ಸಿಹಿ ಸುದ್ದಿ: ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕಡಿಮೆ ಬೆಲೆಗೆ ಸರ್ಕಾರದಿಂದ ಈರುಳ್ಳಿ ಮಾರಾಟ

New Delhi: ಈರುಳ್ಳಿ (Onion) ಬೆಲೆ ಇದೀಗ 90 ರೂವರೆಗೂ ಹೋಗಿದ್ದು, ಕಳೆದವಾರ ಕಿಲೋಗೆ 30 ರೂ ಇತ್ತು. ಈ (Onion Discount Sale – Central Govt) ಹಿನ್ನೆಲೆಯಲ್ಲಿ ಸರ್ಕಾರ

ತನ್ನಲ್ಲಿರುವ ದಾಸ್ತಾನು ಬಳಸಿಕೊಂಡು ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರತೊಡಗಿದ್ದು, ವರದಿ ಪ್ರಕಾರ ಸರ್ಕಾರ ದೇಶದಾದ್ಯಂತ 170 ನಗರಗಳಲ್ಲಿ ಈರುಳ್ಳಿ ಅಂಗಡಿಗಳನ್ನು ತೆರೆದಿದೆ.

ಇಲ್ಲಿ ಕಿಲೋಗೆ 25 ರೂನಂತೆ (Onion Discount Sale – Central Govt) ಈರುಳ್ಳಿಯನ್ನು ಮಾರಲಾಗುತ್ತಿದೆ.

ಈರುಳ್ಳಿ ಬೆಲೆ ದೇಶದಲ್ಲೆಡೆ ಗಗನಕ್ಕೇರಿದ್ದು, ಕಳೆದ ಒಂದು ವಾರದಲ್ಲಿ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ಕೆಲವೆಡೆ ಈರುಳ್ಳಿ ಬೆಲೆ ನೂರು ರೂ ಸಮೀಪಕ್ಕೆ ಹೋಗಿದ್ದು ಬೆಂಗಳೂರಿನಲ್ಲೂ (Bengaluru)

ಹಲವೆಡೆ ಸರ್ಕಾರ ಈರುಳ್ಳಿ ಅಂಗಡಿಗಳನ್ನು ತೆರೆದು ರಿಯಾಯಿತಿ ದರದಲ್ಲಿ ಮಾರುತ್ತಿದೆ.

ಈ ಹಿಂದೆ ಟೊಮೆಟೋ (Tomato) ಬೆಲೆ ಹೆಚ್ಚಾದಾಗ ಸರ್ಕಾರ ತನ್ನಲ್ಲಿರುವ ಟೊಮೆಟೋ ದಾಸ್ತಾನು ಬಳಸಿ ಮೊಬೈಲ್ ವ್ಯಾನುಗಳ ಮೂಲಕ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿತ್ತು.

ಈಗ ಈರುಳ್ಳಿಯನ್ನೂ ಮೊಬೈಲ್ ವ್ಯಾನ್​ಗಳ (Mobile Van) ಮೂಲಕ ಮಾರಾಟ ಮಾಡುತ್ತಿದ್ದು, ಬೆಂಗಳೂರು ನಗರ ಸೇರಿದಂತೆ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಈ ಮೊಬೈಲ್ ವ್ಯಾನ್​ಗಳು

ಈರುಳ್ಳಿ ಹೊತ್ತು ಸಾಗಲಿವೆ.

ಬೆಂಗಳೂರು, ಹೈದರಾಬಾದ್ (Hyderabad), ಜೈಪುರ, ಲುಧಿಯಾನ, ವಾರಾಣಸಿ, ರೋಹ್ತಕ್, ಶ್ರೀನಗರ್, ಭೋಪಾಲ್ (Bhopal), ಇಂದೋರ್, ಭುಬನೇಶ್ವರ್ ಮೊದಲಾದ ನಗರಗಳಲ್ಲಿ

ಈ ಮೊಬೈಲ್ ವ್ಯಾನ್​ಗಳಲ್ಲಿ ಸರ್ಕಾರ ಈರುಳ್ಳಿ ಮಾರುತ್ತಿದ್ದು, ದೆಹಲಿ ಎನ್​ಸಿಆರ್ (Delhi NCR) ಪ್ರದೇಶದಲ್ಲಿ ಅತಿಹೆಚ್ಚು, ಅಂದರೆ 71 ಈರುಳ್ಳಿ ವ್ಯಾನ್​ಗಳು ಓಡಾಡಲಿವೆ.

ಸಾಮಾನ್ಯವಾಗಿ ಅಡುಗೆಯಲ್ಲಿ ಬಳಕೆ ಮಾಡುವ ತರಕಾರಿಗಳಲ್ಲಿ ಈರುಳ್ಳಿಯೂ ಒಂದಾಗಿದ್ದು, ಇದರ ಬೆಲೆ ಏರಿಕೆಯಾದರೆ ಹಣದುಬ್ಬರವೂ ಏರುತ್ತದೆ. ಹಾಗಾಗಿ ಈರುಳ್ಳಿ ಬೆಲೆ ನಿಯಂತ್ರಿಸಲು

ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈರುಳ್ಳಿಯ ಕನಿಷ್ಠ ರಫ್ತು ಬೆಲೆ ನಿಗದಿ ಮಾಡಿರುವುದೂ ಒಂದು ಕ್ರಮ.

ಸರ್ಕಾರ ಈರುಳ್ಳಿ ದಾಸ್ತಾನು ಹೆಚ್ಚು ಮಾಡಿದೆ. 2 ಲಕ್ಷ ಟನ್​ಗಳಷ್ಟು ಹೆಚ್ಚುವರಿಯಾಗಿ ಈರುಳ್ಳಿಯನ್ನು ಸರ್ಕಾರ ಖರೀದಿಸಿದೆ. ಇದರೊಂದಿಗೆ ಸರ್ಕಾರದ ಬಳಿ ಇರುವ ಈರುಳ್ಳಿ ಸಂಗ್ರಹ 7 ಲಕ್ಷ ಟನ್ ಆಗಿದೆ.

ಈ ಸಂಗ್ರಹದಿಂದ ಎಲ್ಲೆಡೆ ರಿಯಾಯಿತಿ ದರದಲ್ಲಿ ಈರುಳ್ಳಿಯನ್ನು ಮಾರುತ್ತಿದೆ. ಇದರ ಜೊತೆಗೆ, ಈರುಳ್ಳಿಗೆ ಕನಿಷ್ಠ ರಫ್ತು ಬೆಲೆ ನಿಗದಿ ಮಾಡಿರುವುದರಿಂದ ಈರುಳ್ಳಿ ರಫ್ತನ್ನು ನಿರ್ಬಂಧಿಸಿದಂತಾಗಿ,

ದೇಶೀಯವಾಗಿ ಅದರ ಲಭ್ಯತೆ ಹೆಚ್ಚುತ್ತದೆ. ಈ ಮೂಲಕ ಬೆಲೆ ನಿಯಂತ್ರಣ ಸಾಧ್ಯವಾಗುತ್ತದೆ.

ಇದನ್ನು ಓದಿ: ಮಾಂಸದ ಅಂಗಡಿಯು ಧಾರ್ಮಿಕ ಸ್ಥಳಗಳಿಂದ 150 ಮೀಟರ್‌ ಅಂತರವಿರಬೇಕು: ದಿಲ್ಲಿ ಪಾಲಿಕೆ ಹೊಸ ನೀತಿ

Exit mobile version