ಮೊಸಂಬಿ ಜ್ಯೂಸ್ ಅನ್ನು ಡ್ರಿಪ್‌ನಲ್ಲಿ ನೀಡಿದ ಆಸ್ಪತ್ರೆ ಸಿಬ್ಬಂದಿ ; ರೋಗಿ ಸಾವು, ಆಸ್ಪತ್ರೆ ಸೀಲ್!

Uttar Pradesh : ಉತ್ತರ ಪ್ರದೇಶದ (Patient Died Due To) ಪ್ರಯಾಗ್‌ರಾಜ್‌ನ (Prayagraj) ಖಾಸಗಿ ಆಸ್ಪತ್ರೆಯೊಂದರಲ್ಲಿ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಮೊಸಂಬಿ ಹಣ್ಣಿನ ರಸವನ್ನು ತುಂಬಿಸಿ ಡೆಂಗ್ಯೂ ರೋಗಿಯೊಬ್ಬರಿಗೆ ಡ್ರಿಪ್ ಆಗಿ ನೀಡಿರುವುದು ತಿಳಿದುಬಂದಿದೆ.

ಡೆಂಗ್ಯೂ ಖಾಯಿಲೆಯಿಂದ ಬಳಲುತ್ತಿದ್ದ ರೋಗಿ ಸಾವನ್ನಪ್ಪಿದ್ದು, ಈ ಘಟನೆಯ ಬಗ್ಗೆ ಜಿಲ್ಲಾಡಳಿತದ ಪ್ರಾಥಮಿಕ ತನಿಖೆಯ ನಂತರ ಆಸ್ಪತ್ರೆಯ ಅಧಿಕಾರಿಗಳ ಲೋಪವನ್ನು ಬಹಿರಂಗಪಡಿಸಿ,

ಆಸ್ಪತ್ರೆಯನ್ನು ಸೀಲ್ ಮಾಡಿದೆ. ಸದ್ಯ ಈ ಪ್ರಕರಣಕ್ಕೆ ವ್ಯಾಪಾಕವಾಗಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಮೃತ (Patient Died Due To) ರೋಗಿಯ ಕುಟುಂಬವೂ ಇದಕ್ಕೆ ಕಾರಣರಾದವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಇದನ್ನೂ ಓದಿ : https://vijayatimes.com/health-tips-of-fruits/

32 ವರ್ಷದ ರೋಗಿಯ ಸಂಬಂಧಿಕರಿಗೆ ಪ್ರಯಾಗ್‌ರಾಜ್‌ನಲ್ಲಿರುವ ಗ್ಲೋಬಲ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್‌ನಲ್ಲಿ ‘ಪ್ಲಾಸ್ಮಾ’ ಎಂದು ಬರೆಯಲಾದ ಪ್ಯಾಕೆಟ್ ನಲ್ಲಿ ಹಣ್ಣಿನ ರಸವನ್ನು ಬೆರಸಿ ಇಡಲಾಗಿದೆ, ಅದನ್ನೇ ರೋಗಿಗೆ ನೀಡಿದ್ದಾರೆ.

ರೋಗಿಯ ಕುಟುಂಬವು ಆಸ್ಪತ್ರೆ ಅವರು ನೀಡಿದ ಡ್ರಿಪ್ ಪ್ಯಾಕೆಟ್ ನಕಲಿಯಾದ ಪರಿಣಾಮವೇ ಅವರ ಸ್ಥಿತಿಯನ್ನು ಹದಗೆಡ್ಡಿಸಿದ್ದು ಎಂದು ಆರೋಪಿಸಿದ್ದಾರೆ.

ರೋಗಿಗೆ ಹಣ್ಣಿನ ರಸದ ಪ್ಯಾಕೆಟ್ ಅನ್ನು ಪ್ಲೇಟ್ಲೇಟ್ ಎಂದು ನೀಡಿದ ಆಸ್ಪತ್ರೆಯಿಂದ ಕೂಡಲೇ ಕುಟುಂಬಸ್ಥರು ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಅಲ್ಲಿ ಅವರು ನಿಧನರಾಗಿರುವ ಸಂಗತಿ ತಿಳಿದುಬಂದಿದೆ.

ಈ ಬಗ್ಗೆ ತನಿಖೆ ನಡೆಸಿದ ಆಸ್ಪತ್ರೆಯ ವೈದ್ಯರು, ‘ಪ್ಲೇಟ್‌ಲೆಟ್’ ಬ್ಯಾಗ್ ನಕಲಿ ಮತ್ತು ವಾಸ್ತವವಾಗಿ ರಾಸಾಯನಿಕಗಳು ಅಥವಾ ಮೋಸಂಬಿ ರಸದ ಮಿಶ್ರಣವಾಗಿದೆ ಎಂದು ಕುಟುಂಬಸ್ಥರಿಗೆ ಮಾಹಿತಿ ಕೊಟ್ಟಿದ್ದಾರೆ.

https://youtu.be/QLbWeNvYzSE GATE CRASH ಹಣ ಕೊಟ್ರೆ ರೇಷನ್‌ ! ಬೆಳ್ಳಂದೂರು ರೇಷನ್ ಅಂಗಡಿ ದಂಧೆ !

ಈ ದಾಖಲೆಯನ್ನು ಪರಿಶೀಲಿಸಿ ಮತ್ತು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬದವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಘಟನೆ ಬಗ್ಗೆ ಮಾತನಾಡಿದ ಮೃತ ವ್ಯಕ್ತಿಯ ಸಂಬಂಧಿ,

“ನನ್ನ 26 ವರ್ಷದ ಸಹೋದರಿ ಈಗ ವಿಧವೆಯಾಗಿದ್ದಾಳೆ. ಯೋಗಿ ಆದಿತ್ಯನಾಥ್ ಸರ್ಕಾರವು ಲೋಪದೋಷಗಳಿಗಾಗಿ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.

Image Credits : NDTV

ಈ ಕುರಿತು ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ”ಆಸ್ಪತ್ರೆಯಲ್ಲಿ ಡೆಂಗ್ಯೂ ರೋಗಿಗೆ ಪ್ಲೇಟ್‌ಲೆಟ್ ಬದಲಿಗೆ ಸಿಹಿ ರಸವನ್ನು ತುಂಬಿಸಿ ರೋಗಿಗೆ ನೀಡಿರುವ ಮಾಹಿತಿ ನನಗೆ ದೊರೆತಿದೆ.

ನನ್ನ ನಿರ್ದೇಶನದ ಮೇರೆಗೆ ಆಸ್ಪತ್ರೆಗೆ ಸೀಲ್ ಮಾಡಿ, ಪ್ಲೇಟ್‌ಲೆಟ್ ಪ್ಯಾಕೆಟ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ : https://vijayatimes.com/ashgabat-worlds-richest-city/

ತಪ್ಪಿತಸ್ಥರೆಂದು ಕಂಡುಬಂದರೆ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಠಕ್ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ. ಮುಖ್ಯ ವೈದ್ಯಾಧಿಕಾರಿಗಳ ಸೂಚನೆಯ ಮೇರೆಗೆ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದ್ದು,

ಮಾದರಿಯನ್ನು ಪರೀಕ್ಷಿಸುವವರೆಗೆ ಹಾಗೆಯೇ ಇರುತ್ತದೆ ಎಂದು ಪ್ರಯಾಗರಾಜ್‌ನ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿಗಳು ಸುದ್ದಿ ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.
Exit mobile version