New Delhi : ಸರ್ಕಾರ ಈಗಾಗಲೇ ಪ್ಯಾನ್(PAN Aadhaar link date) ನಂಬರ್ಗಳನ್ನು ಆಧಾರ್ ಜೊತೆ ಜೋಡಿಸಬೇಕೆಂದು ಕಡ್ಡಾಯಗೊಳಿಸಿದ್ದು ಇದಕ್ಕಾಗಿ ಜೂನ್ 30
(June 30) ಡೆಡ್ಲೈನ್ ಕೊಡಲಾಗಿದೆ.ಇದಕ್ಕಾಗಿ ಗಡುವು ವಿಸ್ತರಣೆ ಈ ಬಾರಿ ಕೂಡ ಮಾಡಬಹುದು ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ಆದರೆ ಈ ಬಗ್ಗೆ ಸರ್ಕಾರದಿಂದ ಇಂದು ಸಂಜೆಯೊಳಗೆ ಸ್ಪಷ್ಟನೆ ಸಿಗಬಹುದು.
ಈ ಹಿಂದೆ ಐಟಿ ಇಲಾಖೆ(IT Department) ನೀಡಿದ ಮಾಹಿತಿ ಪ್ರಕಾರ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದಕ್ಕೆ ಜೂನ್ 30ರ ಬಳಿಕ ಮತ್ತೆ ಒಂದು ತಿಂಗಳು ಕಾಲಾವಕಾಶ ಕೊಡಬಹುದು.
ಇದಕ್ಕೆ 1,000 ರೂ ದಂಡವನ್ನು ಸಹ ಪಾವತಿಸಬೇಕು. ಆದರೆ ಜೂನ್ 30ರ ಬಳಿಕ ಆಧಾರ್ ಜೊತೆ ಲಿಂಕ್ ಆಗದ ಪ್ಯಾನ್ ನಂಬರ್ ನಿಷ್ಕ್ರಿಯಗೊಳ್ಳುವುದು ಹೌದು. ಅದಾದ ಬಳಿಕ ಇಲಾಖೆ ಪ್ಯಾನ್ ಅನ್ನು
ಮತ್ತೆ ಸಕ್ರಿಯಗೊಳಿಸುವ ಅವಕಾಶವನ್ನಂತೂ (PAN Aadhaar link date) ಕೊಡಬಹುದು.

ಸರ್ಕಾರ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಬೇಕೆಂದು ಹೇಳಿದ್ದು ಯಾಕೆ?
ಈ ಹಿಂದೆ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ಗಳನ್ನು ಒಬ್ಬ ವ್ಯಕ್ತಿಗೆ ಕೊಡಲಾಗಿರುವುದು ಮತ್ತು ಒಬ್ಬರಿಗಿಂತ ಹೆಚ್ಚು ಮಂದಿಗೆ ಒಂದೇ ಪ್ಯಾನ್ ನಂಬರ್ ಅನ್ನು ಅಲಾಟ್ ಮಾಡಲಾಗಿತ್ತು. ಆದಾಯ ತೆರಿಗೆ
ಇಲಾಖೆಯ (Income Tax Department) ಗಮನಕ್ಕೆ ಇಂತಹ ಹಲವು ಪ್ರಕರಣಗಳು ಬಂದಿದ್ದವು. ಈ ಸಮಸ್ಯೆ ನಿವಾರಿಸಲು 2017ರಲ್ಲಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಬೇಕೆನ್ನುವ ಕಾನೂನನ್ನು ತರಲಾಯಿತು.
ಇದನ್ನೂ ಓದಿ : ಆಧಾರ್- ಪ್ಯಾನ್ನಲ್ಲಿ ಹೆಸರು,ಜನ್ಮದಿನಾಂಕ ಮ್ಯಾಚ್ ಆಗದೆ ಲಿಂಕ್ ಆಗುತ್ತಿಲ್ಲವೇ? ಐಟಿ ಇಲಾಖೆಯ ಈ ಸಲಹೆ ಪಾಲಿಸಿ
ಪ್ಯಾನ್ ಪಡೆಯಬೇಕಾದರೆ ಆಧಾರ್ ದಾಖಲೆ ಕಡ್ಡಾಯ ಎಂದು 2017 ಜುಲೈನಿಂದ ಜಾರಿಗೊಳಿಸಲಾಯಿತು. ಅದಕ್ಕಿಂತ ಮುಂಚೆ ಮಾಡಿಸಿದ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವಂತೆ ಸರ್ಕಾರ ಸೂಚಿಸಿತು.
ಇನ್ನು ಈ ಬಗ್ಗೆ ಪ್ರಾಯೋಗಿಕವಾಗಿ ನೋಡಿದರೆ 2017, ಜೂನ್ 30ಕ್ಕೆ ಮುಂಚೆ ಪ್ಯಾನ್ ಮಾಡಿಸಿದವರೆಲ್ಲರೂ ತಮ್ಮ ಆಧಾರ್ಗೆ ಲಿಂಕ್ ಮಾಡಿಸಬೇಕಾಗುತ್ತದೆ.

ಪ್ಯಾನ್–ಆಧಾರ್ ಲಿಂಕ್ ಯಾರಿಗೆ ಅಗತ್ಯ ಇಲ್ಲ?
- ಭಾರತೀಯ ನಾಗರಿಕರಲ್ಲದ ಪ್ಯಾನ್ ಕಾರ್ಡ್ದಾರರು
- 80 ವರ್ಷ ವಯಸ್ಸು ದಾಟಿದವರು
- ಐಟಿ ಕಾಯ್ದೆ ಪ್ರಕಾರ ಅನಿವಾಸಿ ವ್ಯಕ್ತಿಗಳು
ಜೂನ್ 30ರ ಮೊದಲು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?
ಜೂನ್ 30ರೊಳಗೆ ಯಾರು ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸುವುದಿಲ್ಲವೋ ಅಂತಹ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇಂಥ ಪ್ಯಾನ್ ಕಾರ್ಡನ್ನು ಬಳಸಿದರೆ ಅಪರಾಧವಾಗುತ್ತದೆ.
ಮತ್ತು ಐಟಿ ರಿಟರ್ನ್ ಸಲ್ಲಿಸಲು ಆಗುವುದಿಲ್ಲ.ಒಂದು ವೇಳೆ ಈಗಾಗಲೇ ಐಟಿಆರ್ ಫೈಲ್ ಮಾಡಿದ್ದರೆ ಅದು ಪ್ರೋಸಸ್ ಆಗುವುದಿಲ್ಲ ನಂತರ ರೀಫಂಡ್ ಸಹ ಆಗುವುದಿಲ್ಲ.ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್
ನಿಷ್ಕ್ರಿಯಗೊಂಡರೆ ಹೆಚ್ಚು ತೆರಿಗೆ ಕಡಿತ ಆಗುತ್ತದೆ. 50,000 ರೂಗಿಂತ ಹೆಚ್ಚು ಮೊತ್ತದ ಹಣ ಬ್ಯಾಂಕುಗಳಲ್ಲಿ ವಹಿವಾಟು ಸಾಧ್ಯವಾಗುವುದಿಲ್ಲ
ರಶ್ಮಿತಾ ಅನೀಶ್