ಜೂನ್ 12ಕ್ಕೆ ಪಾಟ್ನಾದಲ್ಲಿ ಮಹಾಘಟ್‌ ಬಂಧನ್‌ ಸಭೆ: ನಿತೀಶ್‌ ಕುಮಾರ್‌ ಆಹ್ವಾನ ಸ್ವೀಕರಿಸಿದ ಕಾಂಗ್ರೆಸ್‌

Delhi: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (BJP) ವಿರುದ್ದ ಮಹಾಘಟ್‌ ಬಂದನ್‌ ರಚಿಸಲು ವಿಪಕ್ಷಗಳು ಭಾರೀ ತಯಾರಿಯನ್ನೇ ನಡೆಸಿವೆ. ಅದರ ಭಾಗವಾಗಿ ಕಳೆದ ಕೆಲ ದಿನಗಳಿಂದ ತಂತ್ರಗಾರಿಕೆಗಳನ್ನು (opposition party meeting) ನಡೆಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ (Nitish Kumar), ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ.


ಜೂನ್ 12ರಂದು ಬಿಹಾರದ (Bihar) ರಾಜಧಾನಿ ಪಾಟ್ನಾದಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಸಭೆಗೆ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಪಕ್ಷವನ್ನೂ ಆಹ್ವಾನಿಸಿದ್ದು,

ಆಹ್ವಾನವನ್ನು ಕಾಂಗ್ರೆಸ್ ಸ್ವೀಕರಿಸಿದೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ (Adhir Ranjan Chaudhary) ಹೇಳಿದ್ದಾರೆ.

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ಸಂಸದ ಅಧೀರ್ ರಂಜನ್ ಚೌಧರಿ, ಪ್ರತಿಪಕ್ಷಗಳು ಒಂದಾದರೆ,

ನರೇಂದ್ರ ಮೋದಿಯನ್ನು ಸೋಲಿಸುವ ಅವಕಾಶವಿದೆ. ನಾವು ಮೊದಲ ದಿನದಿಂದಲೂ ಇತರ ವಿರೋಧ ಪಕ್ಷಗಳಿಗೆ ಇದನ್ನೇ ಹೇಳುತ್ತಿದ್ದೇವೆ.

ಆದರೆ ವಿರೋಧ ಪಕ್ಷದ ಕೆಲವರು ಇದನ್ನು ಒಪ್ಪುತ್ತಾರೆ ಮತ್ತು ಕೆಲವರು ಒಪ್ಪುವುದಿಲ್ಲ. ಕಾಂಗ್ರೆಸ್‌ನೊಂದಿಗೆ ಸಮಸ್ಯೆಗಳನ್ನು ಹೊಂದಿರುವ ಕೆಲವು (opposition party meeting) ಪ್ರಾದೇಶಿಕ ಪಕ್ಷಗಳು ಬರುವುದನ್ನು ನಾವು ಎದುರು ನೋಡುತ್ತಿದ್ದೇವೆ.

https://youtube.com/shorts/v_467g-UD_E?feature=share


ವಿರೋಧ ಪಕ್ಷಗಳಲ್ಲಿರುವ ಸಣ್ಣ ಬಿರುಕುಗಳಿಂದಲೇ ಬಿಜೆಪಿ (BJP) ಅಧಿಕಾರಕ್ಕೆ ಬರುತ್ತಿದೆ. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ

ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುವ ಮೂಲಕ ನರೇಂದ್ರ ಮೋದಿ (Narendra Modi) ಸರ್ಕಾರವನ್ನು ಕಿತ್ತೊಗೆಯುತ್ತೇವೆ.

ಪ್ರತಿಪಕ್ಷಗಳು ಒಗ್ಗೂಡಿದರೆ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಹಾಗಾಗಿ ನಿತೀಶ್ ಜೀ ವಿಪಕ್ಷಗಳೆಲ್ಲಾ ಒಂದಾಗಲು ಕರೆ ನೀಡಿದ್ದಾರೆ.

ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಪಕ್ಷವನ್ನು ಆಹ್ವಾನಿಸಿದ್ದು, ಹೀಗಾಗಿ ಕಾಂಗ್ರೆಸ್ ಪಾಟ್ನಾದಲ್ಲಿ ನಡೆಯಲಿರುವ ಸಭೆಗೆ ಹೋಗುತ್ತದೆ. ಇತರ ಪ್ರಾದೇಶಿಕ ಪಕ್ಷಗಳು ಸಭೆಗೆ ಬರುವ ನಿರೀಕ್ಷೆಯಿದೆ ಎಂದು ಹೇಳಿದ್ಧಾರೆ.

ಇನ್ನು ಈಗಾಗಲೇ ದೇಶದ ಅನೇಕ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿಯಾಗಿರುವ ನಿತೀಶ್ ಕುಮಾರ್ ಅವರು ವಿಪಕ್ಷಗಳನ್ನು ಬಿಜೆಪಿ ವಿರುದ್ದ ಒಗ್ಗೂಡಿಸಲು ಪ್ರಯತ್ನ ನಡೆಸಿದ್ದಾರೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) , ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ತೆಲಂಗಾಣದ ಕೆಸಿಆರ್ ಸೇರಿದಂತೆ ಅನೇಕ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಇನ್ನು ನಿತೀಶ್ ಕುಮಾರ್ ಅವರು ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿಯಾದ ನಂತರ ಪಾಟ್ನಾದಲ್ಲಿ ನಡೆಯಲಿರುವ ಸಭೆಯ ದಿನಾಂಕವನ್ನು ನಿರ್ಧರಿಸಲಾಗಿದೆ.

Exit mobile version