ರಾಷ್ಟ್ರಪತಿಯಿಂದ ಹೊಸ ಸಂಸತ್ ಭವನ ಉದ್ಘಾಟನೆಗೆ ಕೋರಿಕೆ: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ವಜಾ

New Delhi : ನೂತನ ಸಂಸತ್ ಭವನವನ್ನು ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು (parliament house inauguration) ಉದ್ಘಾಟಿಸುವಂತೆ ಲೋಕಸಭೆಯ ಕಾರ್ಯದರ್ಶಿಗೆ ಸೂಚಿಸಬೇಕೆಂದು ಕೋರಿ

ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ವಜಾಗೊಳಿಸಿದೆ. ನ್ಯಾಯಾಲಯದ ಪೀಠವು ಅರ್ಜಿಯನ್ನು ವಜಾಗೊಳಿಸಿದೆ ಮತ್ತು ಅದನ್ನು ಪರಿಗಣಿಸಲು ಒಲವು

ಹೊಂದಿಲ್ಲ ಎಂದು ವಿವರಿಸಿದೆ.


ಇದಲ್ಲದೆ, ಅಂತಹ ಅರ್ಜಿಯನ್ನು ಸಲ್ಲಿಸಿದ್ದಕ್ಕಾಗಿ ತಮ್ಮ ಮೇಲೆ ಶುಲ್ಕ ವಿಧಿಸದಿದ್ದಕ್ಕಾಗಿ ಅರ್ಜಿದಾರರು ಕೃತಜ್ಞರಾಗಿರಬೇಕು ಎಂದು ಪೀಠ ಹೇಳಿದೆ. ಮೇ 28 ರಂದು ನಿಗದಿಯಾಗಿದ್ದ ಹೊಸ ಸಂಸತ್ ಭವನದ ಉದ್ಘಾಟನೆಯ

ಸುತ್ತಲಿನ ವಿವಾದವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ವಕೀಲರನ್ನು ಪ್ರೇರೇಪಿಸಿತು.

ರಾಷ್ಟ್ರಪತಿಗಳನ್ನು ಕಡೆಗಣಿಸಿರುವ ಕಾರಣ 20ಕ್ಕೂ ಹೆಚ್ಚು ಪಕ್ಷಗಳು ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮವನ್ನು (Parliament House Inauguration Program) ಬಹಿಷ್ಕರಿಸಿವೆ. ನೂತನ ಸಂಸತ್‌ ಭವನ

ಉದ್ಘಾಟನೆಯ ವಿಚಾರವಾಗಿ ಸಾಕಷ್ಟು ಚರ್ಚೆಗಳು, ವಾದ, ವಿವಾದಗಳು ನಡೆಯುತ್ತಿವೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಷ್ಟ್ರಪತಿಗಳು ಪರಮೋಚ್ಛ ಸ್ಥಾನದಲ್ಲಿರುವವರು.

ಇದನ್ನೂ ಓದಿ : https://vijayatimes.com/24-ministers-to-take-oath/

ಆದ್ದರಿಂದ ಪ್ರಜಾಪ್ರಭುತ್ವದ ಮುಕುಟಪ್ರಾಯವಾಗಿರುವ ಸಂಸತ್ ಭವನದ ಉದ್ಘಾಟನೆಯನ್ನು ರಾಷ್ಟ್ರಪತಿಗಳು ಮಾಡಬೇಕು ಅನ್ನೋದು ವಿರೋಧ ಪಕ್ಷಗಳ ಒಮ್ಮತದ ಒತ್ತಾಯ. ಅಲ್ಲದೆ ಬಿಜೆಪಿ ಸರ್ಕಾರ (BJP Govt)

ಪ್ರಜಾಪ್ರಭುತ್ವದ ಸಿದ್ಧಾಂತಗಳನ್ನು ಗಾಳಿಗೆ ತೂರಿ ಉದ್ಧಟತನ ಮೆರೆಯುತ್ತಿದೆ. ಜೊತೆಗೆ ಸಂಸತ್ ಭವನ ಉದ್ಘಾಟನೆಯ ವೇಳೆಯಲ್ಲಿ ಕೆಲ ದಾಖಲೆಗಳು ಪುರಾವೆಗಳಿಲ್ಲದ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದೆ ಎಂದು

ವಿಪಕ್ಷಗಳು ಆರೋಪಿಸಿವೆ.

Exit mobile version