ಟೀ ಮಾರಿದ್ದನ್ನು ನಂಬಿದವ್ರು, ದೇಶವನ್ನು ಮಾರುತ್ತಿದ್ದರು ಯಾಕೆ ನಂಬುತ್ತಿಲ್ಲ : ಪ್ರಕಾಶ್ ರಾಜ್!

prakash raj

ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುವ ನಟ(Actor) ಪ್ರಕಾಶ್ ರಾಜ್(Prakash Raj) ಮತ್ತೊಂದು ವಿವಾದಾತ್ಮಕ(Controversial) ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಹೌದು, ರಾಷ್ಟ್ರದಲ್ಲಿ ಸದ್ಯ ಕೋಮು ಗಲಭೆ ಪ್ರಕರಣಗಳು ಹೆಚ್ಚುತ್ತಿದ್ದು, ತೀವ್ರ ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದರೆ, ಮತ್ತೊಂದೆಡೆ ರಾಜಕೀಯ ಜಟಾಪಟಿ ತೀವ್ರ ಕೂತುಹಲ ಹಂತಗಳನ್ನು ತಲುಪಿದೆ. ಕರ್ನಾಟಕ ರಾಜ್ಯ ರಾಜಾಕಾರಣದಲ್ಲಿ ಮಾಸಿಹೋಗಿದ್ದ ಹಿಜಾಬ್(Hijab) ಪ್ರಕರಣ ಪರೀಕ್ಷೆ ಮೂಲಕ ಮತ್ತೊಮ್ಮೆ ಸ್ಪೋಟಗೊಂಡಿದೆ. ಈ ವಿವಾದವೂ ದಿನದಿಂದ ದಿನಕ್ಕೆ ಮಹತ್ತರ ತಿರುವು ಪಡೆದುಕೊಳ್ಳುತ್ತಿದೆ.

ಇದರ ಜೊತೆಗೆ ದೇಶದ ರಾಜಧಾನಿ ದೆಹಲಿ, ಜಹಾಂಗೀರ್‍ಪುರಿಯಲ್ಲಿ ಜೆಸಿಬಿ ಬಳಸಿ ಗಲಭೆ ಸಂಬಂಧಿತ ಆರೋಪಿ ಮನೆಗಳನ್ನು, ಮಸೀದಿ ಗೋಡೆಗಳನ್ನು ನೆಲಸಮಗೊಳಿಸಲಾಯಿತು. ಈ ಕುರಿತು ನಟ ಪ್ರಕಾಶ್ ರಾಜ್ ಅವರು ನರೇಂದ್ರ ಮೋದಿ ಸರ್ಕಾರವನ್ನು ಉದ್ದೇಶಿಸಿ, ದೊಡ್ಡ ದೊಡ್ಡ ಪ್ರತಿಮೆಗಳನ್ನು ಕಟ್ಟಲಾಗುತ್ತದೆ ಅದನ್ನು ಅನಾವರಣಗೊಳಿಸಲಾಗುತ್ತದೆ. ಇತ್ತ ಮನೆಗಳನ್ನು ಧ್ವಂಸ ಮಾಡಲಾಗುತ್ತದೆ. ನಾವು ಮಾತನಾಡದೇ ಸುಮ್ಮನೆ ಇದ್ದರೆ, ಆದಷ್ಟು ಬೇಗ ಇವರು ನಮ್ಮ ದೇಶವನ್ನು ಧ್ವಂಸಗೊಳಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಟ್ವೀಟ್ ಮಾಡುವ ಮೂಲಕ ಮೋದಿ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದರು.

ಸದ್ಯ ಆರದ ಗಾಯದ ಮೇಲೆ ಹೊಡೆದಂತೆ, ಪ್ರಕಾಶ್ ರಾಜ್ ಮತ್ತೊಮ್ಮೆ ಟ್ವೀಟ್ ಮಾಡಿದ್ದು, “ಚಹಾ ಮಾರಿದವರನ್ನು ನಂಬಿದವರು, ಈಗ ದೇಶವನ್ನು ಮಾರುತ್ತಿದ್ದರು ಯಾಕೆ ನಂಬುತ್ತಿಲ್ಲ?” ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕುಟುಕಿದ್ದಾರೆ. ಪ್ರಕಾಶ್ ರಾಜ್ ಅವರ ಈ ಒಂದು ಟ್ವೀಟ್‍ಗೆ 2 ಸಾವಿರಕ್ಕೂ ಹೆಚ್ಚು ರೀ-ಟ್ವೀಟ್ ಹರಿದುಬಂದಿದೆ!

Exit mobile version