ಸಂಸದೆ ಪ್ರಜ್ಞಾ ಠಾಕೂರ್‌ ಜೊತೆ ‘ಕೇರಳ ಸ್ಟೋರಿ’ ಸಿನೆಮಾ ನೋಡಿದ್ದ ಯುವತಿ ಮುಸ್ಲಿಂ ಯುವಕನ ಜೊತೆ ಪರಾರಿ

Bhopal: ವಿವಾದಾತ್ಮಕ ಚಿತ್ರ “ದಿ ಕೇರಳ ಸ್ಟೋರಿ” ನಿಮಗೆಲ್ಲರಿಗೂ ತಿಳಿದಿರಬಹುದು. (Pragya Thakur viral post) ಮೇ 5ರಂದು ಬಿಡುಗಡೆ ಆಗಿರುವ ವಿವಾದದ ಕಿಚ್ಚು ಹೊತ್ತಿಸಿರುವ ‘ಲವ್‌ ಜಿಹಾದ್‌

(Love Jihad) ಕಥೆ ಆಧಾರಿತ ಸಿನಿಮಾ ಎಂಬ ಆಪಾದನೆಗೆ ಗುರಿಯಾಗಿರುವ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿದೆ.

ಈ ಸಿನಿಮಾದಲ್ಲಿರುವ ವಿಷಯಗಳು ತುಂಬಾ ವಿವಾದವನ್ನು ಹುಟ್ಟುಹಾಕಿವೆ. ಕೇರಳದಲ್ಲಿ ಸಾವಿರಾರು ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ನಂತರ ಅವರನ್ನು

ಐಸಿಸ್ ಉಗ್ರ ಸಂಘಟನೆಗೆ ಸೇರಿಸಲಾಗಿದೆ ಎಂಬ (Pragya Thakur viral post) ವಿಷಯವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಈ ಚಲನಚಿತ್ರವು ಕೇರಳದ ನೈಜ ಘಟನೆಗಳನ್ನು ಆಧರಿಸಿದೆ ಎಂದು ಹೇಳಿಕೊಳ್ಳುವುದರಿಂದ ಚಲನಚಿತ್ರವನ್ನು ಬಹಿಷ್ಕರಿಸಲು ಈ ಹಿಂದೆ ಕರೆ ಕೂಡ ನೀಡಲಾಯಿತು.

ಈ ಎಲ್ಲದರ ನಡುವೆ, “ದಿ ಕೇರಳ ಸ್ಟೋರಿ” (The Kerala Story) ಉತ್ತಮ ಚಲನಚಿತ್ರ ಮತ್ತು ಗಲ್ಲಾಪೆಟ್ಟಿಗೆಯಲ್ಲಿಕೂಡ ಉತ್ತಮ ಗಳಿಕೆ ಮಾಡಿ ಹಿಟ್ ಆಗಿ ವಿಮರ್ಶಾತ್ಮಕ ಮೆಚ್ಚುಗೆಗೆ ಬಿಡುಗಡೆಯಾಯಿತು.

ಆದರೆ ಇದೀಗ ಭೋಪಾಲ್‌ನಲ್ಲಿ ಈ ಸಿನಿಮಾವನ್ನಾಧರಿಸಿದ ಮತ್ತೊಂದು ಘಟನೆ ನಡೆದಿದ್ದು, ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ (Pragya Thakur) ಅವರು ಭೋಪಾಲ್‌ನ 19 ವರ್ಷದ ಯುವತಿಯನ್ನು ಕೇರಳ ಸ್ಟೋರಿ

ಸಿನಿಮಾ ವೀಕ್ಷಿಸಲು ಕರೆದೋಯ್ದಿದ್ದು ತೀವ್ರ ಅವಮಾನಕ್ಕೀಡಾಗಿದ್ದಾರೆ.

ಪ್ರೇಮಿಯೊಂದಿಗೆ ಪರಾರಿಯಾದ ನರ್ಸಿಂಗ್ ವಿದ್ಯಾರ್ಥಿನಿ

ಯಾಕೆಂದರೆ ಆ ಹುಡುಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಪ್ರೀತಿಸಿ ಅದೇ ಪ್ರೇಮಿಯೊಂದಿಗೆ ಹುಡುಗಿ ಓಡಿಹೋಗಿದ್ದಾಳೆ ಎಂದು ವರದಿಯಾಗಿದೆ. ಮಧ್ಯಪ್ರದೇಶದ ಭೋಪಾಲ್ (Bhopal) ಸಂಸದೀಯ ಕ್ಷೇತ್ರವನ್ನು

ಪ್ರತಿನಿಧಿಸುವ ಪ್ರಜ್ಞಾ ಠಾಕೂರ್ ಎಂಬಾಕೆ ಯುವತಿಯನ್ನು ಸಿನಿಮಾಕ್ಕೆ ಕರೆದೊಯ್ದಿದ್ದಾರೆ. ಈ ಚಲನಚಿತ್ರವನ್ನು ನೋಡಿದ ನಂತರ ಆದರೂ ಕೂಡ ಆಕೆ ತನ್ನ ಗೆಳೆಯ ಯೂಸುಫ್‌ನಿಂದ (Yusuf)

ದೂರವಾಗಲಿ ಮತ್ತು ಅವನ ಸ್ನೇಹವನ್ನು ಕೊನೆಗೊಳಿಸಬೇಕೆಂದು ಬಯಸಿದ್ದಳು.

ಈ ‘‘ಸಿನಿಮಾದಲ್ಲಿ ನಾವು ಯಾವುದೇ ಸಮುದಾಯವನ್ನು ಅಥವಾ ಮುಸ್ಲಿಮರನ್ನು ಗುರಿ ಮಾಡಿಕೊಂಡು ಸಿನಿಮಾ ಮಾಡಿಲ್ಲ. ನಮ್ಮ ಯುವ ಜನರನ್ನು ಭಯೋತ್ಪಾದನೆ ಹೇಗೆ ದಾರಿ ತಪ್ಪಿಸುತ್ತಿದೆ.

ಯುವ ಜನರ ಬ್ರೈನ್‌ ವಾಶ್‌ (Brain Wash) ಮಾಡಿ ಅವರನ್ನು ಹೇಗೆ ಉಗ್ರರನ್ನಾಗಿ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳನ್ನು ಹೇಗೆಲ್ಲಾ ಬಳಸಿಕೊಳ್ಳಲಾಗಿದೆ ಎಂಬುದನ್ನು ಮಾತ್ರ ನಾವು

ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ‘ದಿ ಕೇರಳ ಸ್ಟೋರಿ’ ಚಿತ್ರ ತಂಡ ಸ್ಪಷ್ಟನೆ ನೀಡಿದೆ.

ನಾವು ಈಗಾಗಲೇ “ಐಸಿಸ್‌ ಸಂಘಟನೆಯಿಂದ ಹೊರ ಬಂದ ಅನೇಕ ಸಂತ್ರಸ್ತರ ಜತೆ ಮಾತುಕತೆ ನಡೆಸಿ, ಅವರ ಬದುಕಿನ ಬಗ್ಗೆ ಸುದೀರ್ಘವಾದ ಸಂಶೋಧನೆ ನಡೆಸಿಈ ಸಿನಿಮಾ ಮಾದಿದ್ದೇವೆ,

ಇದರಲ್ಲಿ ವಾಸ್ತವಾಂಶಗಳು ಅಡಗಿವೆ” ಎಂದು ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್‌ಹೇಳಿದ್ದಾರೆ.

ರಶ್ಮಿತಾ ಅನೀಶ್

Exit mobile version