ಅರಸೀಕೆರೆಯಲ್ಲಿ ಜೆಡಿಎಸ್‌ ಗೆಲ್ಲುವವರೆಗೂ ನಾನು ನಿದ್ರಿಸುವುದಿಲ್ಲ : ಪ್ರಜ್ವಲ್‌ ರೇವಣ್ಣ ಶಪಥ

Hassan: ಅರಸೀಕೆರೆ ಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತಾದಳವನ್ನು(JDS) ಮತ್ತೊಮ್ಮೆ ಗೆಲ್ಲಿಸುವವರೆಗೂ (Prajwal Revanna challenge) ನಾನು ನಿದ್ರಿಸುವುದಿಲ್ಲ.

ಮುಂಬರುವ  ಚುನಾವಣೆಯಲ್ಲಿ ಏನಾಗುತ್ತದೆಯೋ ನೋಡೇ ಬಿಡೋಣ. ನಾನು ಸುಮ್ಮನೆ ಇರುವುದಿಲ್ಲ. ಕ್ಷೇತ್ರದಾದ್ಯಂತ ಸಂಚರಿಸಿ ಜೆಡಿಎಸ್‌ ಪಕ್ಷವನ್ನು ಸಂಘಟಿಸುತ್ತೇನೆ.

ಪಕ್ಷವನ್ನು ಗೆಲ್ಲಿಸಿಕೊಂಡು   ಬರುತ್ತೇನೆ ಎಂದು ಹಾಸನ ಸಂಸದ ಪ್ರಜ್ವಲ್‌ ರೇವಣ್ಣ(Prajwal Revanna) ಸವಾಲು ಹಾಕಿದ್ದಾರೆ.

ಅರಸೀಕೆರೆಯಲ್ಲಿ(Arsikere) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಸೀಕೆರೆಯಲ್ಲಿ ಜನತಾದಳ (Prajwal Revanna challenge) ಪಕ್ಷ ಗೆಲ್ಲಲಿದೆ.

ಯಾರೋ ಒಬ್ಬರು ಪಕ್ಷ ತೊರೆದ ಮಾತ್ರಕ್ಕೆ ಪಕ್ಷ ಸೋಲುವುದಿಲ್ಲ. ಫೆಬ್ರುವರಿ 12ರಂದು  ಅರಸೀಕೆರೆಯಲ್ಲಿ  ಜೆಡಿಎಸ್‌ ಕಾರ್ಯಕರ್ತರ ಸ್ವಾಭಿಮಾನ ಸಭೆ  ನಡೆಯಲಿದೆ.

ಈ ವೇಳೆ ಎಲ್ಲ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು. ಇನ್ನು  ಕುಮಾರಣ್ಣ(HD Kumaraswamy) ಅವರ ಪಂಚರತ್ನ ಯಾತ್ರೆ(Pancharathna Yatre) ಬಂದಾಗ ನಾವು ಹೆಚ್ಚಿನ ಜನರನ್ನು ಸೇರಿಸಬೇಕು.

ನಾವು ಟೊಂಕಕಟ್ಟಿ ನಿಂತು ಲಕ್ಷ ಲಕ್ಷ ಜನರನ್ನು ಸೇರಿಸಿ ಪಕ್ಷ ಸಂಘಟನೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ: ಖರ್ಗೆ ಅವರು ದಲಿತ ನಾಯಕರು ಎಂದರೆ ಅದು ತಮ್ಮ ಕುಟುಂಬದವರು ಮಾತ್ರ ಎಂದುಕೊಂಡಂತಿದೆ : ಬಿಜೆಪಿ ಲೇವಡಿ

ಇದೇ ವೇಳೆ ಹಾಲಿ ಶಾಸಕ ಶಿವಲಿಂಗೇಗೌಡರ(Shivalinge Gowda) ಕುರಿತು ಮಾತನಾಡಿ, ಯಾರದೋ ಮಾತು ಕೇಳಿ ಪಕ್ಷ ಬಿಟ್ಟು ಹೋಗಬೇಡಿ.

ನಾವು ಈಗಲೂ ನಿಮ್ಮ ಜೊತೆಗಿದ್ದೇವೆ. ಅರಸೀಕೆರೆಯಲ್ಲಿರುವ ನಿಷ್ಠಾವಂತ ಜೆಡಿಎಸ್‌ಕಾರ್ಯಕರ್ತರು ನಿಮ್ಮೊಂದಿಗಿದ್ದಾರೆ. ನೀವು ಪಕ್ಷದಲ್ಲೇ ಇರುವುದಾದರೆ ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ.

  ನೀವು ವಾಪಸ್ ಬರುವುದಾದರೆ ದೇಹ ಮಾತ್ರ ಬರೋದಲ್ಲ, ಮಾನಸಿಕವಾಗಿ ಬರಬೇಕು. ಇನ್ನು ಅರಸೀಕೆರೆಯಲ್ಲಿ ನಾವು ಪಕ್ಷ ಉಳಿಸಲು ಕೆಲಸ ಮಾಡಿದ್ದೇವೆ. ಹೊರತು  ಶಿವಲಿಂಗೇಗೌಡರ ವಿರುದ್ಧ ಯಾವುದೇ ಕೆಲಸ ಮಾಡಿಲ್ಲ.

ಈ ಹಿಂದೆ ಚುನಾವಣೆಯಲ್ಲಿ ಶಿವಲಿಂಗೇಗೌಡರು ಸೋತಾಗ ರೇವಣ್ಣನವರು(HD Revanna) ಅವರ ಬೆಂಬಲಕ್ಕೆ ನಿಂತರು.  ಅವರು ಹೇಳಿದ ಎಲ್ಲಾ ಕೆಲಸಗಳನ್ನು ಮಾಡಿಕೊಟ್ಟು,

ಅವರನ್ನು ಕ್ಷೇತ್ರದಲ್ಲಿ  ಪ್ರಬಲರಾಗುವಂತೆ ಮಾಡಿದರು ಎಂದು ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನಾನು ಸುಮ್ಮನೆ ಕೂರಲ್ಲ. 

ವಾರಕ್ಕೆ ಎರಡು ದಿನವನ್ನಾದರೂ ಅರಸೀಕೆರೆ  ಕ್ಷೇತ್ರಕ್ಕೆ  ಮೀಸಲಿಡುತ್ತೇನೆ.  ಜೆಡಿಎಸ್‌ ಪಕ್ಷವನ್ನು ಅರಸೀಕೆರೆಯಲ್ಲಿ ಉಳಿಸುವುದು ಮತ್ತು ಬೆಳೆಸುವುದು ನನ್ನ ಉದ್ದೇಶ.

ಶಿವಲಿಂಗೇಗೌಡರ ತೀರ್ಮಾನದಿಂದ ಜೆಡಿಎಸ್‌ ಕಾರ್ಯಕರ್ತರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಜೆಡಿಎಸ್‌ ಕಾರ್ಯಕರ್ತರು ಪಕ್ಷವನ್ನೇ ಬೆಂಬಲಿಸುತ್ತಾರೆ. ಪಕ್ಷಕ್ಕಾಗಿಯೇ ಹೋರಾಡುತ್ತಾರೆ ಎಂದರು.

Exit mobile version