ಬೆಂಗಳೂರಿನಲ್ಲಿ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆ, ನಮ್ಮ ಮೆಟ್ರೋ ಪೇಪರ್‌ ಟಿಕೆಟ್‌ ವಿತರಣೆ.

Bengaluru: ಈ ಬಾರಿಯ ವಿಶ್ವಕಪ್ ಪಂದ್ಯವು ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ‘ರಿಟರ್ನ್‌ ಜರ್ನಿ’ (Return Journey) ಪೇಪರ್‌ ಟಿಕೆಟ್‌ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್‌ (BMRCL) ತಿಳಿಸಿದೆ.

ಅಕ್ಟೋಬರ್‌ (October) 20, ಅಕ್ಟೋಬರ್‌ 26, ನವೆಂಬರ್‌ 4, ನವೆಂಬರ್‌ 9 ಮತ್ತು ನವೆಂಬರ್‌ 12ರಂದು ನಗರದಲ್ಲಿ ಕ್ರಿಕೆಟ್‌ (Cricket) ಪಂದ್ಯಗಳು ನಡೆಯಲಿದ್ದು, ಆ ದಿನಗಳಲ್ಲಿ ಕಬ್ಬನ್‌ ಪಾರ್ಕ್ ಮತ್ತು ಎಂ.ಜಿ.ರಸ್ತೆ (M G Road) ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 4ರ ನಂತರ ಒಮ್ಮೆ ಪ್ರಯಾಣಿಸಲು ‘ರಿಟರ್ನ್‌ ಜರ್ನಿ’ ಪೇಪರ್‌ ಟಿಕೆಟ್‌ ಬಳಸಬಹುದಾಗಿದೆ.

ಪೇಪರ್‌ ಟಿಕೆಟ್‌ 50 ರೂಪಾಯಿ
ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಪೇಪರ್‌ ಟಿಕೆಟ್‌ (Paper Ticket) ಲಭ್ಯವಿದ್ದು, ಪೇಪರ್‌ ಟಿಕೆಟ್‌ ಬೆಲೆ 50 ರೂ. ಆಗಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ಪೇಪರ್‌ ಟಿಕೆಟ್‌ ಖರೀದಿಸಿದರೆ ಪಂದ್ಯ ಮುಗಿದ ಬಳಿಕ ಅಡಚಣೆಯಿಲ್ಲದೆ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.

ಎಂದಿನಂತೆ ಸ್ಮಾರ್ಟ್‌ ಕಾರ್ಡ್‌ ಚಾಲ್ತಿ
ಜನದಟ್ಟಣೆ ಕಡಿಮೆ ಮಾಡಲು ಎಂ.ಜಿ.ರಸ್ತೆ, ಕಬ್ಬನ್‌ ಪಾರ್ಕ್ (Cubben Park) ಮೆಟ್ರೊ ನಿಲ್ದಾಣಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಯಾಣಿಕರು ಎಂದಿನಂತೆ ಸ್ಮಾರ್ಟ್‌ ಕಾರ್ಡ್‌ (Smart Card) ಮತ್ತು ಎನ್‌ಸಿಎಂಸಿ ಕಾರ್ಡ್‌ಗಳನ್ನು ಬಳಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version