ಹಾಲಿನ ಪ್ರೋತ್ಸಾಹಧನ 1.50 ರೂ. ಕಡಿತ ! BAMULನಿಂದ ಆದೇಶ

Bengaluru : ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ಹಸಿರು ಮೇವಿನ ಲಭ್ಯತೆ ಹೇರಳವಾಗಿದೆ. ಮೇವಿನ ಸಮಸ್ಯೆ ಬಗೆಹರಿದಿದ್ದರಿಂದ ಹಾಲಿನ ಉತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಲೀಟರ್ಗೆ 1.50 ರೂಪಾಯಿ (Order from BAMUL) ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿ ಎಂದು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ (BAMUL) ಈಗಾಗಲೇ ಆದೇಶ ಹೊರಡಿಸಿದೆ.


ರಾಜ್ಯದಲ್ಲಿ ನೋಂದಣಿಯಾಗಿರುವ ಒಟ್ಟು 26 ಲಕ್ಷ ರೈತರ ಪೈಕಿ 9 ಲಕ್ಷ ರೈತರು ದಿನಕ್ಕೆ ಸರಾಸರಿ 80 ರಿಂದ 84 ಲಕ್ಷ ಲೀಟರ್ ಹಾಲು ಪೂರೈಸುತ್ತಿದ್ದಾರೆ .

ಹೀಗೆ ಸಂಗ್ರಹಿಸುವ ಪ್ರತಿ ಲೀಟರ್ ಹಾಲಿಗೆ ಒಕ್ಕೂಟಗಳು ಕನಿಷ್ಠ 32 ರು.ಗಳನ್ನು ನೀಡುತ್ತಿವೆ. ರಾಜ್ಯ ಸರಕಾರ ಪ್ರತಿ ಲೀಟರ್ ಹಾಲಿಗೆ (Order from BAMUL) ರೂ.5 ಪ್ರೋತ್ಸಾಹಧನ ನೀಡುತ್ತಿತ್ತು.

ಈಗ ಹಾಲಿನ ಪ್ರೋತ್ಸಾಹ ಧನವನ್ನು ಲೀಟರ್ಗೆ 1.50 ರೂ. ದಷ್ಟು ಕಡಿತಗೊಳಿಸಲು BAMUL. ಇದು ರೈತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.


7 ತಿಂಗಳಿಂದ ರೈತರಿಗೆ ಸಿಕ್ಕಿಲ್ಲ ಹಾಲಿನ ಪ್ರೋತ್ಸಾಹಧನ..!

ಕೆಎಂಎಫ್ (KMF) ಅಡಿಯಲ್ಲಿ ಒಟ್ಟು 16 ಹಾಲು ಒಕ್ಕೂಟಗಳಿಗೆ ರೈತರು ಹಾಲು ಪೂರೈಸುತ್ತಾರೆ. ಆದರೆ,

ರಾಜ್ಯ ಸರಕಾರ ಕಳೆದ ಏಳು ತಿಂಗಳಿಂದ ಒಟ್ಟು 403 ಕೋಟಿ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿಲ್ಲ.

ರಾಜ್ಯದಲ್ಲಿ ನೋಂದಣಿಯಾಗಿರುವ ಒಟ್ಟು 26 ಲಕ್ಷ ರೈತರ ಪೈಕಿ 9 ಲಕ್ಷ ರೈತರು ದಿನಕ್ಕೆ ಸರಾಸರಿ 80 ರಿಂದ 84 ಲಕ್ಷ ಲೀಟರ್ ಹಾಲು ಪೂರೈಸುತ್ತಿದ್ದಾರೆ.

ಇದನ್ನೂ ಓದಿ :  https://vijayatimes.com/rahul-gandhi-statement-2/

ಹೀಗೆ ಸಂಗ್ರಹಿಸುವ ಪ್ರತಿ ಲೀಟರ್ ಹಾಲಿಗೆ ಒಕ್ಕೂಟಗಳು ಕನಿಷ್ಠ 32 ರು.ಗಳನ್ನು ನೀಡುತ್ತಿವೆ. ರಾಜ್ಯ ಸರಕಾರ ಪ್ರತಿ ಲೀಟರ್ ಹಾಲಿಗೆ ರೂ.5 ಪ್ರೋತ್ಸಾಹಧನ ನೀಡುತ್ತಿದ್ದು,

ಕಳೆದ ವರ್ಷ ನವೆಂಬರ್ ನಿಂದ ಈ ಹಣ ಪಾವತಿಯಾಗಿಲ್ಲ. ಪ್ರೊತ್ಸಾಹಧನ ನೀಡುವಂತೆ ಪಶುಸಂಗೋಪನಾ ಇಲಾಖೆಗೆ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದ್ದರೂ ಕೆಎಂಎಫ್ ಸ್ಪಂದನೆ ನೀಡಿಲ್ಲ.

ಕಳೆದ ಅಕ್ಟೋಬರ್‌ವರೆಗಿನ ಪ್ರೋತ್ಸಾಹಧನವನ್ನು ಜನವರಿ 2023 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಸರ್ಕಾರ ಬದಲಾಗಿದ್ದು ಬದಲಾವಣೆಯನ್ನು ಗಮನಿಸಿದರೆ,

https://youtu.be/bYdfNoZP2yQ

ಪ್ರೋತ್ಸಾಹಧನ ಬಿಡುಗಡೆಯು ಮತ್ತಷ್ಟು ವಿಳಂಬವಾಗುತ್ತದೆ ಎಂದು ರೈತರು ಈಗ ಆತಂಕಕ್ಕೊಳಗಾಗಿದ್ದಾರೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ.

ಇದನ್ನೂ ಓದಿ :  https://vijayatimes.com/price-hike-of-electric-vehicles/

ಇತರೆ ರಾಜ್ಯಗಳಲ್ಲಿ ಪ್ರತಿ ಲೀಟರ್ ಹಾಲಿಗೆ 46ರಿಂದ 55 ರೂ. ಇವೆ, ಖಾಸಗಿ ಡೈರಿ ಫಾರ್ಮ್‌ಗಳು ಲೀಟರ್‌ಗೆ 40-45 ರೂ ಗಳನ್ನು ಕೊಟ್ಟು ಖರೀದಿಸುತ್ತಿವೆ.

ಇದರಿಂದ ನಂದಿನಿ ಡೇರಿಗೆ ಹಾಲು ಪೂರೈಸುವ ರೈತರ ಸಂಖ್ಯೆ ಕಡಿಮೆಯಾಗಿದೆ.

ಇದೇ ವೇಳೆ, ನಾಲ್ಕೈದು ತಿಂಗಳು ಪ್ರೋತ್ಸಾಹ ಧನ ವಿಳಂಬವಾಗಿರುವುದರಿಂದ ಕೆಎಂಎಫ್ ಹಾಲಿನ ಕೊರತೆ

ಅನುಭವಿಸುವ ಸಾಧ್ಯತೆ ಇದೆ ಎಂದು ಚಾಮರಾಜನಗರದ (Chamarajanagara) ರೈತ ಗುರುಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರಕಾರದ ಪ್ರೋತ್ಸಾಹ ಧನ ಸೇರಿ ಪ್ರತಿ ಲೀಟರ್ ಹಾಲಿಗೆ ಕೇವಲ 37 ರೂ. ಕೊಡಲಾಗುತ್ತಿದೆ ಅದರಲ್ಲೂ ಪ್ರೋತ್ಸಾಹ ಧನವನ್ನು ಕೂಡ ಸರಿಯಾದ ಸಮಯಕ್ಕೆ ನೀಡುತ್ತಿಲ್ಲ.

ಅದರಲ್ಲೂ ಹಾಲಿನಲ್ಲಿ 4% ಕೊಬ್ಬು ಮತ್ತು 8.5% ನಾನ್‌ಫ್ಯಾಟ್ (SNF) ಇದ್ದರೆ ಮಾತ್ರ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ಈ ನಿಟ್ಟಿನಲ್ಲಿ ಕೊಂಚ ಭಿನ್ನವಾದರೂ ಪ್ರೋತ್ಸಾಹ ಧನ ದೊರೆಯದ ಕಾರಣ ರೈತರು ಜಾನುವಾರು ಸಾಕಾಣಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.

Exit mobile version