುವುದು ಬೆಳಕಿಗೆ ಬಂದಿತ್ತು. ಅದೇ ರೀತಿ ಇದೀಗ ಕೊಪ್ಪಳ ಮೂಲದ ವೃದ್ದೆಯ ಮನೆಗೆ ಲಕ್ಷ ಲಕ್ಷ ಕರೆಂಟ್ ಬಿಲ್ ಬಂದಿದೆ.

ಹೌದು… ಕೊಪ್ಪಳದ (Koppal) ಭಾಗ್ಯನಗರದ ಚಿಕ್ಕ ತಗಡಿನ ಶೆಡ್‌ನಲ್ಲಿ ವಾಸವಿದ್ದು, ಕೇವಲ ಎರಡು ಬಲ್ಬ್‌ಗಳನ್ನು ಹೊಂದಿರುವ 90 ವರ್ಷದ ಗೀರಿಜಮ್ಮ (Geerijamma) ಎಂಬುವವರ ಮನೆಗೆ ಕೂಡ

ರೂ. ಆರು ತಿಂಗಳ ಬಳಕೆಗೆ 1 ಲಕ್ಷ ರೂ.ಬಿಲ್ ಬಂದಿದೆ. ಈ ಹಿಂದೆ ಗೀರಿಜಮ್ಮ ಅವರಿಗೆ ಭಾಗ್ಯಜ್ಯೋತಿ(Bhagya Jyoti) ಯೋಜನೆಯಡಿ ವಿದ್ಯುತ್ ಸಂಪರ್ಕವನ್ನು ನೀಡಲಾಗಿತ್ತು,

ಇದರ ಪರಿಣಾಮವಾಗಿ ತಿಂಗಳಿಗೆ ಕೇವಲ ರೂ. 70 ರಿಂದ 80. ಬಿಲ್ ಬರುತಿತ್ತು.

ಇದನ್ನೂ ಓದಿ : ಕನಿಷ್ಠ 7 ಭಾರತೀಯ ಕೆಮ್ಮು ಸಿರಪ್ ಗಳು ವಿಷಕಾರಿಯಾಗಿವೆ : ವಿಶ್ವ ಆರೋಗ್ಯ ಸಂಸ್ಥೆ

ಆದರೆ ವೃದ್ದೆಯ ಮನೆಗೆ ಆರು ತಿಂಗಳ ಹಿಂದೆ ಜೆಸ್ಕಾಂ(JESCOM) ಸಿಬ್ಬಂದಿ ಮೀಟರ್ ಅಳವಡಿಸಿಸಿದ್ದಾರೆ ಅಂದಿನಿಂದ ಇಂದಿನವರೆಗೆ ಅಜ್ಜಿಯ ಮನೆಗೆ ಒಟ್ಟು ರೂ. 1,03,315 ರೂ. ವಿದ್ಯುತ್ ಬಿಲ್ ನೀಡಲಾಗಿದ್ದು,

ಇದರಿಂದ ಅಜ್ಜಿ ಶಾಕ್ ಆಗಿದ್ದಾರೆ.

ಈ ಅಜ್ಜಿ ಒಂದೊತ್ತಿನ ಊಟಕ್ಕೆ ಕೂಡ ಪರದಾಡುತ್ತಿದ್ದಾರೆ ಆದರೆ ಇದೀಗ 1 ಲಕ್ಷ ರೂ. ವಿದ್ಯುತ್ ಬಿಲ್ ಹೇಗೆ ಕಟ್ಟುವುದು ಎಂದು ಕಣ್ಣೀರಿಡುತ್ತಿದ್ದಾರೆ.ಇನ್ನು ಒಂದು ತಗಡಿನ ಶೆಡ್ ಮನೆಯಲ್ಲಿ ಕೇವಲ ಎರಡು ಬಲ್ಬ್​

ಉಪಯೋಗಿಸಿತ್ತಿದ್ದಾರೆ ಅಷ್ಟಕ್ಕೇ ಲಕ್ಷಗಟ್ಟಲೇ ವಿದ್ಯುತ್​ ಬಿಲ್​ ಬರುತ್ತಾ ಎನ್ನುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ರೀತಿ ಅವಾಂತರ ಮೀಟರ್ ರೀಡರ್ (ಎಡವಟ್ಟಿನಿಂದ ಆಗಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಜೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಇಷ್ಟೊಂದು ಬಿಲ್ ಏಕೆ ಬಂದಿದೆ ಎಂದು ಪರಿಶೀಲಿಸಬೇಕಿದೆ. ಒಟ್ಟಿನಲ್ಲಿ ವಿದ್ಯುತ್​ ಸರಬರಾಜು ಇಲಾಖೆಯ ರಾಜ್ಯದಲ್ಲಿ ವಿದ್ಯುತ್​ ಬಿಲ್​ ಹೆಚ್ಚಳದ

ಪ್ರಕರಣಗಳು ಮೀಟರ್ ರೀಡರ್​ ಸಿಬ್ಬಂದಿ ಎಡವಟ್ಟುಗಳಿಂದ ಪದೇ ಪದೇ ಮರುಕಳಿಸುತ್ತಿವೆ. ಇಂಧನ ಇಲಾಖೆ ಹೀಗಾಗಿ ಈ ಬಗ್ಗೆ ಗಮನಹರಿಸಬೇಕಿದೆ.

ರಶ್ಮಿತಾ ಅನೀಶ್

Exit mobile version