ಡಾಲರ್‌ ಎದುರು 240 ರೂ.ಗಳಿಗೆ ಕುಸಿದ ಪಾಕಿಸ್ತಾನದ ಕರೆನ್ಸಿ ಮೌಲ್ಯ!

Pakistan

ಇಸ್ಲಾಮಾಬಾದ್‌ : ರಾಜಕೀಯ(Political) ಬಿಕ್ಕಟ್ಟಿನ ಹಿನ್ನಲೆಯಲ್ಲಿ ನೆರೆಯ ಪಾಕಿಸ್ತಾನದ(Pakistan) ರೂಪಾಯಿ(Rupee) ಸಾರ್ವಕಾಲಿಕ ಕುಸಿತ ಕಂಡಿದೆ. ಅಮೇರಿಕಾದ ಡಾಲರ್‌(Dollar) ಎದುರು ದಾಖಲೆಯ ಕನಿಷ್ಠ ಮಟ್ಟಕ್ಕೆ ಪಾಕಿಸ್ತಾನ್‌ ಕರೆನ್ಸಿ(Pakistan Currency) ಇಳಿದಿದೆ . ಇತ್ತೀಚಿನ ವರದಿಗಳ ಪ್ರಕಾರ, ಇಂಟರ್ ಬ್ಯಾಂಕ್‍ನಲ್ಲಿ ₹ 239.5 ರ ಆಸುಪಾಸಿನಲ್ಲಿ ವಹಿವಾಟು ನಡೆಯುತ್ತಿದೆ. ಈ ಹಿಂದಿನ ರೂ. 236.02 ಕ್ಕೆ ಹೋಲಿಸಿದರೆ ರೂ. 3.48 ರಷ್ಟು ಏರಿಕೆಯಾಗಿದೆ. ಹೀಗಾಗಿ ಪಾಕಿಸ್ತಾನ ಇನ್ನು ಕೆಲವೇ ದಿನಗಳಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದೆ.

ಶ್ರೀಲಂಕಾದಲ್ಲಿ(Srilanka) ರೀತಿಯಲ್ಲೇ ಪಾಕಿಸ್ತಾನದಲ್ಲಿಯೂ ಅಗತ್ಯ ವಸ್ತುಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಲಿದೆ. ತೈಲಬೆಲೆ ಮತ್ತು ಆಹಾರ ಬೆಲೆಗಳಲ್ಲಿ ಭಾರೀ ಏರಿಕೆಯಾಗಲಿದೆ. ಇನ್ನು ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ(International Financial Fund) 1.2 ಬಿಲಿಯನ್‌ ಡಾಲರ್‌(Billion Dollar) ನೆರವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ. ಇದು ದೇಶದ ಕರೆನ್ಸಿ ಮತ್ತು ಫಾರೆಕ್ಸ್ ಮೀಸಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಮತ್ತು ಫಿಚ್ ರೇಟಿಂಗ್ಗಳು ತಿಳಿಸಿವೆ.

ಸಾಲದಾತರೊಂದಿಗೆ ಪಾಕಿಸ್ತಾನದ ಹೊಸ ಸಿಬ್ಬಂದಿ ಮಟ್ಟದ ಒಪ್ಪಂದಕ್ಕೆ ಐಎಂಎಫ್ ಮಂಡಳಿಯ ಅನುಮೋದನೆಯನ್ನು ನಾವು ಊಹಿಸುತ್ತೇವೆ. ಇದು ಐಎಂಎಫ್ ಮತ್ತು ಇತರ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಮೂಲಗಳಿಂದ ಗಮನಾರ್ಹವಾದ ಹೆಚ್ಚುವರಿ ಹಣಕಾಸು ನೆರವನ್ನು ಒದಗಿಸುತ್ತದೆ ಮತ್ತು ಮಾರುಕಟ್ಟೆಗಳಿಗೆ ಗಮನಾರ್ಹವಾದ ವಿಶ್ವಾಸ ವರ್ಧಕವನ್ನು ಒದಗಿಸಬಹುದು” ಎಂದು ಫಿಚ್ನ ಹಾಂಗ್ ಕಾಂಗ್(Hong Kong) ಮೂಲದ ನಿರ್ದೇಶಕ ಕ್ರಿಸ್ಜಾನಿಸ್ ಕ್ರಸ್ಟಿನ್ಸ್ ಬ್ಲೂಮ್ಬರ್ಗ್ಗೆ ತಿಳಿಸಿದ್ದಾರೆ. ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಕುಸಿತಕ್ಕೆ ದೇಶದಲ್ಲಿನ ರಾಜಕೀಯ ಅನಿಶ್ಚಿತತೆಯೇ ಕಾರಣ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ ಅನಿಶ್ಚಿತತೆಯು ಸ್ಥಳೀಯ ಕರೆನ್ಸಿ ಅನ್ನು ವಿದೇಶಿ ಕರೆನ್ಸಿಯ ವಿರುದ್ಧ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿಯುವಂತೆ ಮಾಡಿದೆ.

Exit mobile version