ಗಗನಕ್ಕೇರುತ್ತಿದೆ ತೊಗರಿ ಬೇಳೆ ಬೆಲೆ ! ಮಳೆ, ನೆಟೆ ರೋಗದಿಂದ ಕುಸಿದ ಇಳುವರಿ

Karnataka: ಕರ್ನಾಟಕದಲ್ಲಿ ಅತೀ ಹೆಚ್ಚು ತೊಗರಿ ಬೆಳೆಯುವ ಕಲಬುರಗಿ ಜಿಲ್ಲೆಯಲ್ಲಿ ನೆಟೆರೋಗ ಹಾಗೂ ಅತಿವೃಷ್ಟಿಯಿಂದಾಗಿ ಇಳುವರಿಯಲ್ಲಿ ಗಣನೀಯ ಇಳಿಕೆಯಾಗಿದೆ. ಇದರಿಂದ ತೊಗರಿ ಬೇಳೆಯ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ತೊಗರಿಗೆ 23 ಲಕ್ಷ ಮೆಟ್ರಿಕ್ ಟನ್ (Metric Ton) ಬೇಡಿಕೆಯಿದ್ದರೆ, ಈಗ ಪ್ರಸ್ತುತ ದೇಶದಲ್ಲಿ ಉತ್ಪಾದನೆಯಾಗುತ್ತಿರುವುದು ಕೇವಲ 18 ಲಕ್ಷ ಮೆಟ್ರಿಕ್ ಟನ್. ಈ ಉತ್ಪಾದನೆಯ (price of toor dal) ಕೊರತೆಯಿಂದ ದಕ್ಷಿಣ ಆಫ್ರಿಕಾ (Africa) ಹಾಗೂ ಇತರ ರಾಷ್ಟ್ರಗಳಿಂದ ತನ್ನ ಅಗತ್ಯಗಳನ್ನು ಪೂರೈಸಲು ಆಮದು ಮಾಡಿಕೊಳ್ಳುತ್ತಿದೆ.ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು 18 ಲಕ್ಷ ಮೆಟ್ರಿಕ್ ಟನ್ ಪೈಕಿ ಕಲಬುರಗಿ ಜಿಲ್ಲೆಯೊಂದರಲ್ಲೇ 10 ಲಕ್ಷ ಮೆಟ್ರಿಕ್ ಟನ್ ತೊಗರಿ ಉತ್ಪಾದನೆಯಾಗುತ್ತಿದೆ.

ಆದರೆ, ಕಲಬುರಗಿ (Kalaburgi) ಜಿಲ್ಲೆಯಲ್ಲಿ ತೊಗರಿ ಬೇಸಾಯಕ್ಕೆ ಬಳಸುತ್ತಿದ್ದ ಭೂಮಿಯ ವಿಸ್ತೀರ್ಣ 7.50 ಲಕ್ಷ ಹೆಕ್ಟೇರ್‌ನಿಂದ ಈಗ 5.50-4.50 ಲಕ್ಷ ಹೆಕ್ಟೇರ್‌ಗೆ ಕುಸಿದಿದೆ.

ಇದರಿಂದ ತೊಗರಿ ರೈತರು ನಾನಾ ಸಂಕಷ್ಟಕ್ಕೆ ಸಿಲುಕಿದ್ದು, ಹತ್ತಿ, ಕಬ್ಬು, ಸೋಯಾಬೀನ್ (Soybean) ಬೆಳೆಗಳತ್ತ ಆಕರ್ಷಿತರಾಗಿದ್ದಾರೆ.

ಇದೇ ರೀತಿ ಮುಂದುವರಿದರೆ ತೊಗರಿ ಬೇಸಾಯಕ್ಕೆ ಬಳಸುವ ಭೂಮಿಯ ಪ್ರಮಾಣ ಗಣನೀಯವಾಗಿ ಕುಗ್ಗಲಿದ್ದು, ತೊಗರಿ ಪೂರೈಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.


ಸದ್ಯ ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ(Maharashtra) , ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚು ತೊಗರಿ ಬೆಳೆಯುತ್ತಾರೆ.

ಕಲಬುರಗಿ ಪ್ರದೇಶದಲ್ಲಿ ದೇಶದ ಒಟ್ಟಾರೆ ತೊಗರಿ ಉತ್ಪಾದನೆಯಲ್ಲಿ ಶೇ.50ಕ್ಕಿಂತ ಹೆಚ್ಚು ಉತ್ಪಾದನೆಯಾಗುತ್ತದೆ. ಒಂದು ಹಂತದಲ್ಲಿ, 500,000 ಟನ್ ಬೇಳೆಯನ್ನು ರಫ್ತು ಮಾಡಲಾಯಿತು.

ಯುಕೆ, ಆಸ್ಟ್ರೇಲಿಯಾ (Australia) , ಯುಎಸ್ ಎ ಸೇರಿದಂತೆ ಹಲವು ದೇಶಗಳಲ್ಲಿ ಕಲಬುರಗಿ ಜಿಲ್ಲೆಯ ಜಿಐ ಲೇಬಲ್ ಇರುವ ತೊಗರಿ ಬೇಳೆ ದುಪ್ಪಟ್ಟು ಬೆಲೆಗೆ ಮಾರಾಟವಾದ ಉದಾಹರಣೆಗಳಿವೆ.

ಅತಿಯಾದ ಮಳೆಯಿಂದ ಆದ ಅವಾಂತರ:
ಈ ಬಾರಿ ಮುಂಗಾರು ಹಂಗಾಮಿಗೂ ಮುನ್ನ ತೊಗರಿಯನ್ನು ಮಾರುಕಟ್ಟೆಗೆ ತರಬೇಕಿತ್ತು. ಅಕಾಲಿಕ ಮಳೆಯಿಂದಾಗಿ ತೊಗರಿ ಗಿಡದಲ್ಲಿ ಹೂವುಗಳು (price of toor dal) ಅರಳದ ಕಾರಣ ರೈತರು ಕಟಾವು ಮಾಡಲು ಹಿಂದೇಟು ಹಾಕಿದ್ದರಿಂದ ಉತ್ಪಾದನೆಯಲ್ಲಿ ಕುಸಿತ ಉಂಟಾಗಿದೆ.

ಮುಂದಿನ ವಾರವೂ ತೊಗರಿ ಬೆಳೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಆ ಸಮಯದಲ್ಲಿ ಬೆಲೆ ನಿಯಂತ್ರಣಕ್ಕೆ ಬರಬಹುದು ಎಂದು ಎಪಿಎಂಸಿ (APMC) ಅಧಿಕಾರಿಗಳು ಹೇಳಿದರು.

ತೊಗರಿ ಬೇಳೆ ದರ ಗಗನಮುಖಿ:

ಈ ಹಿಂದೆ ಕ್ವಿಂಟಲ್ ಗೆ 6-8 ಸಾವಿರ ರೂ ವರೆಗೆ ತೊಗರಿ ಮಾರಾಟವಾಗುತಿತ್ತು, ಈಗ 9 ರಿಂದ 10 ಸಾವಿರ ರೂ.ಗೆ ತೊಗರಿ ಮಾರಾಟವಾಗುತ್ತಿದೆ.

ಮಾರುಕಟ್ಟೆಯಲ್ಲಿ ಈ ಹಿಂದೆ ತೊಗರಿ ಬೇಳೆ ಕೆಜಿಗೆ 90-120 ರೂ.ವರೆಗೆ ಇತ್ತು ಆದರೆ ಈಗ ಕೆಜಿ ಗೆ 150-160 ರೂ. ಆಗಿದೆ.

ಈ ಪರಿಸ್ಥಿತಿಯು ಹೀಗೆ ಮುಂದುವರಿದರೆ ಪ್ರತಿ ಕಿಲೋಗ್ರಾಂಗೆ 200 ವರೆಗೆ ತಲುಪಿದರೂ ಆಶ್ಚರ್ಯವೇನಿಲ್ಲ.

ತೊಗರಿಗೆ ಪೆಟ್ಟು ಕೊಟ್ಟ ನೆಟೆ ರೋಗ :

2022-23ರ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ 4.87 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಯಾಗಿದೆ. ಆದರೆ ಸಂಕೀರ್ಣ ನೆಟೆ ಮತ್ತು ಫ್ಯೂಸೇರಿಯಂ ನೆಟೆ ರೋಗದಿಂದ ಅಂದಾಜು 1.98 ಲಕ್ಷ ಹೆಕ್ಟೇರ್ (Hectare) ಬೆಳೆ ಹಾನಿಯಾಗಿದೆ ಅಲ್ಲದೆ ಶೇ.40-60 ಇಳುವರಿ ಕುಗ್ಗಿದೆ.

1.29 ಲಕ್ಷ ಹೆಕ್ಟೇರ್ ತೊಗರಿ ಆಗಸ್ಟ್, ಸೆಪ್ಟೆಂಬರ್ (September) ಮತ್ತು ಅಕ್ಟೋಬರ್ನಲ್ಲಿ ಅತಿವೃಷ್ಟಿಯಿಂದಾಗಿ ಹಾನಿಯಾಗಿದೆ.208.24 ಕೋಟಿ ರೂ. ಪರಿಹಾರವನ್ನು ಹಾನಿಗೊಳಗಾದ 2.27 ಲಕ್ಷ ರೈತರಿಗೆ ವಿತರಿಸಲಾಗಿದೆ.

ಈ ನೆಟೆರೋಗ ಇರುವ ಬೇಳೆಯಲ್ಲಿ ಇಳುವರಿ ಕಡಿಮೆ ಆಗುತ್ತಿದೆ ಮತ್ತು ಕಾಳುಗಳ ಗಾತ್ರ, ತೂಕದಲ್ಲೂ ಇಳಿಕೆಯಾಗುತ್ತಿದೆ.


ಕಲಬುರಗಿ (Kalaburgi) ಜಿಲ್ಲೆಯಲ್ಲಿ 1.29 ಲಕ್ಷ ಹೆಕ್ಟೇರ್ ತೊಗರಿ ಜತೆಗೆ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ಗಳಲ್ಲಿ ಸುರಿದ ಮಳೆಯಿಂದಾಗಿ ಉದ್ದು 7 ಸಾವಿರ,

ಹೆಸರು ಬೇಳೆ 11 ಸಾವಿರ,ಮೆಕ್ಕೆಜೋಳ 300, ಸೋಯಾಬಿನ್ 8 ಸಾವಿರ,ಸೂರ್ಯಕಾಂತಿ 621, ಹತ್ತಿ 24 ಸಾವಿರ ಸೇರಿ 1.80 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ.

ರಶ್ಮಿತಾ ಅನೀಶ್

Exit mobile version