ಪಿಜಿ, ಪೇಯಿಂಗ್ ಹಾಸ್ಟೆಲ್ ಗಳಿಗೆ ಶಾಕ್: ಶೇ. 12 ರಷ್ಟು ಜಿಎಸ್‌ಟಿ ಅನ್ವಯ, ಇನ್ನಷ್ಟು ಏರಿಕೆಯಾಗಲಿದೆ ತಿಂಗಳ ಬಾಡಿಗೆ

Bengaluru, (ಜುಲೈ 31): ಖಾಸಗಿ ಹಾಸ್ಟೆಲ್ (PG Hostels rent increases) ಮತ್ತು ಖಾಸಗಿ ಪಿಜಿಗಳಗೆ(Paying Guest) 12% ಜಿಎಸ್‌ಟಿ(GST) ಅನ್ವಯಿಸುತ್ತದೆ ಎಂದು ಬೆಂಗಳೂರು ಜಿಎಸ್‌ಟಿ

ಪೂರ್ವಭಾವಿ ಸಮಿತಿ ಆದೇಶಿಸಿದೆ. ಖಾಸಗಿ ಪಿಜಿ ವಸತಿ ಕಟ್ಟಡಗಳಿಗೆ ಹೋಲಿಸಲಾಗುವುದಿಲ್ಲ ಮತ್ತು ವಿನಾಯಿತಿ ನೀಡಲಾಗುವುದಿಲ್ಲ ಎಂದು ಹೇಳಿದೆ. ಹಾಗಾಗಿ ಪಿಜಿ ಮತ್ತು ವಸತಿ ನಿಲಯದ ಮಾಸಿಕ ಬಾಡಿಗೆ ಮತ್ತಷ್ಟು

ಏರಿಕೆಯಾಗಲಿದೆ. ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆ ಮನೆಮಾಡಲಾಗದೆ ವಸತಿ ನಿಲಯಗಳನ್ನೇ ನೆಚ್ಚಿಕೊಂಡಿರುವ ಜನರಿಗೆ ಇದೀಗ ಇದು ಇನ್ನಷ್ಟು ಹೊರೆಯಾಗಲಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಈಗಾಗಲೇ ಹಲವು ಬಾರಿ ಬೆಂಗಳೂರಿನ (Bengaluru) ಹಲವು ಪಿಜಿಗಳಲ್ಲಿ ಬಾಡಿಗೆ ಹೆಚ್ಚಾಗಿದೆ. ಈಗ ಜಿಎಸ್‌ಟಿಯೂ ಇದರ ಜೊತೆ ಸೇರಿಕೊಂಡಿದೆ. ಹೀಗಾಗಿ ಪಿಜಿ

ಬಾಡಿಗೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. . ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳ ಜನರು ಸಣ್ಣಪುಟ್ಟ ಕೆಲಸ ಅಥವಾ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದು ಪಿಜಿಯಲ್ಲಿ ಇರುತ್ತಾರೆ.

ಮನೆ ಬಾಡಿಗೆ ಮಾಡಲು ಆರ್ಥಿಕ ಹೊರೆಯಿಂದ ಪಿಜಿಯಲ್ಲಿ ವಾಸವಾಗಿದ್ದಾರೆ.ಇದೀಗ ಅವರ ಮೇಲೂ ಜಿಎಸ್‌ಟಿ (PG Hostels rent increases) ಪೆಟ್ಟು ಬೀಳಲಿದೆ.

ಇದನ್ನೂ ಓದಿ : ದ್ವಿತೀಯ ಪಿಯುಸಿಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌, 2ನೇ ಬಾರಿ ಪೂರಕ ಪರೀಕ್ಷೆ: ವೇಳಾಪಟ್ಟಿ ಬಿಡುಗಡೆ

ಪಿಜಿ ಬಾಡಿಗೆ ಅಥವಾ ವಸತಿ ನಿಲಯದ ಶುಲ್ಕಗಳ ಮೇಲಿನ ಜಿಎಸ್‌ಟಿಯನ್ನು ವಿನಾಯಿತಿ ಮಾಡುವಂತೆ ಕೋರಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಆಲಿಸಿದ ನಂತರ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ಸ್

(Authority For Advance Ruling) ಈ ಆದೇಶವನ್ನು ನೀಡಿದೆ. ಇದರೊಂದಿಗೆ ತಿಂಗಳ ಬಾಡಿಗೆಯ ಮೇಲೆ 12% ತೆರಿಗೆಯನ್ನು ಇನ್ಮುಂದೆ ನೋಂದಾಯಿತ ಹಾಸ್ಟೆಲ್‌ಗಳು ಮತ್ತು ಪಿಜಿಗಳು ಹೇರಲು ಆರಂಭಿಸಲಿವೆ.

ಹಾಸ್ಟೆಲ್‌ಗಳು ವಸತಿ ಘಟಕಗಳು ಅಲ್ಲ.2022ರ ಜುಲೈ 17ರಂದು ಸರ್ಕಾರ ದಿನಕ್ಕೆ 1,000 ರೂ.ವರೆಗೆ ಬಾಡಿಗೆ ಇರುವ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳಿಗೆ ಜಿಎಸ್‌ಟಿ ವಿನಾಯಿತಿಯನ್ನು ತೆಗೆದು ಹಾಕಿದೆ.

ಜಿಎಸ್ಟಿಯಿಂದ ವಸತಿ ಘಟಕಗಳ ಬಾಡಿಗೆ ಮಾತ್ರ ವಿನಾಯಿತಿಗೆ ಅರ್ಹವಾಗಿವೆ. ಆದ್ದರಿಂದ ಅಂದಿನಿಂದ ಹಾಸ್ಟೆಲ್ ಬಾಡಿಗೆಯು ಜಿಎಸ್ಟಿ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ (ಎಎಆರ್) ಹೇಳಿದೆ

ರಶ್ಮಿತಾ ಅನೀಶ್

Exit mobile version