ಅಮ್ಮನೊಂದಿಗೆ ಮೋದಿ ಕಳೆದ ಅಪರೂಪದ ಕ್ಷಣಗಳು

prime minister

ಪಂಚರಾಜ್ಯಗಳ ಚುನಾವಣೆಯ ಬಳಿಕ ಪ್ರಧಾನಿ(Primeminister) ಮೋದಿ(Narendra Modi) ಗುಜರಾತ್(Gujarat) ಪ್ರವಾಸ ಕೈಗೊಂಡಿದ್ದಾರೆ. ಇದೇ ವರ್ಷದ ಅಂತ್ಯದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಮೋದಿ ಪಕ್ಷದ ಕಾರ್ಯಕ್ರಮಗಳ ನಿಮಿತ್ತ ತವರು ರಾಜ್ಯ ಗುಜರಾತ್‍ಗೆ ತೆರಳಿದ್ದಾರೆ. ಇನ್ನು ಇದೇ ವೇಳೆಯಲ್ಲಿ ಮೋದಿಯವರು ತಮ್ಮ ತಾಯಿ ಹಿರಾಬೇನ್‍ನೊಂದಿಗೆ ಕಳೆದ ಅಪರೂಪದ ಕ್ಷಣದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜನರ ಮನಸೆಳೆದಿವೆ.

“ಊರಿಗೆ ಅರಸನಾದರು, ತಾಯಿಗೆ ಮಗನೇ..” ಎಂಬ ಗಾದೆಯಂತೆ ಮೋದಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾದರು, ಹಿರಾಬೇನ್‍ಗೆ ಮಗನೇ. ಅಹ್ಮದಾಬಾದ್ ಏರ್‍ಪೋರ್ಟ್‍ನಿಂದ ಬಿಜೆಪಿ ಪಕ್ಷದ ಕಚೇರಿವರೆಗೂ ರೋಡ್ ಷೋ ನಡೆಸಿದ ಮೋದಿ, ಸಂಜೆ ವೇಳೆಗೆ ತಾಯಿ ಹಿರಾಬೇನ್ ಅವರ ಮನೆಗೆ ಭೇಟಿ ನೀಡಿದರು. ಅಲ್ಲಿ ಕೆಲ ಹೊತ್ತು ಕಾಲ ಕಳೆದರು. ತದನಂತರ ಅಮ್ಮನೊಂದಿಗೆ ಊಟ ಮಾಡಿದರು. ಮೋದಿ ಮತ್ತು ಅವರ ತಾಯಿ ಹಿರಾಬೇನ್ ಮಾತನಾಡುತ್ತಿರುವ ಪೋಟೋಗಳು ವೈರಲ್ ಆಗಿವೆ. ತಾಯಿ-ಮಗ ಇಬ್ಬರೇ ಕುಳಿತು ಊಟ ಮಾಡುತ್ತಿರುವ ಪೋಟೋಗಳಿಗೆ ಹೆಚ್ಚಿನ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಸಾಮಾನ್ಯ ಕೌಟುಂಬಿಕ ಹಿನ್ನಲೆಯಿಂದ ಬಂದ ಮೋದಿ ಇಂದು ಪ್ರಧಾನಿ ಪಟ್ಟಕ್ಕೇರಿದ್ದರು, ತಮ್ಮ ಕುಟುಂಬಗಳಿಗೆ ಯಾವುದೇ ಆರ್ಥಿಕ ಸಹಾಯ ಮಾಡಿಲ್ಲ. ಮೋದಿಯವರ ತಾಯಿ ಹಿರಾಬೇನ್ ಮೋದಿಯವರ ಅಣ್ಣನ ಮನೆಯಲ್ಲೇ ಇರುತ್ತಾರೆ. ಈಗಲೂ ಮೋದಿಯವರ ಕುಟುಂಬ ಕೆಲ ಮದ್ಯಮ ವರ್ಗದ ಕುಟುಂಬವಾಗಿದೆ. ಯಾವುದೇ ಐಷಾರಾಮಿ ಜೀವನವನ್ನು ಅವರು ಅನುಭವಿಸುತ್ತಿಲ್ಲ. ಮೋದಿಯವರ ತಾಯಿ ಹಿರಾಬೇನ್ ಅತ್ಯಂತ ಸರಳವಾಗಿ ಜೀವನ ನಡೆಸುತ್ತಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪಂಚರಾಜ್ಯಗಳ ನಂತರ ಗುಜರಾತ್‍ನತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿದ್ದಾರೆ. 1998 ರಿಂದಲೂ ಗುಜರಾತ್‍ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 2001 ರಿಂದ 2014 ರವರೆಗೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಮೋದಿ ಪ್ರಧಾನಿಯಾದ ನಂತರವೂ ಗುಜರಾತ್‍ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ 2022ರ ಅಂತ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಅಧಿಕಾರ ಹಿಡಿಯಲು ಮೋದಿ ಈಗಿನಿಂದಲೇ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತು ಮತ್ತೆ ಅಧಿಕಾರ ಸ್ಥಾಪಿಸಲು ಮೋದಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.

ಇನ್ನು ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಸುಲಭವಾಗಿಲ್ಲ. ಕಳೆದ 24 ವರ್ಷಗಳಿಂದ ಅಧಿಕಾರದಲ್ಲಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಡಳಿತ ವಿರೋಧಿ ಅಲೆ ನಿರ್ಮಾಣವಾಗಿದೆ. ಆದರೆ ಗುಜರಾತ್ ಜನತೆ ಮೋದಿಗೆ ಶಕ್ತಿ ನೀಡಲು ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಮತಚಲಾಯಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಏನಾಗುತ್ತದೆ ಎಂದು ಕಾದುನೋಡಬೇಕಿದೆ.

Exit mobile version