ಪತಂಜಲಿ ಕರ್ಮಕಾಂಡ: ಕೋಟ್ಯಂತರ ರೂ.ಮೌಲ್ಯದ ಅಕ್ರಮ ರಿಯಲ್ ಎಸ್ಟೇಟ್ ದಂಧೆ, ಬೇನಾಮಿ ಕಂಪೆನಿ ಮೂಲಕ ವ್ಯವಹಾರ

New Delhi: ಜನರ ದಾರಿ ತಪ್ಪಿಸುವ ಮತ್ತು ತಪ್ಪು ಮಾಹಿತಿಯುಳ್ಳ ಪತಂಜಲಿ ಉತ್ಪನ್ನಗಳ (Patanjali Illegal real estate) ಜಾಹೀರಾತುಗಳಿಗಾಗಿ ಬಾಬಾ ರಾಮ್‌ದೇವ್ (Baba Ramdev)

ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವ ಬೆನ್ನಲ್ಲೇ, ಮತ್ತೊಂದು ಆಘಾತಕಾರಿ ವಿಚಾರ ಬಹಿರಂಗವಾಗಿದ್ದು, ಅವರು ದಿಲ್ಲಿಗೆ ಸಮೀಪದ, ಹರ್ಯಾಣದ ಮಂಗರ್ ಗ್ರಾಮದಲ್ಲಿ ಶೆಲ್ ಕಂಪೆನಿಗಳ

ಮೂಲಕ ಕೋಟ್ಯಂತರ ರೂ. ಮೌಲ್ಯದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ವಿಚಾರವನ್ನು ರಿಪೋರ್ಟರ್ಸ್ ಕಲೆಕ್ಟಿವ್ (Reporter Collective) ತನಿಖಾ ವರದಿ ಬಯಲು ಮಾಡಿದೆ.

ಇಲ್ಲಿ ಹಲವಾರು ಕಂಪೆನಿಗಳು ಭೂಮಿ ಖರೀದಿಸಿದ್ದು, ಅದೆಲ್ಲವೂ ಬಾಬಾ ರಾಮ್‌ದೇವ್ ಅವರ ಪತಂಜಲಿ (Patanjali) ಕಂಪೆನಿಗೆ ಸೇರಿರುವುದಾಗಿ ಸ್ಥಳೀಯ ಡೀಲರ್‌ಗಳು ಹೇಳಿರುವುದನ್ನು

ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಉಲ್ಲೇಖಿಸಿದೆ. ಆ ಮಾತುಗಳ ಸತ್ಯಾಸತ್ಯತೆಯನ್ನೂ ಹಲವು ವರ್ಷಗಳ ಭೂ ದಾಖಲೆಗಳನ್ನು ಹಾಗೂ ಕಾರ್ಪೊರೇಟ್ (Corporate) ದಾಖಲೆಗಳನ್ನು ಪರಿಶೀಲಿಸಿ

ಖಚಿತಪಡಿಸಿಕೊಂಡಿದೆ ಎಂದು ಅದು ತಿಳಿಸಿದೆ. ಈ ತನಿಖಾ ವರದಿಯನ್ನು ಶ್ರೀಗಿರೀಶ್ ಜಾಲಿಹಾಳ್ ಮತ್ತು ತಪಸ್ಯಾ ಅವರು ಮಾಡಿದ್ದೂ, ನವೆಂಬರ್ 22 ರಂದು ಪ್ರಕಟವಾಗಿದೆ.

ಮೂಲತಃ ಬಾಬಾ ರಾಮ್‌ದೇವ್ ಕಿರಿಯ ಸಹೋದರ ಮತ್ತು ನಿಕಟ ಉದ ಉದ್ಯಮ ಸಹವರ್ತಿಗಳ ನಿಯಂತ್ರಣದಲ್ಲಿರುವುದು ಕಂಡುಬಂದಿದ್ದು, ಇನ್ನು ಪತಂಜಲಿ ಸಮೂಹದೊಂದಿಗೆ ಸಂಬಂಧ

ಹೊಂದಿರುವ ಶೆಲ್ ಕಂಪೆನಿಗಳ ಜಾಲವನ್ನು ರಿಪೂರ್ಟರ್ಸ್ ಕಲೆಕ್ಟಿವ್ ಪತ್ತೆ ಮಾಡಿದೆ. ಕಳೆದೊಂದು ದಶಕದಿಂದಲೂ ಈ ಕಂಪೆನಿಗಳು ಹರಿಯಾಣದ ಫರೀದಾಬಾದ್‌ನ ಮಂಗರ್‌ನಲ್ಲಿ ಭೂಮಿ

ಖರೀದಿ ಮತ್ತು ಮಾರಾಟದಲ್ಲಿ ಸಕ್ರಿಯವಾಗಿರುವುದು (Patanjali Illegal real estate) ಬಹಿರಂಗವಾಗಿದೆ.

ಪತಂಜಲಿ ಕರ್ರುಪ್ಯಾಕ್ ಪ್ರೈವೇಟ್ ಲಿಮಿಟೆಡ್ (Patanjali Corrupack Private Limited) 2009ರಲ್ಲಿ ಬಾಬಾ ರಾಮ್‌ದೇವ್ ಸಹೋದರ ರಾಮ್ ಭರತ್ ಮತ್ತು ಅವರ ನಿಕಟ ವ್ಯಾಪಾರ

ಸಹವರ್ತಿ ಆಚಾರ್ಯ ಬಾಲಕೃಷ್ಣ ಅವರಿಂದ ಒಂದು ಕಂಪೆನಿ ಸ್ಥಾಪನೆಯಾಯಿತು. ಇದು ರಾಮದೇವ್ ತವರು ನೆಲವಾದ ಉತ್ತರಾಖಂಡದ ಹರಿದ್ವಾರದಲ್ಲಿ ನೋಂದಾಯಿತವಾಗಿದೆ. ಇತ್ತೀಚಿನ

ಕಾರ್ಪೊರೇಟ್ ಫೈಲಿಂಗ್‌ಗಳ ಪ್ರಕಾರ, ಬಾಲಕೃಷ್ಣ ಈ ಕಂಪೆನಿಯಲ್ಲಿ ಶೇ.92ರಷ್ಟು ಒಡೆತನದ ಪಾಲನ್ನು ಹೊಂದಿದ್ದು, ಉಳಿದ ಭಾಗವನ್ನು ಭರತ್ ಹೊಂದಿದ್ದಾರೆ.

ಈ ಕಂಪೆನಿಯೂ ಸೇರಿದಂತೆ ಪತಂಜಲಿ ಸಮೂಹಕ್ಕೆ ಸಂಬಂಧಿಸಿದ ಕೆಲವು ಕಂಪೆನಿಗಳು ಸರ್ಕಾರದ ಪರಿಶೀಲನೆಯಿಂದ ತಪ್ಪಿಸಿಕೊಂಡಿರುವುದನ್ನೂ ರಿಪೋರ್ಟರ್ಸ್ ಕಲೆಕ್ಟಿವ್ ತನಿಖೆ ಬಯಲು

ಮಾಡಿದ್ದು, ಮೂಲತಃ ಸರಕುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿರಬೇಕಿದ್ದ ಆ ಕಂಪೆನಿಗಳು, ಅದರ ಬದಲಾಗಿ ಅರಾವಳಿ ಪರ್ವತ ಶ್ರೇಣಿಯ ಪ್ರಮುಖ ಅರಣ್ಯ ಗ್ರಾಮ ಮಂಗರ್‌ನಲ್ಲಿ

ವ್ಯಾಪಕವಾದ ಭೂಮಿ ಖರೀದಿ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿವೆ.

ಮಾತ್ರವಲ್ಲದೇ, ಇದರ ಮೂಲಕ ಈ ವ್ಯವಹಾರವನ್ನು ವಿಸ್ತರಿಸುವುದಕ್ಕೂ ಈ ಆರ್ಥಿಕ ಹರಿವಿನಿಂದ ಸಾಧ್ಯವಾಗಿದೆ ಎಂದು ವರದಿ ಹೇಳಿದೆ. ಮಂಗರ್‌ನಲ್ಲಿನ ಜಮೀನುಗಳ ಮಾರಾಟದಿಂದ

ಬಂದ ಹಣ ಈ ಶೆಲ್ ಘಟಕಗಳ ಮೂಲಕ ಪತಂಜಲಿ ಸಾಮ್ರಾಜ್ಯದೊಳಗಿನ ಇತರ ಸಂಸ್ಥೆಗಳಿಗೆ ಹರಿದುಹೋಗುತ್ತಿದೆ. ಕಳೆದ 12 ವರ್ಷಗಳಲ್ಲಿ ಪತಂಜಲಿ ಕರ್ರುಪ್ಯಾಕ್ ಪ್ರೈವೇಟ್ ಲಿಮಿಟೆಡ್

ಕೂಡ ಉದ್ದೇಶಿತ ಪ್ಯಾಕೇಜಿಂಗ್ (Packaging) ವಸ್ತುಗಳ ತಯಾರಿಕೆ ಮತ್ತು ಮಾರಾಟದಲ್ಲಿ ವ್ಯವಹಾರ ನಡೆಸದೆ, ಮಂಗರ್‌ನಲ್ಲಿನ ಜಮೀನುಗಳ ಸ್ವಾಧೀನ ಮತ್ತು ಮಾರಾಟದಲ್ಲಿ ಸಕ್ರಿಯವಾಗಿ

ತೊಡಗಿಸಿಕೊಂಡಿದೆ. ಹಣವನ್ನು ರಿಯಲ್ ಎಸ್ಟೇಟ್ (Real Estate) ಉದ್ಯಮಗಳಲ್ಲೇ ತೊಡಗಿಸುತ್ತಿದೆ.

ಕಳೆದ 15 ವರ್ಷಗಳಿಗೂ ಹೆಚ್ಚಿನ ಕಾರ್ಪೊರೇಟ್ ಮತ್ತು ಭೂದಾಖಲೆಗಳನ್ನು ರಿಪೋರ್ಟರ್ಸ್ ಕಲೆಕ್ಟಿವ್ ಪರಿಶೀಲಿಸಿದ್ದು, ಇದು ಸಂಶಯಾಸ್ಪದ ಶೆಲ್ ಕಂಪೆನಿಗಳ (Shell Company) ಜಾಲವನ್ನು

ಬಹಿರಂಗಕ್ಕೆ ತಂದಿದೆ. ಈ ಶೆಲ್ ಕಂಪೆನಿಗಳು ಹಾಗೂ ಭೂಮಿಯ ಅಂತಿಮ ಖರೀದಿದಾರ ಕಂಪೆನಿಯಾಗಿರುವ ಪತಂಜಲಿ ನಡುವಿನ ಸ್ಪಷ್ಟ ಸಂಪರ್ಕವನ್ನು ವರದಿ ಬಯಲಾಗಿಸಿದೆ.

2011ರಿಂದ 2014ರ ಅವಧಿಯಲ್ಲಿ ಅವರು ಮೋದಿ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ್ದನ್ನೂ, ಅಣ್ಣಾ ಹಝಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಬೆಂಬಲಿಸಿದ್ದನ್ನೂ

ಉಲ್ಲೇಖಿಸಿದ್ದು, ಕಪ್ಪುಹಣ ನಿರ್ಮೂಲನೆ ಮಾಡುವುದಾಗಿ ಪ್ರತಿಪಾದಿಸಿದ್ದ ನರೇಂದ್ರ ಮೋದಿಯವರಿಗೆ ಬೆಂಬಲಿಸುತ್ತಲೇ ತಮ್ಮ ಉದ್ಯಮವನ್ನು ರಾಮ್‌ದೇವ್ ಬೆಳೆಸಿದ್ದನ್ನು ವರದಿ ಪ್ರಸ್ತಾಪಿಸಿದೆ.

ಇದನ್ನು ಓದಿ: ಇಹಲೋಕ ತ್ಯಜಿಸಿದ ಕ್ಯಾಪ್ಟನ್​ ಎಂ.ವಿ ಪ್ರಾಂಜಲ್​ ಪಾರ್ಥಿವ ಶರೀರದ ಅಂತಿಮ ದರ್ಶನ: ಕಣ್ಣೀರಿನಲ್ಲಿ ಕುಟುಂಬಸ್ಥರು

Exit mobile version