ಗ್ರಾಮ ಪಂಚಾಯಿತಿಗೆ 1 ಲಕ್ಷ ರೂ. ದಂಡ ಹಾಕಿದ ರಾಜ್ಯ ಹೈಕೋರ್ಟ್!

Bengaluru : ಮ್ಯಾನ್‌ಹೋಲ್ ಸ್ವಚ್ಚಗೊಳಿಸುವ ವೇಳೆ ಕಾರ್ಮಿಕನೊಬ್ಬ ಮೃತಪಟ್ಟ ಕಾರಣ, ಆತನ ಪತ್ನಿಗೆ ನೀಡಿದ್ದ ಸೈಟ್ (penalty to Grama Panchayat) ವಾಪಸ್ ಪಡೆದ ಗ್ರಾಮ ಪಂಚಾಯಿತಿಗೆ ರಾಜ್ಯ ಹೈಕೋರ್ಟ್‌(High Court) 1 ಲಕ್ಷ ರೂ. ದಂಡ ವಿಧಿಸಿದೆ!

ವಿಜಯ ಕರ್ನಾಟಕ(Vijaya Karnataka) ಸುದ್ದಿ ಪತ್ರಿಕೆ ನೀಡಿದ ವರದಿ ಅನುಸಾರ, ಮ್ಯಾನ್‌ಹೋಲ್‌ ಸ್ವಚ್ಚಗೊಳಿಸುವ ವೇಳೆ ಕಾರ್ಮಿಕನೊಬ್ಬ ಸಾವನ್ನಪ್ಪಿದ ಪ್ರಕರಣದಲ್ಲಿ ಮೃತ ಕಾರ್ಮಿಕನ ಪತ್ನಿಗೆ ನೀಡಿದ್ದ ಸೈಟ್‌ ಹಿಂಪಡೆದ

ಬೆಂಗಳೂರು(Bengaluru) ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿಗೆ ರಾಜ್ಯ ಹೈಕೋರ್ಟ್‌ನ ಏಕಸದಸ್ಯ ಪೀಠ ಒಟ್ಟು 1 ಲಕ್ಷ ರೂ. ದಂಡ ವಿಧಿಸಿದೆ! ಇದಲ್ಲದೆ, ಸಾವನ್ನಪ್ಪಿದ ಕಾರ್ಮಿಕನ ಪತ್ನಿಗೆ

ಮನೆಸಹಿತ ನಿವೇಶನ ನೀಡುವಂತೆ ಕೋರ್ಟ್ ಆದೇಶ ನೀಡಿದೆ.

ಕೇವಲ ನಿವೇಶನ ಮಾತ್ರ ಕೊಡಬೇಕು ಎಂದು ಹೇಳದ ರಾಜ್ಯ ಹೈಕೋರ್ಟ್‌ನ ಏಕಸದಸ್ಯ ಪೀಠವು, ಅರ್ಜಿದಾರರಿಗೆ ಕಟ್ಟಿದ ಮನೆಯನ್ನೇ ಕೊಡಬೇಕು ಎಂದು ನಿರ್ದೇಶನ ನೀಡಿದೆ.

ಇದರೊಟ್ಟಿಗೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಮೂವರೂ 50 ಸಾವಿರ ರೂ.

ಮತ್ತು ಗ್ರಾಮ ಪಂಚಾಯಿತಿ 50 ಸಾವಿರ ರೂ. ಸೇರಿಸಿ ಒಟ್ಟು 1 ಲಕ್ಷ ರೂ.ಗಳನ್ನು ಅರ್ಜಿದಾರರಾದ ನಾಗಮ್ಮ(Nagamma) ಎಂಬ ಮಹಿಳೆಗೆ ಕೊಡಬೇಕು ಎಂದು ಹೈಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಿ ತಿಳಿಸಿದೆ.

ಇದನ್ನೂ ಓದಿ: ರೋಹಿತ್‌-ಧೋನಿ ಇಬ್ಬರಲ್ಲಿ ಐಪಿಎಲ್‌ನ ಅತ್ಯುತ್ತಮ ನಾಯಕ ಯಾರು? ಎಂಬ ಪ್ರಶ್ನೆಗೆ ಸೆಹ್ವಾಗ್ ಕೊಟ್ಟ ಉತ್ತರ ಶಾಕಿಂಗ್!

ಸೈಟ್‌ನಲ್ಲಿ ಮನೆ ಕಟ್ಟಿಲ್ಲವೆಂದು ಹಂಚಿಕೆ ರದ್ದುಪಡಿಸಿದ್ದ ಗ್ರಾಮ ಪಂಚಾಯಿತಿ ಕ್ರಮಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿ, ಜಲಮಂಡಳಿಯ ನಿರ್ಲಕ್ಷ್ಯದಿಂದ ನರಸಿಂಹಯ್ಯ ಸಾವನ್ನಪ್ಪಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಅವರಿಗೆ ನೀಡಿದ್ದ ಸೈಟನ್ನು ರದ್ದು ಮಾಡಿರುವ ಪಂಚಾಯಿತಿ ಧೋರಣೆಯನ್ನು ಹೈಕೋರ್ಟ್‌ ತೀವ್ರವಾಗಿ ಖಂಡಿಸಿದೆ.

ಅರ್ಜಿದಾರರನ್ನು ಅವರ ನಿವೇಶನದಿಂದ ಒಕ್ಕಲೆಬ್ಬಿಸಬಾರದು ಮತ್ತು ಮ್ಯಾನ್ಯುಯಲ್‌ ಸ್ಕ್ಯಾ‌ವೆಂಜರ್ಸ್ ಪುನರ್ವಸತಿ ಕಾಯಿದೆ ಸೆಕ್ಷನ್‌ (penalty to Grama Panchayat) 13ರ ಪ್ರಕಾರ ಮ್ಯಾನ್‌ಹೋಲ್‌ ಸ್ವಚ್ಚಗೊಳಿಸಲು ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ನಿಷೇಧವಿದೆ.

ನಿಷೇಧವನ್ನು ಮೀರಿ ನೇಮಕ ಮಾಡಿಕೊಂಡಿದ್ದಕ್ಕಾಗಿ ಅರ್ಜಿದಾರರಿಗೆ ಆರ್ಥಿಕ ನೆರವನ್ನು ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಬಿಜೆಪಿ ತೊರೆದು ʻಕೈʼ ಸೇರಿದ ಹೆಚ್.ಡಿ ತಮ್ಮಯ್ಯ! ಪಕ್ಷಕ್ಕೆ ಸ್ವಾಗತಿಸಿದ ಡಿಕೆಶಿ

2008ರ ನವೆಂಬರ್ 14 ರಂದು ಯಲಹಂಕದಲ್ಲಿ ಜಲಮಂಡಳಿಯ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅರ್ಜಿದಾರರ ಪತಿ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಈ ಕಾರಣದಿಂದ ಮೃತರ ಪತ್ನಿಗೆ ನಿವೇಶನ ಹಂಚಿಕೆ

ಮಾಡುವುದಲ್ಲದೆ, ಆಕೆಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುವುದೂ ಸಹ ಸಂಬಂಧಿಸಿದ ಸಂಸ್ಥೆಗಳ ಮೊದಲ ಕರ್ತವ್ಯವಾಗಿದೆ.

ಆ ಕುರಿತು ಸೆಕ್ಷನ್‌ 13 ರಲ್ಲಿ ಅತ್ಯಂತ ಸ್ಪಷ್ಟವಾಗಿದೆ. ಅದನ್ನು ಪಾಲನೆ ಮಾಡಲೇಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

2012 ರಲ್ಲಿ ಮಂಜೂರಾಗಿದ್ದ 1200 ಚದರ ಅಡಿಯ ನಿವೇಶನ : ನರಸಿಂಹಯ್ಯ 2008 ರಲ್ಲಿ ಮೃತ ಪಟ್ಟ ನಂತರ ಹೈಕೋರ್ಟ್‌ ನಿರ್ದೇಶನದಂತೆ ಅವರ ಪತ್ನಿ ನಾಗಮ್ಮ

ಅವರಿಗೆ 2012 ರಲ್ಲಿ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿಯು 1200 ಚದರ ಅಡಿಯ ನಿವೇಶನವನ್ನು ಮಂಜೂರು ಮಾಡಿತ್ತು.

ಆದರೆ ಅವರು ಮನೆ ಕಟ್ಟಲಿಲ್ಲ ಎಂಬ ಕಾರಣಕ್ಕೆ ಅವರಿಗೆ ನೀಡಿದ್ದ ನಿವೇಶವನ್ನು ಗ್ರಾಮ ಪಂಚಾಯಿತಿ ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.

Exit mobile version