ಅಂಚೆ ಕಚೇರಿಯ ಈ ಹೊಸ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಹಣ ಗಳಿಸಿ!

ಇಂದು ಮಾರುಕಟ್ಟೆಯಲ್ಲಿ ಹಲವು ಹೂಡಿಕೆ ಆಯ್ಕೆಗಳಿವೆ. ಅದರಲ್ಲೂ ಇಂದು ಹೆಚ್ಚಿನ ಹೂಡಿಕೆದಾರರು ಬ್ಯಾಂಕ್, ಪೋಸ್ಟ್ ಆಫೀಸ್ (Post Office) ಅಥವಾ ಎಲ್ಐಸಿ (LIC) ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ನಿರ್ದಿಷ್ಟವಾಗಿ (post office new scheme) ಹೇಳುವುದಾದರೆ, ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಇತ್ತೀಚೆಗೆ ಜನಪ್ರಿಯತೆಯನ್ನು ಹೆಚ್ಚಿಸಿವೆ.

ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಅದರಲ್ಲಿ ಒಂದು, ಇದರಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ಕೆಲವೇ ಸಮಯದಲ್ಲಿ ದ್ವಿಗುಣಗೊಳ್ಳುತ್ತದೆ.

ಭಾರತೀಯ ಅಂಚೆ ಇಲಾಖೆಯು 1988 ರಲ್ಲಿ ಇದನ್ನು ಪರಿಚಯಿಸಿತು. ಕಿಸಾನ್ ವಿಕಾಸ್ (Kisan Vikas) ಪತ್ರದ ಮೂಲ ಗುರಿ ರೈತರನ್ನು ಹಣ ಉಳಿಸಲು ಉತ್ತೇಜಿಸುವುದು.

ಈ ಯೋಜನೆಗೆ ಬೇಕಾದಲ್ಲಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು. ಕನಿಷ್ಠ ಹೂಡಿಕೆ 1,000 ರೂ.

ಗರಿಷ್ಠ ಹೂಡಿಕೆ ಮಿತಿ ಇಲ್ಲ. ಈ ಯೋಜನೆಯ ಅವಧಿ 10 ವರ್ಷ 4 ತಿಂಗಳು. ಮೆಚ್ಯುರಿಟಿ ಹೂಡಿಕೆ ಮಾಡಿದ ಫಂಡ್‌ಗಳು ಮುಕ್ತಾಯದ ನಂತರ ಇಮ್ಮಡಿಯಾಗುತ್ತದೆ.

ಬಡ್ಡಿ ಎಷ್ಟು?
ಕೇಂದ್ರ ಸರ್ಕಾರವು ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿನ ಬಡ್ಡಿ ದರವನ್ನು 7.2% ರಿಂದ 7.4% ಕ್ಕೆ ಏರಿಸಿದ್ದು ಏಪ್ರಿಲ್ (April) 1,

2023 ರಿಂದ ಜಾರಿಗೆ ಬಂದಿದೆ. ಈ ರೀತಿಯಾಗಿ, ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವು ಮೊದಲಿಗಿಂತ (post office new scheme) ದ್ವಿಗುಣಗೊಳ್ಳುತ್ತದೆ.

ಈ ಹಿಂದೆ ಹಣ ದ್ವಿಗುಣಗೊಳ್ಳಲು 120 ತಿಂಗಳು ಬೇಕಾಗಿತ್ತು ಆದರೆ ಇನ್ನು ಮುಂದೆ ಇದು ಕೇವಲ 115 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ.

18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕರು ಹತ್ತಿರದ ಅಂಚೆ ಕಚೇರಿಯಿಂದ ಕಿಸಾನ್ ವಿಕಾಸ್ ಪತ್ರವನ್ನು ಖರೀದಿಸಬಹುದು.

ಯಾವುದೇ ವಯಸ್ಕ ತನ್ನ ಸ್ವಂತ ಹೆಸರಿನಲ್ಲಿ ಅಥವಾ ಅಪ್ರಾಪ್ತರ ಪರವಾಗಿ ಕೂಡ ಕೆವಿಪಿಯಲ್ಲಿ ಯಲ್ಲಿ ಹೂಡಿಕೆ ಮಾಡಬಹುದು.

KVP ಯಲ್ಲಿ ಮೂವರು ವಯಸ್ಕರು ಜಂಟಿಯಾಗಿ ಹೂಡಿಕೆ ಮಾಡಬಹುದು. ಜನರು ತಮ್ಮ ಹತ್ತಿರದ ಅಂಚೆ ಕಚೇರಿ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ಆನ್‌ಲೈನ್‌ನಲ್ಲಿ (Online) ಕೂಡ ಯೋಜನೆಗೆ ನೋಂದಾಯಿಸಿಕೊಳ್ಳಬಹುದು.

ಅಂಚೆ ಸೇವೆಗಳ ಸಚಿವಾಲಯದ ವೆಬ್‌ಸೈಟ್‌ಗೆ (Website) ಭೇಟಿ ನೀಡುವ ಮೂಲಕ ಆನ್‌ಲೈನ್ ನೋಂದಣಿಯನ್ನು ಮಾಡಬೇಕು ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹೂಡಿಕೆಗಳನ್ನು ಮಾಡಬಹುದು.

‘ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಆಯ್ಕೆಮಾಡಿ ಮತ್ತು ಕೆವಿಪಿ ಅರ್ಜಿ ಎ ಡೌನ್‌ಲೋಡ್ (Download) ಮಾಡಿ. ಭರ್ತಿ ಮಾಡಿದ ನಂತರ, ಅದನ್ನು ಅಗತ್ಯ KYC ದಾಖಲೆಗಳೊಂದಿಗೆ ಅಂಚೆ ಕಚೇರಿಗೆ ಸಲ್ಲಿಸಬೇಕು.

ಕಿಸಾನ್ ವಿಕಾಸ್ ಪತ್ರದ ಪ್ರಸ್ತುತ ದರದಂತೆ ನೀವು ಹೋದರೆ, ನೀವು 10 ಲಕ್ಷ ರೂ. ಹೂಡಿಕೆ ಮಾಡಿದರೆ 115 ತಿಂಗಳ ಹೂಡಿಕೆಯ ನಂತರ ನಿಮಗೆ 20 ಲಕ್ಷ ರೂ. ಪಡೆಯಬಹುದು.

ಅಷ್ಟೇ ಅಲ್ಲದೆ ವ್ಯಕ್ತಿಯಿಂದ ವ್ಯಕ್ತಿಗೆ ಕಿಸಾನ್ ವಿಕಾಸ್(Kisan Vikas) ಪತ್ರದ ಪ್ರಮಾಣಪತ್ರಗಳನ್ನು ವರ್ಗಾಯಿಸಲು ಅವಕಾಶವಿದೆ ಮತ್ತು ಭಾರತದಲ್ಲಿರುವ

ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿ ಶಾಖೆಗೆ ಕೂಡ ವರ್ಗಾಯಿಸಲು ಅವಕಾಶವಿದೆ.

ಈ ಯೋಜನೆಯಿಂದ ತೆರಿಗೆ ಪ್ರಯೋಜನವಿಲ್ಲ:

ಈ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ನಿಮಗೆ ಆದಾಯ ತೆರಿಗೆಯ ಯಾವುದೇ ಪ್ರಯೋಜನ ಸಿಗುವುದಿಲ್ಲ.ನಿಮ್ಮ ಹಣದ ವಿತ್ ಡ್ರಾ (Withdraw) ಸಮಯದಲ್ಲಿ ಟಿಡಿಎಸ್ ನಿಂದ ನಿಮ್ಮ ಠೇವಣಿಯು ಮುಕ್ತವಾಗಿರುತ್ತದೆ.

124 ತಿಂಗಳುಗಳ ಮೆಚ್ಯುರಿಟಿ ಅವಧಿ ಈ ಠೇವಣಿ ಹೊಂದಿದ್ದರೂ ಕೂಡ ಪ್ರಮಾಣಪತ್ರ ಪಡೆದ ಎರಡೂವರೆ ವರ್ಷಗಳ ಬಳಿಕ ನಗದೀಕರಣಗೊಳಿಸಲು ಅವಕಾಶವಿದೆ.

ರಶ್ಮಿತಾ ಅನೀಶ್

Exit mobile version